Breaking News

2023-24 ನೇ ಸಾಲಿಗೆ ₹ 92.37 ಕೋಟಿ ಬಜೆಟ್‍ಗೆ ಅನುಮೋದನೆ

Spread the love

ಧಾರವಾಡ:ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ಮಾರ್ಚ್ 1 ರಂದು ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ಅಧ್ಯಕ್ಷತೆಯಲ್ಲಿ 2023-24 ನೇ ಸಾಲಿನ ಆಯವ್ಯಯ ಸಭೆ ಹಾಗೂ ಮಾಸಿಕ ಸಭೆ ಜರುಗಿತು.
ಸಭೆಯಲ್ಲಿ ಒಟ್ಟು 92.37 ಕೋಟಿ ರೂ.ಗಳ ಅಂದಾಜು ಆಯವ್ಯಯದ ಬಗ್ಗೆ ಚರ್ಚಿಸಿ, ಅಂತಿಮವಾಗಿ 2024 ರ ಮಾರ್ಚ್ ಅಂತ್ಯಕ್ಕೆ ಉಳಿಯಬಹುದಾದ ಅಂದಾಜು 8.25 ಲಕ್ಷ ರೂ. ಗಳ ಉಳಿತಾಯ ಬಜೆಟ್‍ಗೆ ಅನುಮೋದನೆ ನೀಡಲಾಯಿತು.
ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಬಜೆಟ್‍ದಲ್ಲಿ ಇದೆ ಪ್ರಥಮ ಬಾರಿಗೆ ಉದ್ಯಾನವನ, ಕೆರೆಗಳ ಅಭಿವೃದ್ಧಿಗೆ ಹಣ ಮೀಸಲಿಡಲಾಗಿದೆ. ಪ್ರಾಧಿಕಾರ ವ್ಯಾಪ್ತಿಯಲ್ಲಿ ಒಟ್ಟು 54 ಉದ್ಯಾನವನಗಳ ಅಭಿವೃದ್ಧಿಗಾಗಿ ಒಟ್ಟು 16.10ಕೋಟಿ ರೂ. ಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಮತ್ತು ಪ್ರಾಧಿಕಾರ ವ್ಯಾಪ್ತಿಯಲ್ಲಿ ಬರುವ ನಾಗಶೆಟ್ಟಿಕೊಪ್ಪ ಕೆರೆ, ಕೆಂಪಗೇರಿ ಕೆರೆ, ಸಾದನಕೇರಿ ಕೆರೆ ಹಾಗೂ ನುಗ್ಗಿಕೇರಿ ಕೆರೆಗಳನ್ನು ಅಭಿವೃದ್ಧಿ ಪಡಿಸಲು ಒಟ್ಟು 18.90 ಕೋಟಿ.ರೂ.ಗಳ ಅನುದಾನ ನೀಡಲು ತೀರ್ಮಾನಿಸಿ, ಒಪ್ಪಿಗೆ ನೀಡಲಾಗಿದೆ.
ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ|| ಸಂತೋಷ ಕುಮಾರ ಬಿರಾದಾರ ಸ್ವಾಗತಿಸಿ ವಿಷಯ ಮಂಡಿಸಿದರು.
ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ, ಪ್ರಾಧಿಕಾರದ ಸದಸ್ಯರಾದ ಸುನಿಲ್ : ಚಂದ್ರಶೇಖರ್ ಗೋಕಾಕ್, ಮೀನಾಕ್ಷಿ ಒಂಟಮೂರಿ, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ|| ಗೋಪಾಲಕೃಷ್ಣ ಬಿ. ಹಾಗೂ ಇತರ ಇಲಾಖೆ ಅಧಿಕಾರಿಗಳು ಇದ್ದರು.


Spread the love

About Karnataka Junction

    Check Also

    ಯರಿಕೋಪ್ಪದಲ್ಲಿನ ” ಬಿಗ್ ಮಿಶ್ರಾ ಕೆಫೆ ” ನಲ್ಲಿ ಗ್ರಾಹಕರಿಗಾಗಿ ಇನ್ನಷ್ಟು ಹೊಸ ಸೇವೆಗಳು 25 ಮೇ ರಿಂದ ಲಭ್ಯ

    Spread the loveಹುಬ್ಬಳ್ಳಿ: ಸಿಹಿ ತಿನಿಸು, ನಮಕೀನ ಮತ್ತು ಬೇಕರಿ ಕ್ಷೇತ್ರದಲ್ಲಿ ತನ್ನದೇ ಆದ ಹೆಸರನ್ನು ಮಾಡಿರುವ ‘ಬಿಗ್ ಮಿಶ್ರಾ …

    Leave a Reply

    error: Content is protected !!