ಧಾರವಾಡ: ರಂಜಾನ್ ಹಬ್ಬದ ಪ್ರಯುಕ್ತ ನಡೆದ ಪ್ರಾರ್ಥನೆಯಲ್ಲಿ ಮಾಜಿ ಸಚಿವ ಹಾಗೂ ಧಾರವಾಡ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿಯವರ ಪುತ್ರ ಹೆಮಂತ ಕುಲಕರ್ಣಿಯವರು ಭಾಗವಹಿಸಿ ಮುಸ್ಲಿಮ್ ಬಾಂಧವರಿಗೆ ಹಬ್ಬದ ಶುಭಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮುಸ್ಲಿಂ ಸಮುದಾಯದ
ಬಾಂಧವರು ಸುಮಾರು ಒಂದು ತಿಂಗಳ ಉಪವಾಸ ಮಾಡಿ,ಸಕಲ ಜೀವರಾಶಿಗೆ ಸುಖವಾಗಲೆಂದು ಬಯಸಿ ಪ್ರಾರ್ಥನೆ ಮಾಡಿದ್ದಾರೆ. ಇಂದು ಸಹ ಒಂದು ಕಡೆ ಸೇರಿಕೊಂಡು ಸಾಮಾಜಿಕ ಪ್ರಾರ್ಥನೆ ಸಹ ಮಾಡಿದ್ದು ಸಂತಸವಾಗಿದೆ.
ಇಂದು ಅತ್ಯಂತ ಮಹತ್ವ ಹಾಗೂ ನಮಗೆ ಪರೀಕ್ಷೆಯ ಕಾಲ ನಮ್ಮ ತಂದೆಯ ಅನುಪಸ್ಥಿತಿಯಲ್ಲಿ ನಮ್ಮ ಕುಟುಂಬ ಚುನಾವಣೆ ಎದುರಿಸುತ್ತಿದ್ದೇವೆ. ತಮ್ಮೆಲ್ಲ ಸಹಕಾರ ಸಹಾಯ, ಆರ್ಶೀವಾದ
ನಮ್ಮೊಂದಿಗಿರಲಿ. ತಮ್ಮ ಬೆಂಬಲ ನಮ್ಮ ತಂದೆಗಿರಲಿ ಎಂದು ವಿನಂತಿಸಿಕೊಂಡರು.
ಈ ಸಂಧರ್ಭದಲ್ಲಿ ಮುಸ್ಲಿಂ ಸಮುದಾಯದ ಹಿರಿಯರಾದ ಡಾ. ಇಕ್ಬಾಲ ಶೇಖ, ಇಕ್ಬಾಲ್ ಜಮಾದಾರ,ನಜೀರ ಮನಿಯಾರ,ಶಫಿ ಕಳ್ಳಿಮನಿ,ಮೈನುದ್ದೀನ ನಧಾಪ,ನಿಜಾಮ ರಾಹಿ,ಬಸೀರ ಹಾಲಬಾವಿ,ಸಯ್ಯದಗೌಸ ಕೊರಪಾಲಿ,ಬಸೀರ ಗಜೇಂದ್ರಗಡ ಮುಂತಾದವರಿದ್ದರು.