ಬೆಂಗಳೂರು: ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಹುದ್ದೆಗೆ ಬಿ.ಜೆ.ಪುಟ್ಟಸ್ವಾಮಿ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದು, ಸಂಸಾರಕಿ ಜೀವನದಿಂದ ಆಧ್ಯಾತ್ಮಿಕ ಬದುಕಿನತ್ತ ಸಾಗುವುದಾಗಿ ತಿಳಿಸಿದ್ದಾರೆ. ಈ ಮೂಲಕ 50 ವರ್ಷಗಳ ರಾಜಕೀಯ ಜೀವನಕ್ಕೆ ವಿದಾಯ ಹೇಳಿದ್ದಾರೆ.ರಾಜೀನಾಮೆ ಶ್ರೀಲೌಕಿಕ ಜೀವನದಿಂದ ಆಧ್ಯಾತ್ಮಿಕದತ್ತ ಸಾಗುವುದಾಗಿ ಪ್ರಕಟಿಸಿದ್ದಾರೆ. ಪೀಠಾಧಿಪತಿಯಾಗಲಿರುವ ಪುಟ್ಟಸ್ವಾಮಿ, ಮೇ 6ರಂದು ಸನ್ಯಾಸ ದೀಕ್ಷೆ ಪಡೆಯುವರು. ಮೇ 15 ರಂದು ಪಟ್ಟಾಭಿಷೇಕ ನಡೆಯಲಿದೆ. ನೆಲಮಂಗಲ ಸಮೀಪವಿರುವ ಈ ಮಠಕ್ಕೆ ಪೀಠಾಧಿಪತಿಯಾಗಲಿದ್ದು, ರಾಜರಾಜೇಶ್ವರಿ ಜಯೇಂದ್ರ ಸ್ವಾಮೀಜಿ ದೀಕ್ಷೆ ನೀಡಲಿದ್ದಾರೆ.
Check Also
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಸಬಲೀಕರಣದ ಮುಖ್ಯ ಉದ್ದೇಶ – ರಾಜಣ್ಣ ಕೊರವಿ
Spread the loveಹುಬ್ಬಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಸಬಲೀಕರಣದ ಮುಖ್ಯ ಉದ್ದೇಶ ಆಗಿದೆ ಎಂದು ಶ್ರೀ …