ಕುಂದಗೋಳ : ಕುಂದಗೋಳ ಪಟ್ಟಣಕ್ಕೆ ಇದೇ ಏಪ್ರೀಲ್ 29 ರಂದು ಶಾಸಕಿ ಕುಸುಮಾವತಿ ಪರ ಮತಯಾಚನೆ ಮಾಡಲು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರೀಯಾಂಕ್ ಗಾಂಧಿ ವಾದ್ರಾ ಆಗಮಿಸಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ ಎಂದು ಕುಂದಗೋಳ ಚುನಾವಣೆ ಉಸ್ತುವಾರಿ ಪಿ.ವಿ.ಮೋಹನ್ ಹೇಳಿದರು.
ಅವರು ಕುಂದಗೋಳ ಪಟ್ಟಣದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿ ಏಪ್ರೀಲ್ 29 ರಂದು ಬೆಳಿಗ್ಗೆ 11 ಕ್ಕೆ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಜೆ.ಎಸ್.ಎಸ್.ವಿದ್ಯಾಪೀಠದಿಂದ ಮಾರ್ಕೇಟ್’ವರೆಗೆ ಎರೆಡು ಕೀಲೋ ಮೀಟರ್ ರೋಡ್ ಶೋ ನಡೆಯಲಿದ್ದು, 15 ಸಾವಿರಕ್ಕೂ ಅಧಿಕ ಜನ ಸೇರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಮ್.ಎಸ್ ಅಕ್ಕಿ,ಅರವಿಂದಪ್ಪ ಕಟಗಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮೇಶ್ ಹೆಬಸೂರು, ಗೌಡಪ್ಪಗೌಡ ಪಾಟೀಲ್, ಷಣ್ಮುಖಪ್ಪ ಶಿವಳ್ಳಿ, ಜಿ.ಡಿ.ಘೋರ್ಪಡೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.