ಹುಧಾ ಪೊಲೀಸ್ ಕಮೀಷನ ರೇಟ್ನಲ್ಲಿ ಪಿಸಿ, ಎಚ್ ಸಿ, ಎಎಸ್ ಐ ಸರ್ಜರಿಗೆ 198 ಸಿಬ್ಬಂದಿ ಕೌನ್ಸಿಲಿಂಗ್ ಪಟ್ಟಿ

Spread the love

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್‌ನಲ್ಲಿ ಮೇಜರ್ ಸರ್ಜರಿಗೆ ಕಮಿಷನರ್ ಲಾಬೂರಾಮ್ ಮುಂದಾಗಿದ್ದು ಗುರುವಾರ ಬಹುತೇಕ ಸಿಬ್ಬಂದಿಗಳ ವರ್ಗಾವಣೆ ಪಟ್ಟಿ ತಯಾರಾಗಿದೆ.


ವಿವಿಧ ಠಾಣೆಗಳಲ್ಲಿ 6 ರಿಂದ 7 ವರ್ಷಗಳಿಂದ ಬೀಡು ಬಿಟ್ಟಿರುವ ಕಾನ್‌ಸ್ಟೆಬಲ್, ಹವಾಲ್ದಾರ್, ಎಎಸ್ಐ, ಎಸ್ಐಗಳ ವರ್ಗಾವಣೆಗೆ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಈ ಮೊದಲು ಆಯುಕ್ತರು ನಾಲ್ಕು ವರ್ಷ ಹಾಗೂ ಅದಕ್ಕಿಂತ ಹೆಚ್ಚು ವರ್ಷ‌ ಸೇವೆ ಸಲ್ಲಿಸಿರುವ ಎಲ್ಲ ಸಿಬ್ಬಂದಿಯ ಮಾಹಿತಿ ನೀಡುವಂತೆ ಎಸಿಪಿ ಹಾಗೂ ಠಾಣೆಗಳ ಇನ್‌ಸ್ಪೆಕ್ಟರ್‌‌ಗಳಿಗೆ ಸೂಚಿಸಿದ್ದರು. 4 ರಿಂದ 5 ವರ್ಷ ದವರನ್ನು ಮಾಡಿದರೆ ಸಿಬ್ಬಂದಿ ಹೆಚ್ಚಾಗುತ್ತಾರೆ ಎನ್ನುವ ಕಾರಣಕ್ಕೆ ಈಗ ಅದು ,6 ರಿಂದ 7 ವರ್ಷಗಳ ಕಾಲ ಒಂದೇ ಠಾಣೆಯಲ್ಲಿ ಠಿಕಾಣೆ ಹೂಡಿರುವವರನ್ನ ಮಾತ್ರ ವರ್ಗಾವಣೆ ಕೌನ್ಸಿಲಿಂಗಿಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.
ಕೇವಲ ನಾಲ್ಕು ದಿನಗಳಲ್ಲಿ ಪಟ್ಟಿ ತಯಾರು ಮಾಡಿ ಕಳುಹಿಸಿದ ಬೆನ್ನಲ್ಲೇ ಈಗ 198 ಸಿಬ್ಬಂದಿ ಪಟ್ಟಿ ತಯಾರಾಗಿದೆ.


ಅವಳಿ ನಗರದಲ್ಲಿ ನಾಲ್ಕು ಸಂಚಾರ ಪೊಲೀಸ್ ಠಾಣೆಗಳಿದ್ದು, ಅವುಗಳಲ್ಲಿ 40ಕ್ಕೂ ಹೆಚ್ಚು ಸಿಬ್ಬಂದಿ 10 ವರ್ಷಗಳಿಗಿಂತಲೂ ಹೆಚ್ಚು ಕಾಲ ಒಂದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲಿಂದಲೇ ವೃತ್ತಿ ಬದುಕು ಆರಂಭಿಸಿರುವ ಅವರು, ಹವಾಲ್ದಾರ್, ಎಎಸ್ಐ, ಎಸ್ಐ ಆಗಿ ಪದೋನ್ನತಿ ಹೊಂದಿದ್ದಾರೆ. ಕಮಿಷನರೇಟ್‌ನ 14 ಠಾಣೆಗಳಲ್ಲಿಯೂ ನಾಲ್ಕು ವರ್ಷಕ್ಕಿಂತ ಮೇಲ್ಟಟ್ಟವರಿದ್ದಾರೆ.
ಒಂದೇ‌ ಠಾಣೆಯಲ್ಲಿ ಬಹಳ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಸ್ಥಳೀಯವಾಗಿ ಹಿಡಿತ ಸಾಧಿಸಿದ್ದಾರೆ. ಕೆಲವು ಕಾನೂನುಬಾಹಿರ ಚಟುವಟಿಕೆಗಳಿಗೆ ಪರೋಕ್ಷವಾಗಿ ಬೆಂಬಲ ದೊರೆಯುತ್ತಿದೆ. ಸಂಚಾರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲವು ಸಿಬ್ಬಂದಿ ಹಾಗೂ ಅಧಿಕಾರಿಗಳ ಕರ್ತವ್ಯಲೋಪ ಇತ್ತೀಚೆಗೆ ಕಮಿಷನರ್ ಗಮನಕ್ಕೂ ಬಂದಿತ್ತು. ಅಲ್ಲದೆ, ಸಾರ್ವಜನಿಕರು ಹಾಗೂ ಕೆಲ ಜನಪ್ರತಿನಿಧಿಗಳು ಸಹ ಅಂತವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಲಾಖೆಗೆ ದೂರು ಸಹ ಹಲವಾರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಮಿಷನರ್ ಅಂತಹ ಸಿಬ್ಬಂದಿ ಮಾಹಿತಿ ಪಡೆದು ಆಂತರಿಕ ವರ್ಗಾವಣೆಗೆ ನಿರ್ಧರಿಸಿದ್ದಾರೆ ಎಂದು ಸಹ ತಿಳಿದು ಬಂದಿದೆ.
ಕಂಪ್ಯೂಟರ್‌ ಆಪರೇಟಿಂಗ್‌, ಅಪರಾಧ ವಿಭಾಗ, ಕೋರ್ಟ್‌, ಬರಹಗಾರ, ವಾಹನ ತಪಾಸಣೆ ಎನ್ನುತ್ತಿದ್ದವರಿಗೆ, ಕಮಿಷನರ್‌ ಪತ್ರ ಅಸಮಾಧಾನಕ್ಕೆ ಕಾರಣವಾಗಿದೆ. ಕಮಿಷನರ್ ಯಾವ ಠಾಣೆ, ಯಾವ ವಿಭಾಗಕ್ಕೆ ನಿಯೋಜನೆ ಮಾಡುತ್ತಾರೋ ಎನ್ನುವ ಆತಂಕ ಶುರುವಾಗಿದ್ದು ಈ ಕುರಿತು ಶುಕ್ರವಾರ ಸಂಜೆ ವೇಳೆಗೆ ಯಾರು ಯಾವ ಠಾಷೆಗೆ ಎಂದು ಗೊತ್ತಾಗಲಿದೆ.


Spread the love

Leave a Reply

error: Content is protected !!