ಹುಬ್ಬಳ್ಳಿ : ಸಿ. ಕೃಷ್ಣಾಯ್ ಚೆಟ್ಟಿ ಗ್ರೂಪ್ ಆಫ್ ಜ್ಯುವಲರ್ಸ್ ವತಿಯಿಂದ ಬಂಗಾರ, ವಜ್ರ ಹಾಗೂ ಬೆಳ್ಳಿ ವಸ್ತುಗಳ ಮಾರಾಟ ಹಾಗೂ ಪ್ರದರ್ಶನದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಉದ್ಘಾಟಿಸಿದರು.
ನಗರದ ಖಾಸಗಿ ಹೊಟೇಲವೊಂದರಲ್ಲಿ ಆಯೋಜಿಸಿದ್ದ, ಪ್ರದರ್ಶನದಲ್ಲಿ ಮಾತನಾಡಿದ ಅವರು ಈ ಪ್ರದರ್ಶನ ಹಾಗೂ ಮಾರಾಟದ ಸದುಪಯೋಗವನ್ನು ಚಿನ್ನಾಭರಣ ಪ್ರೀಯರು ಪಡೆದುಕೊಳ್ಳಲಿ ಎಂದರು.
ಇನ್ನೂ ಗ್ರೂಪ್ ಆಪ್ ಜ್ಯುವೇಲರ್ಸ್ ನ ಸಿಬ್ಬಂದಿ ಮಾತನಾಡಿ, ಹು-ಧಾ ಅವಳಿನಗರ ಜನತೆಯ ಅಭಿರುಚಿಗೆ ತಕ್ಕಂತೆ ಪ್ರದರ್ಶನ ಹಾಗೂ ಮಾರಾಟವನ್ನು ಇಂದಿನಿಂದ ದಿ. ೧೯ ರ ವರೆಗೆ ಏರ್ಪಡಿಸಲಾಗಿದೆ.
ರಿಯಾಯಿತಿ ಆಧಾರದ ಮೇಲೆ ಈ ಪ್ರದರ್ಶನವನ್ನು ನಡೆಯಲಿದ್ದು, ಚಿನ್ನಾಭರಣ ಪ್ರೀಯರಿಗೆ ಇದು ಸದವಕಾಶ ಎಂದರು.
ಚಿನ್ನಾಭರಣ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಶಿಲ್ಪಾ ಶೆಟ್ಟರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಮಹಿಳೆಯರಿಗೆ ಚಿನ್ನಾಭರಣ ಅಂದರೇ ಸಹಜವಾಗಿಯೇ ಇಷ್ಟ. ಈ ರಿಯಾಯಿತಿ ದರದಲ್ಲಿನ ಚಿನ್ನಾಭರಣದ ಪ್ರದರ್ಶನಕ್ಕೆ ಆಗಮಿಸಿ ಖರೀದಿಸಬಹುದು ಎಂದು ಚಿನ್ನಾಭರಣ ಪ್ರಿಯರಿಗೆ ಸಲಹೆ ನೀಡಿದರು.
