ಕ್ಷುಲಕ ಕಾರಣಕ್ಕಾಗಿ ಯುವಕನೊಬ್ಬನಿಗೆ ಚಾಕು ಇರಿದ ಹುಬ್ಬಳ್ಳಿಯ ಮಂಟೂರ ರಸ್ತೆಯ ಮ್ಯಾಂಗ ನೀಜ್ ಪ್ಲಾಟ್ ನಲ್ಲಿ ನಡೆದಿದೆ.ಡೇವಿಡ್ ಎಂಬುವರಿ ಗೆ 17 ವಯಸ್ಸಿನ ವಿಜಯ ಯಮನೂರಿ ದೇವರ ಮನೆ ಎಂಬಾತ ಚಾಕು ಇರಿದಿದ್ದಾನೆ.ಹೊಟ್ಟೆ ಮತ್ತು ಇತರ ಕಡೆ ಚಾಕು ಇರಿದಿದ್ದು ಸುದ್ದಿ ತಿಳಿದ ಬೆಂಡಿಗೇರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಗೊಂಡ ವಿಜಯ ನನ್ನು ಆಸ್ಪತ್ರೆಗೆ ದಾಖಲು ಮಾಡಿ ಇತ್ತ ಐದೇ ನಿಮಿಷಗಳಲ್ಲಿ ಚಾಕು ಇರಿದು ಎಸ್ಕೇಪ್ ಆಗುತ್ತಿದ್ದ ಆರೋಪಿ ವಿಜಯ ನನ್ನು ಪೊಲೀಸರು ಬಂಧಿಸಿದ್ದಾರೆ ಇನ್ನೂ ಡೇವಿಡ್ ಹಲವಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರಂತೆ. ಬೇರೆಯವರ ಜಗಳ ಬಿಡಿಸಲು ಹೊದ ವಿಜಯ ಸಿಟ್ಟಿನಿಂದ ಡೆವಿಡ್ ಗೆ ಚಾಕುವಿನಿಂದ ಇರಿದಿದ್ದಾನೆ. ಸುಣ್ಣದ ಬಟ್ಟಿಯ ಓಣಿಯಲ್ಲಿ ನಡೆದ ಈ ಒಂದು ಘಟನೆ ಮಂಟೂರ ರಸ್ತೆಯಲ್ಲಿನ ಸುಣ್ಣದ ಬಟ್ಟಿ ಓಣಿಯಲ್ಲಿ ನಡೆದಿದ್ದು ಸಧ್ಯ ದೂರು ದಾಖಲು ಮಾಡಿಕೊಂಡ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ
