*
ಹುಬ್ಬಳ್ಳಿ: ಕೇಶ್ವಾಪುರದ ಖಾಸಗಿ ಹೋಟೆಲ್ ನಲ್ಲಿ ವೀರಶೈವ ಲಿಂಗಾಯತ ಮುಖಂಡರಾದ ಬಂಗಾರೇಶ ಹಿರೇಮಠ ನೇತೃತ್ವದಲ್ಲಿ ನಡೆದ ವೀರಶೈವ ಲಿಂಗಾಯತ ಸಮುದಾಯದ ಪ್ರಮುಖರ ಸಭೆಯಲ್ಲಿ ಹುಬ್ಬಳ್ಳಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಜಗದೀಶ ಶೆಟ್ಟರ್ ರವರ ಪರವಾಗಿ ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳ ಪ್ರಮುಖರು ಕೈ ಎತ್ತಿ ಸಂಪೂರ್ಣವಾಗಿ ಬೆಂಬಲ ವ್ಯಕ್ತಪಡಿಸಿದರು ಮತ್ತು ನಿಮ್ಮನ್ನು ಗೆಲ್ಲಿಸುವವರೆಗೂ ವಿರಮಿಸುವದಿಲ್ಲ ಎಂದು ಪ್ರತಿಜ್ಞೆ ಗೈದರು ನಂತರ ಮಾತ ನಾಡಿದ ಜಗದೀಶ ಶೆಟ್ಟರ್ ರವರು ತಮಗೆ ಬಿಜೆಪಿ ಯಲ್ಲಿ ಆದ ಅಪಮಾನ ಮತ್ತು ಸ್ವಾಭಿಮಾನ ದಕ್ಕೆಯ ಕುರಿತು ವಿವರಿಸಿದರು ಮತ್ತು ಸಮಾಜದ ಪ್ರೀತಿ , ವಿಶ್ವಾಸದ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು ,ಪ್ರಾಸ್ತಾವಿಕವಾಗಿ ಬಂಗಾರೇಶ ಹಿರೇಮಠ ಮಾತನಾಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಜಗದೀಶ ಶೆಟ್ಟರ್ ಅವರು ಮತ್ತೆ ಅತ್ಯುನ್ನತ ಸ್ಥಾನ ಅಲಂಕರಿಸುವ ಅವಕಾಶವಿದೆ ಕಾರಣ ನಾವೆಲ್ಲರೂ ನಾವೇ ಅಭ್ಯರ್ಥಿ ಎಂದು ಕೆಲಸ ಮಾಡಿ ಹೆಚ್ಚಿನ ಅಂತರದಲ್ಲಿ ಗೆಲ್ಲಿಸೋಣ ಅಲ್ಲಿಯವರೆಗೆ ವಿರಮಿಸುವದು ಬೇಡ ಎಂದರು ,ರಾಜಶೇಖರ ಮೆಣಸಿನಕಾಯಿ ಮಾತನಾಡಿ 1994 ರ ಒಗ್ಗಟ್ಟು ಈ ಚುನಾವಣೆಯಲ್ಲಿ ಕಂಡು ಬರುತ್ತಿದೆ ಬಿಜೆಪಿಯವರ ಪೊಳ್ಳು ಬೆದರಿಕೆಗಳಿಗೆ ಭಯ ಪಡದೆ ನಾವೆಲ್ಲರೂ ಶೆಟ್ಟರ್ ಗೆಲುವಿಗೆ ಶ್ರಮಿಸೋಣ ಎಂದರು ಮಾಜಿ ಸಂಸದರಾದ ಪ್ರೋ I G ಸನದಿ ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ , ನೀಲಕಂಠ ಅಸೋಟಿ ಮಾತ ನಾಡಿ ಬಿಜೆಪಿ ಯವರಿಗೆ ನಮ್ಮ ಅಭ್ಯರ್ಥಿ ಜಗದೀಶ್ ಶೆಟ್ಟರ್ ಸ್ಪರ್ಧೆಯಿಂದ ಭಯ ಉಂಟಾಗಿ ವಿಚಾಲಿತರಾಗಿದ್ದಾರೆ ಪಕ್ಷದಲ್ಲಿ ನಾವೆಲ್ಲ ಒಗ್ಗಟ್ಟಾಗಿದ್ದೇವೆ ಇನ್ನು ನಾವು ಗೆಲುವಿನ ನಗೆ ಬೀರುವದರಲ್ಲಿ ಸಂಶಯವಿಲ್ಲ ಎಂದರು ಗಂಗಾಧರ ದೊಡ್ಡವಾದ ನಿರೋಪಣೆ ಮಾಡಿದರು ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ಮಲ್ಲಿಕಾರ್ಜುನ ಸಾವಕಾರ, ಬಾಪೂಗೌಡ ಪಾಟೀಲ್,ಶಿವಪುತ್ರಪ್ಪ ಕಮತರ , ಸದಾಶಿವಯ್ಯ ಹಿರೇಮಠ , ಕಲ್ಲಪ್ಪ ಯಲಿವಾಳ , ಆರ್ ಕೆ ಪಾಟೀಲ್ , ಎಂ ಎಸ್ ಪಾಟೀಲ್ , ಸುನೀಲ್ ಮಠಪತಿ , ಸರೋಜಾ ಹೂಗಾರ , ಸುನಿತಾ ಹುರಕಡ್ಲಿ , ಮುಂತಾದವರು ಉಪಸ್ಥಿತರಿದ್ದರು