ಪ್ರತಾಪುರ; ತಂದೆಯೊಬ್ಬ ತನ್ನ ಮಗನ ಪ್ರಾಣ ಉಳಿಸಲು ಸುಮಾರು 300 ಕಿ.ಮೀ. ಸೈಕಲ್ ತುಳಿದಿರುವ ಘಟನೆ ಜಿಲ್ಲೆಯ ಮಾಲ್ ಪ್ರತಾಪುರದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ದಿಲೀಪ್ ಯಾದವ್ ಕೂಲಿ ಕೆಲಸ ಮಾಡಿಕೊಂಡು ತಮ್ಮ ಕಟುಂಬಸ್ಥರನ್ನು ಸಾಕುತ್ತಿದ್ದಾರೆ. ಅವರ ಐದು ವರ್ಷದ ಮಗ ವಿವೇಕ್ ಥಲಸ್ಸೆಮಿಯಾ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದು ಅನುವಂಶಿಕ ಕಾಯಿಲೆಯಾಗಿದ್ದು, ಈ ಕಾಯಿಲೆಯಿಂದ ಬಳಲುತ್ತಿದ್ದವರ ರಕ್ತದಲ್ಲಿ ಹಿಮೋಗ್ಲೋಬಿನ್ ಉತ್ಪತ್ತಿಯಾಗುವುದಿಲ್ಲ. ಹೀಗಾಗಿ ಅವರಿಗೆ ಪ್ರತಿ ತಿಂಗಳು ರಕ್ತ ಪಡೆಯುವ ಅವಶ್ಯಕತೆ ಇರುತ್ತೆ. ಮಗನಿಗಾಗಿ ಎರಡು ಬಾರಿ 300 ಕಿ.ಮೀ ಸೈಕಲ್ನಲ್ಲಿ ಪ್ರಯಾಣಿಸಿದ ತಂದೆ ಗೊಡ್ಡಾದಿಂದ ಮಗನಿಗಾಗಿ ಎರಡು ಬಾರಿ 300 ಕಿ.ಮೀ ಸೈಕಲ್ನಲ್ಲಿ ಪ್ರಯಾಣಿಸಿದ ತಂದೆ ಗೊಡ್ಡಾ ಸುದ್ದಿ ಅನುವಂಶಿಕ ಕಾಯಿಲೆಮಗನಿಗಾಗಿ ಎರಡು ಬಾರಿ 300 ಕಿ.ಮೀ. ಸೈಕಲ್ ತುಳಿದ ತಂದೆಕಳೆದ ಬಾರಿ ಲಾಕ್ಡೌನ್ ಸಮಯದಲ್ಲಿ ದಿಲೀಪ್ ತಮ್ಮ ಮಗನೊಂದಿಗೆ ದೆಹಲಿಯಲ್ಲಿದ್ದರು. ಅಲ್ಲಿ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ತಮ್ಮ ಮಗ ವಿವೇಕ್ಗೆ ಉಚಿತ ರಕ್ತವನ್ನು ಪಡೆಯುತ್ತಿದ್ದರು. ಇದರಿಂದ ಯಾವುದೇ ಸಮಸ್ಯೆ ಅವರಿಗೆ ಎದುರಾಗಿರಲಿಲ್ಲ. ಆದ್ರೆ ಈ ಬಾರಿ ಲಾಕ್ಡೌನ್ ವೇಳೆ ದೀಪಕ್ ದೆಹಲಿಯಿಂದ ಸ್ವಗ್ರಾಮಕ್ಕೆ ಹಿಂದಿರುಗಿದ್ದರು.ಎ ನಗೆಟಿವ್ ರಕ್ತಕ್ಕಾಗಿ ಗೊಡ್ಡಾ ಜಿಲ್ಲೆಯಲ್ಲಿ ಅಲೆದಾಟ ನಡೆಸಿದರು ಪ್ರಯೋಜನವಾಗಲಿಲ್ಲ. ಮಗನ ಆರೋಗ್ಯ ಕ್ಷೀಣಿಸುತ್ತಾ ಹೋಗುತ್ತಿತ್ತು. ಜಾಮ್ತಾರಾದಲ್ಲಿ ಎ ನಗೆಟಿವ್ ರಕ್ತ ಇರುವುದರ ಬಗ್ಗೆ ತಿಳಿಯಿತು. ಕೂಡಲೇ ಮಗನನ್ನು ಸೈಕಲ್ನಲ್ಲಿ ಕರೆದುಕೊಂಡು ಆಸ್ಪತ್ರೆಗೆ ತೆರಳಿದ್ದೆವು. ಬಳಿಕ ಅಲ್ಲಿಂದ ಮತ್ತೆ ಸೈಕಲ್ ಮೇಲೆಯೇ ಮನೆಗೆ ವಾಪಸ್ ಆದೆವು. ಇದೇ ರೀತಿ ಎರಡು ಬಾರಿ ನಾನು ಮತ್ತು ನನ್ನ ಮಗ ಸೈಕಲ್ನಲ್ಲಿ ಜಮ್ತಾರಾಗೆ ತೆರಳಿದ್ದೇವೆ ಎಂದು ದಿಲೀಪ್ ಹೇಳಿದರು.ಈ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳೀಯ ಶಾಸಕ ದೀಪಕ್ ಪಾಂಡೆ , ದಿಲೀಪ್ ಕುಟಂಬವನ್ನು ಭೇಟಿ ಮಾಡಿದರು. ಬಳಿಕ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಕೂಡ ಈ ಘಟನೆಯ ಸಂಪೂರ್ಣ ವಿಷಯವನ್ನು ಅರಿತುಕೊಂಡು ಜಿಲ್ಲಾಡಳಿತ ಇದರ ಬಗ್ಗೆ ಗಮನಹರಿಸಲು ಸೂಚನೆ ನೀಡಿದ್ದಾರೆ. ಅನುವಂಶಿಕವಲ್ಲದೆ ಈ ರೋಗವು ಗುಣಪಡಿಸಲಾಗದ ಕಾಯಿಲೆಯ ವರ್ಗದಲ್ಲಿಯೂ ಬರುತ್ತದೆ.
ಕೇಲ .ವೈದ್ಯರ ಪ್ರಕಾರ, ಈ ರೋಗವನ್ನು ಸ್ಟೆಮ್ ಸೆಲ್ ಕಸಿ ಮೂಲಕ ಗುಣಪಡಿಸಬಹುದಾಗಿದ್ದು ಇದರ ಅಂದಾಜು ವೆಚ್ಚ 10 ಲಕ್ಷವಾಗುತ್ತದೆ. ಆದರೆ ಇನ್ನು ಕೇಲ ವೈದ್ಯರಿಗೆ ಇದರ ಬಗ್ಗೆ ಸರಿಯಾದ ಮಾಹಿತಿ ಸಿಗುತಿಲ್ಲ.
Check Also
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಶಶಿಕುಮಾರ್ ನೇಮಕ
Spread the loveಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. …