Breaking News

ವಕೀಲರ ಸಂಘದಲ್ಲಿ ವಿನಯ ಕುಲಕರ್ಣಿಯವರ ಪರವಾಗಿ ಪತ್ನಿ ಶೀವಲೀಲಾ ಕುಲಕರ್ಣಿ ಮತಯಾಚನೆ

Spread the love

ಧಾರವಾಡ; ವಕೀಲರ ಸಂಘದಲ್ಲಿ, ಶ್ರೀ ವಿನಯ ಕುಲಕರ್ಣಿಯವರ ಪರವಾಗಿ ಅವರ ಧರ್ಮ ಪತ್ನಿ ಶ್ರೀಮತಿ ಶಿವಲೀಲಾ ಕುಲಕರ್ಣಿಯವರು ಮತಯಾಚಿಸಿದರು.

ಈ ಸಂಧರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ವಕೀಲರ ಸಂಘದ ಪ್ರಧಾನಕಾರ್ಯದರ್ಶಿ ಎನ್ ಆರ್ ಮಟ್ಟಿಯವರು ಮಾತನಾಡಿ ಈ ಹಿಂದೆ ನಮ್ಮ ಬೇಡಿಕೆ ಅನ್ವಯ ವಿನಯ ಕುಲಕರ್ಣಿಯವರು ವಿಶೇಷವಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದು, ಅವರು ಸಹೃದಯರು ಅಭಿವೃಧ್ಧಿ ಹರಿಕಾಋಉ ಎಂದರು.

ನಂತರ ಮಾತನಾಡಿದ ಶಿವಲೀಲಾ ಕುಲಕರ್ಣಿಯವರು,ತಮಗೆಲ್ಲರಿಗೂ ವಿನಯ ಕುಲಕರ್ಣಿಯವರು ತಮಗೆಲ್ಲಾ ಚಿರಪರಿಚಿತರು.ಕೋರ್ಟ ಆವರಣಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಸಾಕಷ್ಟು ಪ್ರಯತ್ನ ಮಾಡಿದ್ದರು.ಇವತ್ತು ಅವರು ಅನಿವಾರ್ಯ ಕಾರಣದಿಂದ ಜಿಲ್ಲೆಯ ಹೊರಗಿರಬಹುದು ಆದರೆ ಜನರ ಮನದಲ್ಲಿ ನೆಲೆಯೂರಿದ್ದಾರೆ.ಐ ಐ ಟಿ ಗಾಗಿ ಜಮೀನು ಕೊಡಿಸಲು,ರೈತರೊಂದಿಗೆ ನಿರಂತರವಾಗಿ ಮಾತನಾಡಿ ಶ್ರಮ ವಹಿಸಿ ಐ ಐ ಟಿ ತರಲು ಮಂಚೂನಿಯಲ್ಲದ್ದರು.ಅದೇ ರೀತಿ ಧಾರವಾಡ ಹೈಕೋರ್ಟ ಹೋರಾಟದ ನೇತೃತ್ವ ವಹಿಸಿದ ಕೀರ್ತಿ ಅವರಿಗಿದೆ,ಹಾಗೂ ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಿಂದ ಸಾವಿರಾರು ರೈತರಿಗೆ ಅನುಕೂಲವಾಗುವಂತೆ ಮಾಡಿ,ಧಾರವಾಡದ ಅಭಿವೃಧ್ಧಿಗೆ ಕಿರೀಟಪ್ರಾಯರಾಗಿದ್ದು,ಅವರ ಮೇಲೆ ತಮ್ಮೆಲ್ಲರ ಆಶೀರ್ವಾದ ಇರಲಿ ಎಂದು ವಿನಂತಿಸಿಕೊಂಡರು..

ಈ ಸಂಧರ್ಭದಲ್ಲಿ ಹಿರಿಯ ವಕೀಲರುಗಳಾದ ವಿ.ಡಿ ಕಾಮರೆಡ್ಡಿ,ಕೆ.ಎಲ್ ಪಾಟೀಲ,ಆರ್ ವಿ ಬೆಳ್ಳಕ್ಕಿ,ಜೆ ಎಲ್ ಜಾಧವ,ಸದಾನಂದ ಮುಂದಿನಮನಿ,ಪ್ರಕಾಶ ಸಿಂತ್ರಿ ರಜಿಯಾ ಬೇಗಂ ಸಂಗೊಳ್ಳಿ,ರೂಪಾ ಕರಂಗಾನೂರ,ರಾಜು ಕೋಟಿ,ಪ್ರಕಾಶ ಬಾವಿಕಟ್ಟಿ,ಎಮ್ ಎನ್ ತಾರಿಹಾಳ,ಮಂಜುನಾಥ ಮುಗ್ಗನವರ ಮುಂತಾದ ಹಿರಿಯ ಕಿರಿಯ ವಕೀಲರು ಉಪಸ್ಥಿತರಿದ್ದರು.


Spread the love

About Karnataka Junction

[ajax_load_more]

Check Also

ಪವನ ಬಿಜವಾಡ ಬಮ್ಮಾಪುರ ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಆಗಿ ನೇಮಕ

Spread the loveಹುಬ್ಬಳ್ಳಿ; ನಗರದ ಬಮ್ಮಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಪವನ ಪರಶುರಾಮ ಬಿಜವಾಡ ಅವರನ್ನ ಪ್ರಧಾನ ಕಾರ್ಯದರ್ಶಿಯನಾಗಿ ನೇಮಕ …

Leave a Reply

error: Content is protected !!