Breaking News

ಕುಂದಗೋಳ- ನವಲಗುಂದ ಕೈ ಟಿಕೆಟ್‌ ನಲ್ಲಿ ಮುಂದುವರಿದ ಗೊಂದಲ

Spread the love

ಹುಬ್ಬಳ್ಳಿ:ರಾಜ್ಯ ಸಾರ್ವತ್ರಿಕ
ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಎರಡನೆಯ ಪಟ್ಟಿಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದು ಏಪ್ರಿಲ್‌ 8 ಅಥವಾ 10ಕ್ಕೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಆದರೆ ಧಾರವಾಡ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಕುಂದಗೊಳ ಹಾಗೂ ನವಲಗುಂದ ಕ್ಷೇತ್ರಗಳಿಗೆ ಟಿಕೆಟ್‌ ಅಂತಿಮಗೊ ಳಿಸುವುದು ಕಾಂಗ್ರೆಸ್‌ ಹೈಕಮಾಂಡ್‌ಗೆ ದೊಡ್ಡ ಸವಾಲಾಗಿದೆ.
ಈ ಕುರಿತು ಒಂದು ಸ್ಪೆಷಲ್ ಸ್ಟೋರಿ ಇಲ್ಲಿದೆ.
ಧಾರವಾಡ ಜಿಲ್ಲೆಯ ಕುಂದಗೋಳ ಹಾಗೂ ನವಲಗುಂದ ವಿಧಾನ ಎರಡು ಕ್ಷೇತ್ರಗಳು ಜಾತೀಯ ಸಮೀಳಕಳರಣ ಜೊತೆ ಜೊತೆ ಸಾಕಷ್ಟು ಗೊಂದಲ ಇಲ್ಲಿದೆ. ಮೊದಲಿನಿಂದಲೂ ಕಾಂಗ್ರೆಸ್ ನಲ್ಲಿ ಚುನಾವಣೆ‌ ಬಂದಾಗ ಅಭ್ಯರ್ಥಿಗಳ ಆಯ್ಕೆಯಲ್ಲಿ ಸಾಕಷ್ಟು ಪರಾರ್ಮಶೆ ಮಾಡುವ ಕಾಲ ಬಂದಿದೆ.‌ಈಗ ಅದೇ ಸಮಯ ಬಂದಿದ್ದು ಕುಂದಗೋಳ ಹಾಗೂ ನವಲಗುಂದ ವಿಧಾನ ಸಭಾ ಎರಡೂ ಕ್ಷೇತ್ರಗಳು ಒಂದಕ್ಕೊಂದು ತಳಕು ಹಾಕಿಕೊಂಡಿವೆ. ಈ ಎರಡರಲ್ಲಿ ಕನಿಷ್ಠ ಒಂದು ಕ್ಷೇತ್ರದಲ್ಲಾದರೂ ಕುರುಬ ಸಮುದಾಯಕ್ಕೆ ಟಿಕೆಟ್‌ ಕೊಡಲೇಬೇಕೆಂಬ ಅಘೋಷಿತ ನಿಯಮ ಕಾಂಗ್ರೆಸ್ಸಿನಲ್ಲಿದೆ. ಆದರೆ ಮಾಜಿ ಸಚಿವ ಕೆ.ಎನ್ ಗಡ್ಡಿ ಮಾತ್ರ ನನಗೆ ಟಿಕೇಟ್ ಕೊಡಬೇಕು ಇಲ್ಲದಿದ್ದರೆ ನಮ್ಮ ಕಾರ್ಯಕರ್ತರ ಜೊತೆಗೆ ಮಾತನಾಡಿ ಮುಂದಿನ ಹೆಜ್ಜೆ ಇಡಲಾಗುವುದು ಎಂದಿದ್ದಾರೆ.
ಕುಂದಗೋಳದಲ್ಲಿ ಹಾಲಿ ಶಾಸಕಿ ಕುಸುಮಾವತಿ ಶಿವಳ್ಳಿ ಕುರುಬ ಸಮುದಾಯಕ್ಕೆ ಸೇರಿದವರು. ಇವರಿಗೆ ಟಿಕೆಟ್‌ ಕೊಡುವುದು ಬೇಡ ಎಂಬ ಬೇಡಿಕೆ ಅಲ್ಲಿನ ಒಂದು ಬಣದ್ದು. ಕುಸುಮಾವತಿ ಶಿವಳ್ಳಿಗೆ ಟಿಕೆಟ್‌ ಕೊಡುವುದನ್ನು ಬಿಟ್ಟರೆ ಮಾಜಿ ಶಾಸಕ ಹಾಗೂ ಪ್ರಬಲ ಪಂಚಮಸಾಲಿ ಸಮಾಜದ ನಾಯಕ ಮಲ್ಲಿಕಾರ್ಜುನ ಅಕ್ಕಿ ಅವರಿಗೆ
ಕೊಡಬೇಕು ಎಂಬ ಚಿಂತೆ ಹೈಕಮಾಂಡ್‌ನಲ್ಲಿ ಶುರುವಾಗಿದೆ. ಇನ್ನು 16 ಜನ ಆಕಾಂಕ್ಷಿಗಳು ಇಲ್ಲಿದ್ದಾರೆ. ಇದರಲ್ಲಿ ಕುಸುಮಾವತಿ ಶಿವಳ್ಳಿ ಅಥವಾ ಅವರ ಕುಟುಂಬದ ಸದಸ್ಯರ ಪೈಕಿ ಒಬ್ಬರು ಹಾಗೂ ಲಿಂಗಾಯತ ಸಮುದಾಯಕ್ಕೆ ಸೇರಿರುವ, ಉಪಚುನಾವಣೆಯಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಿರುವ ಮಲ್ಲಿಕಾರ್ಜುನ ಅಕ್ಕಿ
ಹೆಸರು ಮುಂಚೂಣಿಗೆ ಬಂದಿವೆ. ಇನ್ನು ಚಂದ್ರಶೇಖರ ಜುಟ್ಟಲ್‌, ರಮೇಶ ಕೊಪ್ಪದ ಹೆಸರು ಕೂಡ ಕೇಳಿ ಬರುತ್ತಿದೆ. ಆದರೂ ಶಿವಳ್ಳಿ ಕುಟುಂಬದ ಸದಸ್ಯ ಅಥವಾ ಪ್ರಕಾಶಗೌಡ ಪಾಟೀಲ ಮಧ್ಯೆ ತೀವ್ರ ಪೈಪೋಟಿ ನಡೆದಿದೆ. ನಾನು ಸಹ ಎರಡು ಸಲ ಈ ಕ್ಷೇತ್ರದ ಶಾಸಕನಾಗಿ ಅನೇಕ ಜನಪರ ಕಾರ್ಯ ಮಾಡಿದ್ದು ನನಗೆ ಹೈಕಮಾಂಡ್ ಟಿಕೇಟ್ ಕೊಡುವ ಭರವಸೆ ಇದೆ ಎನ್ನುತ್ತಾರೆ ಮಾಜಿ ಶಾಸಕ ಹಾಗೂ ಕೈ ಟಿಕೇಟ್ ಪ್ರಬಲ ಆಕಾಂಕ್ಷಿ ಮಲ್ಲಿಕಾರ್ಜುನ ಅಕ್ಕಿ.
ಇನ್ನು ನವಲಗುಂದ ಕ್ಷೇತ್ರದಲ್ಲಿ ರೆಡ್ಡಿ ಸಮುದಾಯಕ್ಕೆ ಸೇರಿದ ಮಾಜಿ ಶಾಸಕ ಎನ್‌.ಎಚ್‌.ಕೋನರಡ್ಡಿ, ಕುರುಬ ಸಮುದಾಯಕ್ಕೆ ವಿನೋದ ಅಸೂಟಿ, ಕೆ.ಎನ್‌.ಗಡ್ಡಿ, ರಾಜಶೇಖರ ಮೆಣಸಿನಕಾಯಿ ಸೇರಿದಂತೆ 9 ಜನ ಆಕಾಂಕ್ಷಿಗಳಿದ್ದಾರೆ. ಇಲ್ಲಿ ಕೋನರಡ್ಡಿ ಹಾಗೂ ಅಸೂಟಿ ಮಧ್ಯೆ ಭಾರಿ ಪೈಪೋಟಿ ನಡೆದಿದೆ.
ಒಂದು ವೇಳೆ ಕುಂದಗೋಳದಲ್ಲಿ ಶಿವಳ್ಳಿ ಕುಟುಂಬಕ್ಕೆ ಟಿಕೆಟ್‌ ಪಕ್ಕಾ ಆದರೆ, ನವಲಗುಂದದಲ್ಲಿ ಕೋನರಡ್ಡಿ ಹಾದಿ ಸುಗಮವಾಗುತ್ತದೆ. ಶಿವಳ್ಳಿ ಕುಟುಂಬಕ್ಕೆ ಕೊಡದೆ ಲಿಂಗಾಯತ ಸಮುದಾಯದ ಪ್ರಕಾಶಗೌಡ ಅಥವಾ ಬೇರೆ ಯಾರಿಗಾದರೂ ಟಿಕೆಟ್‌ ಕೊಟ್ಟರೆ ಇಲ್ಲಿ ವಿನೋದ ಅಸೂಟಿಗೆ ಟಿಕೆಟ್‌ ಕೊಡುವುದು ಅನಿವಾರ್ಯವಾಗುತ್ತದೆ. ಕುರುಬ ಸಮುದಾಯಕ್ಕೆ ಯಾವ ಕ್ಷೇತ್ರಕ್ಕೆ ಟಿಕೆಟ್‌ ಕೊಟ್ಟರೆ ಪಕ್ಷದ ಸ್ಥಾನಗಳನ್ನು ಹೆಚ್ಚಿಸಿಕೊಳ್ಳಬಹುದು ಎಂದು ಅಳೆದು ತೂಗಿ ಪಕ್ಕಾ ಮಾಡಲು ಹರಸಾಹಸ ಪಡುತ್ತಿದೆ.
′ಸದ್ಯದ ಮಾಹಿತಿಯಂತೆ ನವಲಗುಂದ ಕ್ಷೇತ್ರಕ್ಕೆ ಕೋನರಡ್ಡಿ ಹೆಸರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಬಂದಿದೆಯಾದರೂ ಪಟ್ಟಿಬಿಡುಗಡೆಯಾಗುವವರೆಗೂ ನಂಬುವಂತಿಲ್ಲ ಎಂಬ ಮಾತು ಕಾಂಗ್ರೆಸ್‌ನಲ್ಲೇ ಕೇಳಿ ಬರುತ್ತಿದೆ. ಕೋನರಡ್ಡಿ ಹೆಸರು ಅಂತಿಮವಾಗಿರುವುದೇ ನಿಜವಾದರೆ ಕುಂದಗೋಳದಲ್ಲಿ ಶಿವಳ್ಳಿ ಕುಟುಂಬಕ್ಕೆ ಟಿಕೆಟ್‌ ಸಿಗುವುದು ಗ್ಯಾರಂಟಿ ಎನ್ನಲಾಗುತ್ತದೆ. ಆಗ ಕ್ಷೇತ್ರದಲ್ಲಿನ ಭಿನ್ನಮತವನ್ನು ಯಾವ ರೀತಿ ಶಮನ ಮಾಡಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕೆನ್ನುವುದರ ಬಗ್ಗೆ ಪಕ್ಷದ ಹೈಕಮಾಂಡ್‌ ಯೋಚಿಸಬೇಕಾಗುತ್ತದೆ.


Spread the love

About Karnataka Junction

[ajax_load_more]

Check Also

ನನಗಿಂತ ಭರತ್ ಗೆ ಹೆಚ್ಚು ಮತ ನೀಡಿ ಗೆಲ್ಲಸಿ- ಸಂಸದ ಬಸವರಾಜ ಬೊಮ್ಮಾಯಿ ಮನವಿ

Spread the loveಹುಬ್ಬಳ್ಳಿ: ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದಿದ್ದ ಶಿಗ್ಗಾಂವಿ- ಸವಣೂರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಭಾರತೀಯ ಜನತಾ …

Leave a Reply

error: Content is protected !!