ರೂ.8 ಕೋಟಿ ವೆಚ್ಚದಲ್ಲಿ ಧಾರವಾಡ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ನೂತನ ಕಟ್ಟಡ ಉದ್ಘಾಟನೆ
ಹುಬ್ಬಳ್ಳಿ ಮಾ.5: ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ನೂತನ ಕಟ್ಟಡವನ್ನು ರೂ.8 ಕೋಟಿ ವೆಚ್ಚದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಕಾಮಗಾರಿ ವಿಭಾಗ, ಬೆಂಗಳೂರು ಇವರಿಂದ ನಿರ್ಮಾಣ ಮಾಡಲಾಗಿರುತ್ತದೆ. ಸದರಿ ಕಟ್ಟಡದ ವಿಸ್ತೀರ್ಣವು ಕೆಳಅಂತಸ್ತು-7,225 ಚ.ಅ., ನೆಲಮಹಡಿ-8,600 ಚ.ಅ., ಮೊದಲ ಅಂತಸ್ತು-6,987.5 ಚ.ಅ., ಹೀಗೆ ಒಟ್ಟಾರೆ 23,112.5 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುತ್ತದೆ. ನೂತನ ಕಛೇರಿಗೆ ಒಟ್ಟಾರೆ 33 ಜನ ಅಧಿಕಾರಿ ಮತ್ತು ಸಿಬ್ಬಂದಿಗಳ ಹುದ್ದೆಯನ್ನು ಮಂಜೂರು ಮಾಡಲಾಗಿದೆ. ಸನ್ 2023-24 ಸಾಲಿನಲ್ಲಿ ಕಛೇರಿಗೆ ರೂ.14,356.46 ಲಕ್ಷಗಳ ರಾಜಸ್ವ ಸಂಗ್ರಹಣೆಯ ಗುರಿಯನ್ನು ನೀಡಲಾಗಿದ್ದು, ಫೆಬ್ರವರಿ-2024ರ ಅಂತ್ಯದವರೆಗೆ ರೂ.11,221.35 ಲಕ್ಷಗಳ ರಾಜಸ್ವ ಸಂಗ್ರಹಣೆಯನ್ನು ಮಾಡಿ, ಶೇ.85.26% ರಷ್ಟು ಪ್ರಗತಿಯನ್ನು ಸಾಧಿಸಲಾಗಿರುತ್ತದೆ. ರಾಜ್ಯದಲ್ಲಿ ಸಾರಿಗೆ ಇಲಾಖೆಗೆ ಪ್ರಸಕ್ತ ವರ್ಷ 11,500.00 ಕೋಟಿ ರಾಜಸ್ವ ಸಂಗ್ರಹಣೆಯ ಗುರಿ ನೀಡಿದ್ದು, ಫೆಬ್ರವರಿ-2024ರ ಅಂತ್ಯದವರೆಗೆ ಒಟ್ಟಾರೆ ರೂ. 10,541.24 ಕೋಟಿ ರಾಜಸ್ವ ಸಂಗ್ರಹಣೆ ಸಂಚಿತ ಗುರಿಗೆ ಎದುರಾಗಿ ರೂ. 10.020.24 ಕೋಟಿ ರಾಜಸ್ವ ಸಂಗ್ರಹಣೆ ಮಾಡಿದ್ದು, ಶೇ.95.05 ರಷ್ಟು ಗುರಿ ಸಾಧನೆ ಮಾಡಲಾಗಿರುತ್ತದೆ.
ಕಛೇರಿಯ ಕಾರ್ಯವ್ಯಾಪ್ತಿಯು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂಬರ್:27 ರಿಂದ 67 ರವರೆಗೆ, ಹುಬ್ಬಳ್ಳಿ ಗ್ರಾಮೀಣ ಮತ್ತು ಕುಂದಗೋಳ ತಾಲೂಕುಗಳನ್ನು ಹೊಂದಿರುತ್ತದೆ. ಕಛೇರಿಗೆ ನೂತನ ಕಟ್ಟಡವನ್ನು ಹೊಂದುವ ದಿಶೆಯಲ್ಲಿ ಹುಬ್ಬಳ್ಳಿಯ ಗಬ್ಬೂರು ಗ್ರಾಮದ ರಿ.ಸರ್ವೇ ನಂ.13ಅ/4 ರಲ್ಲಿ 1 ಎಕರೆ 20 ಗುಂಟೆ ಜಮೀನನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಮಂಜೂರು ಮಾಡಲಾಗಿದ್ದು, ಸದರಿ ಜಮೀನನ್ನು ರೂ.84,94,200/-ಗಳ ವೆಚ್ಚದಲ್ಲಿ ಖರೀದಿಸಲಾಗಿರುತ್ತದೆ.
*ಕಛೇರಿ ನಡೆದು ಬಂದ ದಾರಿ*
ಹುಬ್ಬಳ್ಳಿಯ ಗಬ್ಬೂರಿನಲ್ಲಿ ಹೊಸದಾಗಿ ಧಾರವಾಡ (ಪೂರ್ವ) ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯನ್ನು 07-01-2017 ರಂದು ಬಾಡಿಗೆ ಕಟ್ಟಡದಲ್ಲಿ ವಿದ್ಯುಕ್ತವಾಗಿ ಪ್ರಾರಂಭಿಸಲಾಗಿರುತ್ತದೆ. ಈ ಕಛೇರಿಗೆ ಸನ್ 2022-23ನೇ ಸಾಲಿನಲ್ಲಿ ರೂ.11,555.43 ಲಕ್ಷಗಳ ರಾಜಸ್ವ ಸಂಗ್ರಹಣೆಯ ಗುರಿಯನ್ನು ನೀಡಲಾಗಿದ್ದು, ಈ ಪೈಕಿ ರೂ.11,499.96 ಲಕ್ಷಗಳ ರಾಜಸ್ವ ಸಂಗ್ರಹಣೆಯನ್ನು ಸಾಧಿಸಲಾಗಿದ್ದು, ಶೇ.99.51% ರಷ್ಟು ಪ್ರಗತಿಯನ್ನು ಸಾಧಿಸಲಾಗಿರುತ್ತದೆ. ರಾಜ್ಯದಲ್ಲಿ ಸಾರಿಗೆ ಇಲಾಖೆಗೆ ಒಟ್ಟಾರೆ ರೂ. 9,007.00 ಕೋಟಿ ರಾಜಸ್ವ ಸಂಗ್ರಹಣೆ ಗುರಿಗೆ ಎದುರಾಗಿ ರೂ. 9,470.77 ಕೋಟಿ ರಾಜಸ್ವ ಸಂಗ್ರಹಣೆ ಮಾಡಿದ್ದು, ಶೇ.105.15 ರಷ್ಟು ಗುರಿ ಸಾಧನೆ ಮಾಡಲಾಗಿರುತ್ತದೆ. ಸನ್ 2023-24 ಸಾಲಿನಲ್ಲಿ ಕಛೇರಿಗೆ ರೂ.14,356.46 ಲಕ್ಷಗಳ ರಾಜಸ್ವ ಸಂಗ್ರಹಣೆಯ ಗುರಿಯನ್ನು ನೀಡಲಾಗಿದ್ದು, ಫೆಬ್ರವರಿ-2024ರ ಅಂತ್ಯದವರೆಗೆ ರೂ.11,221.35 ಲಕ್ಷಗಳ ರಾಜಸ್ವ ಸಂಗ್ರಹಣೆಯನ್ನು ಮಾಡಿ, ಶೇ.85.26% ರಷ್ಟು ಪ್ರಗತಿಯನ್ನು ಸಾಧಿಸಲಾಗಿರುತ್ತದೆ. ರಾಜ್ಯದಲ್ಲಿ ಸಾರಿಗೆ ಇಲಾಖೆಗೆ ಪ್ರಸಕ್ತ ವರ್ಷ 11,500.00 ಕೋಟಿ ರಾಜಸ್ವ ಸಂಗ್ರಹಣೆಯ ಗುರಿ ನೀಡಿದ್ದು, ಫೆಬ್ರವರಿ-2024ರ ಅಂತ್ಯದವರೆಗೆ ಒಟ್ಟಾರೆ ರೂ. 10,541.24 ಕೋಟಿ ರಾಜಸ್ವ ಸಂಗ್ರಹಣೆ ಸಂಚಿತ ಗುರಿಗೆ ಎದುರಾಗಿ ರೂ. 10.020.24 ಕೋಟಿ ರಾಜಸ್ವ ಸಂಗ್ರಹಣೆ ಮಾಡಿದ್ದು, ಶೇ.95.05 ರಷ್ಟು ಗುರಿ ಸಾಧನೆ ಮಾಡಲಾಗಿರುತ್ತದೆ. ಸನ್ 2022-23ನೇ ಸಾಲಿನಲ್ಲಿ ಪ್ರವರ್ತನ ಚಟುವಟಿಕೆಗಳನ್ನು ಹಮ್ಮಿಕೊಂಡು ಒಟ್ಟಾರೆ 43,374 ವಾಹನಗಳ ತಪಾಸಣೆಯನ್ನು ಕೈಗೊಂಡು 3,411 ವಾಹನಗಳ ಮೇಲೆ ಪ್ರಕರಣ ದಾಖಲಿಸಿ, 61 ವಾಹನಗಳನ್ನು ಜಪ್ತಿಗೊಳಿಸಲಾಗಿದ್ದು, ಒಟ್ಟಾರೆ ರೂ. 1,60,38,568/- ದಂಡ ಮತ್ತು ತೆರಿಗೆಯನ್ನು ವಸೂಲಿಸಲಾಗಿದೆ. ರಾಜ್ಯವ್ಯಾಪಿ ಕಳೆದ ಸಾಲಿನಲ್ಲಿ 29.79 ಲಕ್ಷ ವಾಹನಗಳನ್ನು ತನಿಖೆ ಮಾಡಿ 3.47 ಲಕ್ಷ ವಾಹನಗಳ ಮೇಲೆ ಪ್ರಕರಣ ದಾಖಲಿಸಿದ್ದು, ಒಟ್ಟಾರೆ 4,654 ವಾಹನಗಳನ್ನು ಜಪ್ತಿಗೊಳಿಸಲಾಗಿದೆ. ರೂ. 149.02 ಕೋಟಿಗಳಷ್ಟು ತೆರಿಗೆ ಮತ್ತು ದಂಡವನ್ನು ವಸೂಲಿಸಲಾಗಿದೆ. ಸನ್ 2023-24ನೇ ಸಾಲಿನಲ್ಲಿ ಫೆಬ್ರವರಿ-2024ರ ಅಂತ್ಯದವರೆಗಿನ ಪ್ರವರ್ತನ ಚಟುವಟಿಕೆಯಲ್ಲಿ ಒಟ್ಟಾರೆ 32,020 ವಾಹನಗಳ ತಪಾಸಣೆಯನ್ನು ಕೈಗೊಂಡು, 3,340 ವಾಹನಗಳ ಮೇಲೆ ಪ್ರಕರಣವನ್ನು ದಾಖಲಿಸಲಾಗಿದ್ದು, 108 ವಾಹನಗಳನ್ನು ಜಪ್ತಿಗೊಳಿಸಿ, ಒಟ್ಟಾರೆ ರೂ. 2,23,50,208/- ದಂಡ ಮತ ತೆರಿಗೆಯನ್ನು ವಸೂಲಿಸಲಾಗಿರುತ್ತದೆ. ರಾಜ್ಯವ್ಯಾಪಿ ಪ್ರಸಕ್ತ ಸಾಲಿನಲ್ಲಿ, ಜನವರಿ-2024ರ ಅಂತ್ಯದವರೆಗೆ 19.27 ಲಕ್ಷ ವಾಹನಗಳನ್ನು ತನಿಖೆ ಮಾಡಿ 3.13 ಲಕ್ಷ ವಾಹನಗಳ ಮೇಲೆ ಪ್ರಕರಣ ದಾಖಲಿಸಿದ್ದು, ಒಟ್ಟಾರೆ 4,830 ವಾಹನಗಳನ್ನು ಜಪ್ತಿಗೊಳಿಸಲಾಗಿದೆ. ರೂ. 145.99 ಕೋಟಿಗಳಷ್ಟು ತೆರಿಗೆ ಮತ್ತು ದಂಡವನ್ನು ವಸೂಲಿಸಲಾಗಿದೆ. ಪ್ರಸ್ತುತ ಈ ಕಛೇರಿಯ ವ್ಯಾಪ್ತಿಯಲ್ಲಿ ಫೆಬ್ರವರಿ-2024ರ ಅಂತ್ಯದವರೆಗೆ 3,00,179 ವಾಹನಗಳು ನೋಂದಣಿಯಾಗಿ ಉಪಯೋಗದಲ್ಲಿದ್ದು, 64,018 ಜನ ಚಾಲನಾ ಪರವಾನಿಗೆಯನ್ನು ಪಡೆದುಕೊಂಡಿರುತ್ತಾರೆ. ಈಗಾಗಲೇ ಸಾರಥಿ-4 ಹಾಗೂ ವಾಹನ-4 ತಂತ್ರಾಂಶಗಳನ್ನು ದೇಶಾದ್ಯಂತ ಜಾರಿಗೆ ತರಲಾಗಿದ್ದು, ಯಾವುದೇ ಕೆಲಸಕ್ಕಾಗಿ ದಾಖಲಾತಿಗಳನ್ನು ಆನ್‌ಲೈನ್ ಮುಖಾಂತರವೇ ಅಪಲೋಡ್ ಮಾಡಿ, ಆನಲೈನ್ ಮುಖಾಂತರವೇ ಶುಲ್ಕ ಹಾಗೂ ತೆರಿಗೆಯನ್ನು ಸಂದಾಯ ಮಾಡಿ ಸೇವೆಗಳನ್ನು ಪಡೆಯಬಹುದಾಗಿದೆ.
ಇಲಾಖೆಯ ಕೆಲಸ ಎಲ್ಲಾ ಕಾರ್ಯಗಳನ್ನು ಆನ್‌ಲೈನ್‌ಗೊಳಿಸಲಾಗಿದ್ದು, ಕಛೇರಿಯ ಎಲ್ಲಾ ಕೆಲಸ ಸಂಪೂರ್ಣವಾಗಿ ಕಾರ್ಯಗಳನ್ನು ಪಾರದರ್ಶಕವಾಗಿರಿಸಲು ಸಾರಿಗೆ ಇಲಾಖೆಗೆ ಸಂಬಂಧಿಸಿದ 30 ಕೆಲಸಗಳಿಗೆ ಆನಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸಾರ್ವಜನಿಕರು ಸಾರಿಗೆ ಇಲಾಖೆಯಿಂದ ಒದಗಿಸಲಾಗುವ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಇಲಾಖೆಯಿಂದ ಉತ್ತಮ ಸೇವೆಗಳನ್ನು ಪಡೆದುಕೊಳ್ಳುವಂತೆ ಈ ಮೂಲಕ ಸಾರಿಗೆ ಇಲಾಖೆ ಕೋರಿದೆ.