ಧಾರವಾಡ : ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಪರವಾಗಿ ಅವರ ಪತ್ನಿ ಪ್ರಿಯಾ ದೇಸಾಯಿ ಗ್ರಾಮಾಂತರ ಕ್ಷೇತ್ರದ ವನಹಳ್ಳಿ, ತಲವಾಯಿ ಹಾಗೂ ಕನಕೂರು ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಈ ಮೂರೂ ಹಳ್ಳಿಗಳಲ್ಲಿ ಪ್ರಿಯಾ ದೇಸಾಯಿ ಅವರಿಗೆ ಉತ್ತಮ ಜನಬೆಂಬಲ ವ್ಯಕ್ತವಾಯಿತು. ಪಾದಯಾತ್ರೆ ನಡೆಸಿ ಮನೆ, ಮನೆಗೆ ತೆರಳಿದ ಪ್ರಿಯಾ ದೇಸಾಯಿ, ಐದು ವರ್ಷಗಳಲ್ಲಿ ಆದ ಅಭಿವೃದ್ಧಿ ಕೆಲಸಗಳ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಟ್ಟರು. ಅಲ್ಲದೇ ಹಾಲಿ ಶಾಸಕ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು. ಜ್ಯೋತಿ ಗೌಡರ, ದೀಪಾ ಶಿರೂರ, ನಿರ್ಮಲಾ ಹಾವೇರಿ, ರೇಣುಕಾ ಆರೆಣ್ಣವರ, ಈರಮ್ಮ ಕುಬಳ್ಳಿ, ಬಸಮ್ಮ ತಳವಾರ, ಸುಮಾ ನಾವಳ್ಳಿ ಸೇರಿದಂತೆ ನೂರಾರು ಜನ ಮಹಿಳೆಯರು ಪ್ರಿಯಾ ದೇಸಾಯಿ ಅವರ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು.