ಧಾರವಾಡ: ಹುಬ್ಬಳ್ಳಿ, ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ದೀಪಕ ಚಿಂಚೋರೆ ಅವರು ಹುಬ್ಬಳ್ಳಿ, ಧಾರವಾಡ ಸೇರಿದಂತೆ ಅನೇಕ ಕಡೆಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಒಂದೆಡೆ ದೀಪಕ ಚಿಂಚೋರೆ ಪ್ರಚಾರ ನಡೆಸಿ, ಬಹಿರಂಗ ಸಮಾವೇಶಗಳನ್ನು ಮಾಡಿದರೆ, ಇನ್ನೊಂದೆಡೆ ಅವರ ಪತ್ನಿ ಸಂಗೀತಾ, ಸೊಸೆ ರಾಧಿಕಾ ಹಾಗೂ ಸಹೋದರಿಯರಾದ ಸ್ಮಿತಾ, ರೀತಾ, ಬಸಂತಿ ಥಾವಂಶಿ, ಮಲ್ಲಿಕಾರ್ಜುನ ಥಾವಂಶಿ, ಅಮೃತ ದಿನದನಿ, ಮಂಜು, ಉಮೇಶ, ವೀರನಗೌಡ ಸೇರಿದಂತೆ ಅನೇಕರು ಅಬ್ಬರದ ಪ್ರಚಾರ ನಡೆಸಿದರು.
ವಾರ್ಡ್ ನಂಬರ್ 12 ರ ತುಂಗಭದ್ರಾ ಕಾಲೊನಿ ಹಾಗೂ ಸಂಜೆ ಕೆಸಿಡಿ ಮೈದಾನದಲ್ಲಿ ಶಿಕ್ಷಕರ ಅಸೋಸಿಯೇಷನ್ ಸದಸ್ಯರನ್ನು ಭೇಟಿಯಾದ ದೀಪಕ ಚಿಂಚೋರೆ ಮತಯಾಚನೆ ಮಾಡಿದರು. ಶಿಕ್ಷಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ನಾನು ಶಾಸಕನಾಗಿ ಆಯ್ಕೆಯಾದ ಮೇಲೆ ಪ್ರಾಮಾಣಿಕವಾಗಿ ಒದಗಿಸುತ್ತೇನೆ ಎಂದರು.
ಇತ್ತ ಭಾವಿಕಟ್ಟಿ ಪ್ಲಾಟ್ ಸೇರಿದಂತೆ ಅನೇಕ ಕಡೆಗಳಲ್ಲಿ ದೀಪಕ ಚಿಂಚೋರೆ ಅವರ ಸಹೋದರಿಯರು ಹಾಗೂ ಬೆಂಬಲಿಗರು ಅಬ್ಬರದ ಪ್ರಚಾರ ನಡೆಸಿದರು.