Breaking News

ಎಮ್.ಆರ್.ಪಾಟೀಲ್’ಗೆ ಅಭೂತಪೂರ್ವ ಜನಬೆಂಬಲ*

Spread the love

ಕುಂದಗೋಳ:ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಕುಂದಗೋಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಮ್.ಆರ್.ಪಾಟೀಲ್’ಗೆ ಜನರು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಪ್ರಚಾರದ ವೇಳೆ ಬೃಹತ್ ಸೇಬು ಹಣ್ಣಿನ ಮಾಲೆ, ಹೂ ಮಳೆ ಸುರಿಸಿ ಕ್ಷೇತ್ರಗಳಲ್ಲಿ ಜನರು ತಮ್ಮ ಗ್ರಾಮಕ್ಕೆ ಅದ್ದೂರಿ ಸ್ವಾಗತ ಕೋರುತ್ತಿದ್ದಾರೆ.

ಕ್ಷೇತ್ರದ ಯಲಿವಾಳ, ಅದರಗುಂಚಿ, ನೂಲ್ವಿ, ಹಿರೇಹರಕುಣಿ ಗ್ರಾಮಗಳಲ್ಲಿ ಎಮ್.ಆರ್.ಪಾಟೀಲ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿ, ಈ ಹಿಂದೆ ಕಾಂಗ್ರೆಸ್ ಶಾಸಕರ ಅವಧಿಯಲ್ಲಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ, ರೈತರಿಗೆ ನೆರವಾಗುವ ಕೆಲಸ ಮಾಡಲಿಲ್ಲ. ಜನ ಬದಲಾಗಿದ್ದಾರೆ. ಬುದ್ದಿವಂತರಾಗಿದ್ದಾರೆ. ಯಾವುದು ಸತ್ಯ ಎನ್ನುವ ತಿರ್ಮಾನ ಮಾಡುವ ಪ್ರಬುದ್ದತೆ ಕುಂದಗೋಳ ಕ್ಷೇತ್ರದ ಮತದಾರರಿಗೆ ಇದೆ. ಈ ಬಾರಿ ಕ್ಷೇತ್ರ ಹಸ್ತ ಮುಕ್ತವಾಗುವುದು ಖಚಿತ ಎಂದು ಹೇಳಿದರು..

ಈ ಭಾಗದಲ್ಲಿ ಅಭಿವೃದ್ಧಿ, ಸಾಮಾಜಿಕ ನ್ಯಾಯದ ತಳಹದಿಗೆ ಜಯ ಸಿಗಲಿದೆ. ಅಂತಹ ಪ್ರಜ್ಞಾವಂತ ಹೃದಯವಂತರನ್ನು ಹೊಂದಿರುವ ತಾಲೂಕು ನಮ್ಮದು. ಅಭಿವೃದ್ಧಿ ಎಂಬ ಒಂದೇ ಮಂತ್ರದ ಮೇಲೆ ಸಾಗುತ್ತಿದ್ದೇನೆ. ಇದಕ್ಕೆ ತಮ್ಮೇಲ್ಲರ ಸಹಕಾರ ಮುಖ್ಯ. ನನ್ನ ಮೇಲೆ ವಿಶ್ವಾಸ ಇಟ್ಟು ಅತ್ಯಧಿಕ ಮತಗಳನ್ನು ನೀಡಿ ಆಯ್ಕೆ ಮಾಡಿದರೇ ನಿಮ್ಮ ಸೇವಕನಾಗಿ ಕ್ಷೇತ್ರದ ಪ್ರಗತಿಗಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದರು.

ಮುಂದುವರೆದು ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ, ಸಮೃದ್ದಿ ಮಾಡಬೇಕೆಂಬ ಪರಿಕಲ್ಪನೆಯಿಂದ ಸಾಗುತ್ತಿದ್ದೇನೆ. ಅದಕ್ಕಾಗಿ ನಿಮ್ಮ ಸೇವಕನಾಗಿ ಮತಗಳ ರೂಪದಲ್ಲಿ ಆರ್ಶೀವಾದ ಕೇಳಲು ಬಂದಿದ್ದೇನೆ. ಆರ್ಶೀವಾದ ರೂಪದಲ್ಲಿ ಮತ ನೀಡಿ ಹಾರೈಸಿ ಎಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಡಿ ವಾಯ್ ಲಕ್ಕನಗೌಡ್ರ ಎನ್ ಎನ್ ಪಾಟೀಲ ಪ್ರಕಾಶಗೌಡ ಪಾಟೀಲ ರಂಗನಗೌಡ ಪಾಟೀಲ ಮಾಲತೇಶ ಶಾಗೂಟ್ಟಿ ಬಸವರಾಜ ವಾಯ್ ಸಿ ಕುಮಾರಗೌಡರ ಮುಂತಾದ ಪ್ರಮುಖರು ಇದ್ದರು


Spread the love

About Karnataka Junction

    Check Also

    ನೇಹಾ ಕೊಲೆ‌ ಪ್ರಕಾರಣ: ಕೊಲೆ ಆರೋಪಿ ಫಯಾಜ್ ಕೊಲೆಯಾದ ಸ್ಥಳಕ್ಕೆ ಮಹಜರು

    Spread the loveಹುಬ್ಬಳ್ಳಿ: ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣ ವಿಚಾರವಾಗಿ ತನಿಖೆ ಚುರುಕು ಪಡೆದಿದ್ದು ನೇಹಾ ಕೊಲೆ ಆರೋಪಿ ಫಯಾಜ್ …

    Leave a Reply

    error: Content is protected !!