ಹುಬ್ಬಳ್ಳಿ:;ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರ 73ರ ಜನತಾದಳ ಜಾತ್ಯತೀತ ಪಕ್ಷದ ಅಭ್ಯರ್ಥಿ ಸಿದ್ಧಲಿಂಗೇಶ್ವರಗೌಡ ಮಹಾಂತಒಡೆಯರ ಅವರು ಬಸವ ಜಯಂತಿ ನಿಮಿತ್ತ ಹುಬ್ಬಳ್ಳಿ ನಗರದ ಕೇಶ್ವಾಪೂರದ ಜಗಜ್ಯೋತಿ ಬಸವೇಶ್ವರ ವೃತ್ತದಲ್ಲಿ ಶ್ರೀ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಜಿಲ್ಲಾ ಕಾರ್ಯದರ್ಶಿ ನವೀನಕುಮಾರ.ಮ, ಜಿಲ್ಲಾ ಯುವ ಅದ್ಯಕ್ಷರಾದ ಪರ್ವೇಜ್ ಕಟ್ಟಿಮನಿ, ನವೀನ್ ಮಡಿವಾಳರ, ಅಲ್ಪಸಂಖ್ಯಾತರ ಘಟಕದ ಅದ್ಯಕ್ಷರು ಹಾಗೂ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವೀಕ್ಷಕರಾದ ಬಾಷಾ ಸಾಬ ಮುದಗಲ್ಲ , ಜಿಲ್ಲಾ ಯುವ ಜೆಡಿಎಸ್ ಉಪಾಧ್ಯಕ್ಷರಾದ ಶಾಬಾಜ ಮುದಗಲ್ಲ ಸೆಂಟ್ರಲ್ ಯುವ ಅದ್ಯಕ್ಷರಾದ ಹುಲಗಪ್ಪಾ ಬ್ಯಾಡಗಿ, ಉಮೇಶ್ ರಾಥೋಡ್, ಮಂಜುನಾಥ ಉಡುಪಿ ಮುಂತಾದವರು ಉಪಸ್ಥಿತರಿದ್ದರು