ಭಾವಸಾರ ವ್ಹಿಜನ್ ಇಂಡಿಯಾ ಸಂಸ್ಥೆಯ ಹುಬ್ಬಳ್ಳಿ ಘಟಕದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

Spread the love

ಭಾವಸಾರ ವ್ಹಿಜನ್ ಇಂಡಿಯಾ ಸಂಸ್ಥೆಯ ಹುಬ್ಬಳ್ಳಿ ಘಟಕದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಹುಬ್ಬಳ್ಳಿ : ವಿದ್ಯಾನಗರದ ತಿಮ್ಮಸಾಗರ ದೇವಸ್ಥಾನದ ರಸ್ತೆಯಲ್ಲಿರುವ ಭಾವಸಾರ ಭವನದಲ್ಲಿ ಭಾವಸಾರ ವ್ಹಿಜನ್ ಇಂಡಿಯಾ ಸಂಸ್ಥೆಯ ಹುಬ್ಬಳ್ಳಿ ಘಟಕದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಟೂರಿನ ಹೈಯರ್ ಪ್ರೈಮರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಶಿಕ್ಷಕಿ, 2013 ರಲ್ಲಿ ಶಿಕ್ಷಣ ಪ್ರತಿಷ್ಠಾನದ ಗುರು ಪುರಸ್ಕಾರ ಪಡೆದ, ವಿಜಯಲಕ್ಷ್ಮಿ ಶೆಟ್ಟಿ “ಪರಿಸರಕ್ಕಾಗಿ ನಾರಿ” ಕುರಿತು ಮಾತನಾಡುತ್ತಾ ನಾರಿ ತನ್ನ ಮನೆಯಿಂದಲೂ ಕೂಡ ಪರಿಸರ ಸ್ನೇಹಿಯಾಗಿ ಬದುಕಬಹುದು. ಸುತ್ತ ಮುತ್ತಲಿನ ಪರಿಸರ ಸ್ವಚ್ಛವಾಗಿಡುವುದು, ಗಿಡಗಳನ್ನು ಬೆಳಸಿ ಹಸಿರುಗೋಳಿಸುವುದು. ಮನೆಯಲ್ಲಿ ಪ್ಲಾಸ್ಟಿಕ್ ಗಳ ಕಡಿಮೆ ಬಳಕೆ, ಅನಿವಾರ್ಯ ಸಂಧರ್ಭಗಳಲ್ಲಿ ಉಪಯೊಗಿಸಿದ ಪ್ಲಾಸ್ಟಿಕ್ ಗಳನ್ನು ಸೂಕ್ತ ವಿಲೇವಾರಿ ಮಾಡುವುದು. ಮುಟ್ಟಿನ ಸಮಯದಲ್ಲಿ ಸ್ಯಾನಿಟರಿ ಪ್ಯಾಡಗಳ ಬದಲಾಗಿ ಮುಟ್ಟಿನ ಕಪ್ ಗಳನ್ನ ಉಪಯೋಗಿಸಬಹುದು. ಹಸಿ ಕಸದಿಂದ ಸವಯವ ಗೊಬ್ಬರ ತಯಾರು ಮಾಡವುದು. ಬೆಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರು ಹಾಗೂ ಕಾಳುಗಳನ್ನು ಒದಗಿಸುವುದು. ಸಾಧ್ಯವಾದಷ್ಟು ನೀರು ಹಾಗೂ ವಿಧ್ಯುತ್ ಮಿತ ಬಳಕೆ ಮಾಡಿ ಶಕ್ತಿ ಉಳಿತಾಯ ಮಾಡುವುದು. ಮಕ್ಕಳಿಗೆ ಸ್ವಚ್ಛ, ಹಸಿರು ಪರಿಸರದ ಬಗ್ಗೆ ಮತ್ತು ಉತ್ತಮ ಜೀವನದ ಮೌಲ್ಯಗಳನ್ನ ತಿಳಿಸುವುದು, ಇತ್ಯದಿಯಾಗಿ ಪರಿಸರಕ್ಕೆ ತನ್ನದೆ ಆದ ಕೊಡುಗೆ ನೀಡಬಹುದೆಂದರು.
ಕಾರ್ಯಕ್ರಮದಲ್ಲಿ ಮಹಿಳೆಯರಿಗಾಗಿ ವಿವಿದ ಆಟಗಳ ಸ್ಪರ್ಧೆ ಸಹ ಏರ್ಪಡಿಸಲಾಗಿತ್ತು. ಸ್ಪರ್ದೆಯ ತೀರ್ಪುದಾರರಾಗಿ ಆಗಮಿಸಿದ್ದ ಸಮಾಜ ಸೇವಕಿ ಮಂಗಳ ಸೋನವಾಣೆ ವಿಜೇತರ ಹೆಸರನ್ನು ಘೋಷಿಸಿ, ಬಹುಮಾನ ವಿತರಿಸಿ ಮಾತನಾಡುತ್ತಾ ಮಹಿಳೆಯರು ಇನ್ನೂ ಹೆಚ್ಚು ಹೆಚ್ಚು ಸಮಾಜ ಸೇವೆಗಾಗಿ ಮುಂದೆ ಬರಬೇಕು ಎಂದರು.
ಮೂಲತಹ ಹುಬ್ಬಳ್ಳಿಯವರಾದ, ಸುಮಾರು 35 ವರುಷ ಮುಂಬೈಯಲ್ಲಿ ನೆಲಸಿ, ಪ್ರಸ್ತುತ ಹುಬ್ಬಳ್ಳಿಯಲ್ಲಿ ನೆಲಸಿರುವ ಶ್ರೀಮತಿ ಮಂಗಳ ಸೋನವಾಣೆ ಉತ್ತರಖಂಡದ ಕೇದಾರ, ಬಿಹಾರ, ಉತ್ತರ ಕರ್ನಾಟಕದಲ್ಲಿ ಹಾಗೂ ಇನ್ನೂ ಅನೇಕ ಕಡೆ ಪ್ರವಾಹ ಸಂತ್ರಸ್ತರಿಗಾಗಿ ಸೇವೆ ಸಲ್ಲಿಸಿದ್ದಾರೆ. ಜೈಪುರ, ಮುಂಬೈ ಬ್ಲಾಸ್ಟ್ ಸಂಧರ್ಭದಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಗಾಯಗೊಂಡ ಸಂತ್ರಸ್ತರಿಗೆ ಸೇವೆ ಸಲ್ಲಿಸಿದ್ದಾರೆ. ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತರ ಪರವಾಗಿ ಹೊರಾಡಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸಿದ್ದಾರೆ, ಇನ್ನು ಅನೇಕ ಕಡೆ ಸಮಾಜ ಸೇವೆಯಲ್ಲಿ ತಮ್ಮನು ತಾವು ತೊಡಗಿ ಕೊಂಡಿದ್ದಾರೆ.
ಇದೆ ಸಂಧರ್ಭದಲ್ಲಿ ಅತಿಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸಂಸ್ಥೆಯ ಮಹಿಳಾ ಕಲ್ಯಾಣ ನಿರ್ದೇಶಕಿ ಗಿರಿಜಾ ಮಹೀಂದ್ರಕರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಭಾವಸಾರ ವ್ಹಿಜನ್ ಇಂಡಿಯಾ ಸಂಸ್ಥೆಯ ಹುಬ್ಬಳ್ಳಿ ಘಟಕದ ಅಧ್ಯಕ್ಷರಾದ ರಾಮಚಂದ್ರ ಬೇಂದ್ರೆ, ಕಾರ್ಯದರ್ಶಿ ಸ್ನೇಹಾ ಬೇಧರೆ, ಶಕುಂತಲಾ ಬೆಳಮಕರ, ಸುಮತಾಯಿ ಮಿರಜಕರ, ಶಕುಂತಲಾ ದಾಮೋಧರ, ಪುಷ್ಪ ಮುಧೋಳೆ, ಜಯಶ್ರೀ ಬೆಳಮಕರ, ಲೀಲಾ ಸುತ್ರಾವೆ, ಆಶಾ ನವಲೆ, ಸುಷ್ಮಾ ಮಹೀಂದ್ರಕರ, ರಮಾ ಬೆಳಮಕರ್, ಪಲ್ಲವಿ ರಾಶಿಂಕರ, ಜಯಶ್ರೀ ಪಿಸ್ಸೆ, ಗೀತಾ ಕಪಟಕರ, ಮನೋರಮಾ ಲಾತೂರಕರ, ತಾರಾ ಲೋಖಂಡೆ, ಇನ್ನೂ ಅನೇಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು


Spread the love

Leave a Reply

error: Content is protected !!