ಗಬ್ಬೂರು ಬೈಪಾಸ್ ಬಳಿ ಎರಡು ಕುಟುಂಬಗಳ ನಡುವೆ ಮಾರಾಮಾರಿ- ಇಬ್ಬರಿಗೆ ಗಾಯ

Spread the love

ಹುಬ್ಬಳ್ಳಿ- ಮಣ್ಣು ತೆಗೆಯುವ ವಿಚಾರದಲ್ಲಿ ಎರಡು ಕುಟುಂಬಳ ನಡುವೆ ಆರಂಭಗೊಂಡು ಜಗಳ ವಿಕೋಪಕ್ಕೆ ಹೋಗಿ ಮಾರಕಾಸ್ತ್ರಗಳಿಂದ ಹೊಡೆದಾಡಿದ ಘಟನೆ ನಗರದ ಹೊರವಲಯದ ಗಬ್ಬೂರು ಬೈಪಾಸ್ ಬಳಿ ಸೋಮವಾರ ನಡೆದಿದೆ.
ರಸ್ತೆಯಲ್ಲಿ ಬಿದ್ದ ಮಣ್ಣು ತೆಗೆಯುವ ವಿಚಾರದಲ್ಲಿ ಮೊದಲು ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ನಂತರ ಉಭಯ ಕಡೆಯದವರು ಸ್ಥಳಕ್ಕೆ ಆಗಮಿಸಿ ಮಾರಾಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದಾರೆ. ಒಂದು ಕುಟುಂಬಕ್ಕೆ ಸೇರಿದ
ರಿಯಾನ್ ಅಹ್ಮದ್ ಗುಡಮಾಲೆ ಇನ್ನೊಂದು ಕುಟುಂಬಕ್ಕೆ ಸೇರಿದ ಆಶೀಫ್ ಅಲಿ ದೊಡವಾಡ ಎಂಬುವವರಿಗೆ ಗಾಯವಾಗಿದ್ದು ವಿದ್ಯಾನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡು ಬಿಡುಗಡೆಯಾದರು. ಕಸಬಾಪೇಟೆಯ ಪೊಲೀಸರು ಸಹ ಭೇಟಿ ನೀಡಿ ವಿಚಾರಣೆ ಮಾಡುತಿದ್ದಾರೆ.
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ರಾಮರಾಜನ್ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಮಾತನಾಡಿ, ಎರಡು ಕುಟುಂಬಗಳ ನಡುವೆ ನಡೆದ ಹೊಡೆದಾಟ ಕುರಿತು ತನಿಖೆ ಮಾಡಲಾಗುತ್ತದೆ ಎಂದರು.


Spread the love

Leave a Reply

error: Content is protected !!