Breaking News

ಕರ್ನಾಟಕದ ನೆರೆಹೊರೆ ರಾಜ್ಯಗಳಲ್ಲಿ ಕೋವಿಡ್​ ಸೋಂಕಿತರ ಸಂಖ್ಯೆ ಏಕಾಏಕಿ ಹೆಚ್ಚಳ

Spread the love

ಮುಂಬೈ: ಕರ್ನಾಟಕದ ಅಕ್ಕಪಕ್ಕದ ರಾಜ್ಯಗಳಲ್ಲಿ ಕೋವಿಡ್​ ಸೋಂಕಿತರ ಸಂಖ್ಯೆ ಫೆಬ್ರವರಿಯಿಂದ ನಿಧಾನಗತಿಯಲ್ಲಿ ಏರಿಕೆ ಕಂಡು ಬರುತ್ತಿದೆ. ಮಹಾರಾಷ್ಟ್ರದಲ್ಲಿ ಇಂದು 1,081 ಹೊಸ ಪ್ರಕರಣ ಪತ್ತೆಯಾಗಿದೆ. ಫೆಬ್ರವರಿ 24 ರ ನಂತರ ದೈನಂದಿನ ಅತ್ಯಧಿಕ ಏರಿಕೆ ಇದಾಗಿದೆ ಎಂದು ಮಹಾರಾಷ್ಟ್ರ ರಾಜ್ಯ ಆರೋಗ್ಯ ಇಲಾಖೆ ಬುಲೆಟಿನ್‌ನಲ್ಲಿ ತಿಳಿಸಿದೆ.
ಇತ್ತ ಕೇರಳದಲ್ಲಿ 1370 ಮಂದಿಗೆ ಸೋಂಕು ದೃಢವಾಗಿದೆ. ಸೋಂಕಿನಿಂದ 630 ಗುಣಮುಖರಾಗಿದ್ದಾರೆ. ಆದರೆ 6 ಸಾವುಗಳು ಸಂಭವಿಸಿವೆ. ಕರ್ನಾಟಕ ಗಡಿ ಹಂಚಿಕೊಂಡಿರುವ ರಾಜ್ಯಗಳಲ್ಲಿ ಸೋಂಕಿನ ಸಂಖ್ಯೆ ಏರಿಕೆ ಆಗುತ್ತಿರುವುದು ಮತ್ತೆ ಭೀತಿಗೆ ಕಾರಣವಾಗಿದೆ. ಮೊದಲನೇ ಮತ್ತು ಎರಡನೇ ಅಲೆಯಲ್ಲಿ ಪಕ್ಕದ ರಾಜ್ಯಗಳಿಂದಾದ ಸಮಸ್ಯೆಯನ್ನು ರಾಜ್ಯ ಮರೆಯುವಂತಿಲ್ಲ.ಕೇರಳದಲ್ಲಿ ಈವರೆಗೆ 65,59,623 ಪ್ರಕರಣಗಳು ದಾಖಲಾಗಿದ್ದರೆ, 6,129 ಸಕ್ರಿಯ ಪ್ರಕರಣಗಳಿವೆ. ಮಹಾರಾಷ್ಟ್ರದಲ್ಲಿ 78,88,167 ಕ್ಕೆ ಮತ್ತು 1,47,860 ಕ್ಕೆ ಸೋಂಕಿತರ ಸಂಖ್ಯೆ ಏರಿದೆ. ಆದರೆ ಕರ್ನಾಟಕ ರಾಜ್ಯದ ಗಡಿ ಪ್ರದೇಶದಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಈಗ ಕರ್ನಾಟಕದಲ್ಲಿ ಗಡಿಯಲ್ಲಿ ಈಗ ಸರ್ಕಾರ ಹೈಲರ್ಟ್ ಘೋಷಣೆ ಅಗತ್ಯ.


Spread the love

About gcsteam

    Check Also

    ಚಿಗರಿಯಲ್ಲಿ ಜಿಗಿಯುವವರಿಗೆ ನಾಳೆ ಮಧ್ಯಾಹ್ನ 1 ಗಂಟೆಯಿಂದ 4 ಗಂಟೆಯವರೆಗೆ ಬಂದ್

    Spread the loveಹುಬ್ಬಳ್ಳಿ: ಮಾರ್ಚ್ 1ರಂದು ಶುಕ್ರವಾರ ಧಾರವಾಡದ ಐ.ಐ.ಟಿ. ಕ್ಯಾಂಪಸ್ ನಲ್ಲಿ ವಿವಿಧ ಸೌಲಭ್ಯಗಳ ಉದ್ಘಾಟನೆಗಾಗಿ ಭಾರತದ ಗೌರವಾನ್ವಿತ …

    Leave a Reply