ಹುಬ್ಬಳ್ಳಿ; ಬಿಜೆಪಿ ನಾಯಕ ಸುಬ್ರಹ್ಮಣ್ಯಸ್ವಾಮಿ ಅನಗತ್ಯವಾಗಿ ಇನ್ನೊಬ್ಬರ ಮೇಲೆ ಆರೋಪ ಮಾಡುವುದೇ ಒಂದು ಉದ್ಯೋಗವಾಗಿದೆ ಎಂದು ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರ ಗಂಗಾಧರ ದೊಡ್ಡವಾಡ ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಗ್ರಾಮದಲ್ಲಿ ಮಾತನಾಡಿದ ಅವರು,
ಪ್ರಜಾಪ್ರಭುತ್ವ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಭಾರತೀಯ ಜನತಾ ಪಕ್ಷ ಮಾಡುತ್ತಿರುವುದು ಸರಿಯಲ್ಲ.
ಬಿಜೆಪಿಯವರಿಗೆ ಅಧಿಕಾರದ ಮದ ಹೆಚ್ಚಾಗಿದ್ದು, ಪ್ರಜಾಪ್ರಭುತ್ವ ಮತ್ತು ನಾಗರಿಕ ಹಕ್ಕುಗಳ ಹತ್ತಿಕ್ಕುವ ಕೆಲಸ ಮಾಡುತ್ತಿದ್ಧಾರೆ. ಅವರಿಗೆ ಸಂವಿಧಾನ ಗೊತ್ತಿಲ್ಲ, ಮೂಲಭೂತ ಹಕ್ಕುಗಳ ಬಗ್ಗೆ ಗೊತ್ತಿಲ್ಲ. ಕಾಂಗ್ರೆಸ್ ಸ್ವಾತಂತ್ರ್ಯ ಪೂರ್ವದಲ್ಲಿನ ಪಕ್ಷ.
ಬಿಜೆಪಿಯವರು ಈ ಹಿಂದಿನ ತುರ್ತು ಪರಿಸ್ಥಿತಿ ಬಗ್ಗೆ ಮಾತನಾಡುತ್ತಾರೆ. ಈಗ ಅವರೇ ಪ್ರಜಾಪ್ರಭುತ್ವವನ್ನೇ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಇದೇನು ಪ್ರಜಾಪ್ರಭುತ್ವವೇ?, ಇದೇನು ಸರ್ವಾಧಿಕಾರವೇ ಗೊತ್ತಾಗುತಿಲ್ಲ.
ಇಡಿ ತನಿಖೆ ಮಾಡಲಿ ಅಭ್ಯಂತರವಿಲ್ಲ. ಆದರೆ, ಮುಚ್ಚಿರುವ ಪ್ರಕರಣ ಮತ್ಯಾಕೆ ರೀಓಪನ್ ಮಾಡಿದ್ದಾರೆ. ದ್ವೇಷದ ಕಾರಣಕ್ಕೆ ಈ ಪ್ರಕರಣ ಓಪನ್ ಮಾಡಿದರೆ, ಪ್ರತಿಭಟನೆ ಮಾಡಬೇಕಲ್ಲವಾ ಎಂದು ಕೇಳಿದರು. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಭಾರತೀಯ ಜನತಾ ಪಕ್ಷ ಹೆಚ್ಚು ಒತ್ತು ಕೊಡಲಿ ಅದನ್ನು ಬಿಟ್ಟು ಇಡಿ, ಐಟಿ ಯಂತಹ ಇಲಾಖೆಯ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಮಾಡುತ್ತಿದೆ ಎಂದು ಕಿಡಿ ಕಾರಿದರು.
