ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮನೆ ಬಳಿ ಬಿಜೆಪಿ ಕಾರ್ಯಕರ್ತರು ಚಡ್ಡಿ ಆಂದೋಲನ ನಡೆಸಿದರು. ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಬೆಂಗಳೂರಿನ ಕುಮಾರ ಪಾರ್ಕ್ ಈಸ್ಟ್ ಬಳಿಯ ಸಿದ್ದರಾಮಯ್ಯ ಸರ್ಕಾರಿ ಮನೆ ಬಳಿ ಚಡ್ಡಿ ಪ್ರದರ್ಶಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿದ ಕಾರ್ಯಕರ್ತರು ಚಡ್ಡಿಯನ್ನು ಪ್ರದರ್ಶಿಸಿದರು. ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಸಿದ್ದರಾಮಯ್ಯ ಮನೆಯ ಸ್ವಲ್ಪ ಅಂತರದಲ್ಲೇ ತಡೆದು ನಿಲ್ಲಿಸಿದರು. ಬಳಿಕ ಛಲವಾದಿ ನಾರಾಯಣ ಸ್ವಾಮಿ ಸೇರಿದಂತೆ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.ಚಡ್ಡಿ ಮಾನವ ಕುಲದ ಗೌರವ ಕಾಪಾಡುವ ಸಂಕೇತಇದಕ್ಕೂ ಮೊದಲು ಮಾತನಾಡಿದ ಅವರು, ಚಡ್ಡಿ ಹಾಕುವವರು ಮಿಲಿಟರಿಯಲ್ಲೂ ಇದ್ದಾರೆ, ಪೊಲೀಸರಲ್ಲೂ ಇದ್ದಾರೆ, ರೈತರೆಲ್ಲರೂ ಹಾಕೋದು ಚಡ್ಡಿ. ಚಡ್ಡಿ ಹಾಕುವ ಎಲ್ಲರನ್ನೂ ಸಿದ್ದರಾಮಯ್ಯ ಅಪಮಾನ ಮಾಡಿದ್ದಾರೆ ಎಂದು ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರು ಚಡ್ಡಿ ಸುಡುವ ಕಾರ್ಯಕ್ರಮ ಮಾಡುತ್ತೇವೆ ಅಂದಿದ್ದರು. ಅವರು ಯಾವ ಕಾರಣಕ್ಕೆ ಆ ಹೇಳಿಕೆ ನೀಡಿದ್ದಾರೆ?. ಆರ್ಎಸ್ಎಸ್ ಕೂಡ ಈಗ ಚಡ್ಡಿಯಲ್ಲಿ ಇಲ್ಲ. ಆರ್ಎಸ್ಎಸ್ನವರು ಪ್ಯಾಂಟ್ ಹಾಕಲು ಶುರುಮಾಡಿದ್ದಾರೆ. ಚಡ್ಡಿ ಅನ್ನೋದು ಮಾನವ ಕುಲದಗೌರವ ಕಾಪಾಡುವ ಸಂಕೇತವಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.
Check Also
ಹಸು ಕೆಚ್ಚಲು ದುರ್ಘಟನೆಯಲ್ಲಿ ಜಮೀರ್ ಅಹ್ಮದ್ ನಾಟಕ ರಚನೆ ಮಾಡ್ತಿದ್ದಾರೆ – ಹೊಸ ಬಾಂಬ್ ಸಿಡಿಸಿದ ಮುತಾಲಿಕ್
Spread the loveಹುಬ್ಬಳ್ಳಿ: ಬೆಂಗಳೂರಿನಲ್ಲಿ ನಡೆದ ಘಟನೆ ಅತ್ಯಂತ ಶೋಚನೀಯ. ಸಚಿವ ಜಮೀರ್ ಅಹ್ಮದ್ ನಾಟಕ ರಚನೆ ಆಡುತ್ತಿದ್ದಾರೆ ಎಂದು …