ಹುಬ್ಬಳ್ಳಿ:ಟಿಕೆಟ್ ತಪ್ಪತ್ತೇ ಟಿಕೆಟ್ ತಪ್ಪತ್ತೇ ಎಂಬ ಬಹುದೊಡ್ಡ ಚರ್ಚೆ ನಡುವೆ ಕಾಂಗ್ರೆಸ್ ಬಿ ಫಾರ್ಮ್ ಪಡೆದುಕೊಂಡು ಬಂದ ಶಾಸಕಿ ಕುಸುಮಾವತಿ ಶಿವಳ್ಳಿ ಎರಡನೇ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಂದು ಉಮೇದುವಾರಿಕೆ ಸಲ್ಲಿಸಿದ್ದಾರೆ.
ಕುಂದಗೋಳ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕಿ ಕುಸುಮಾವತಿ ಶಿವಳ್ಳಿ ಅಪಾರ ಬೆಂಬಲಿಗರ ಜೊತೆ ನಾಮಪತ್ರ ಸಲ್ಲಿಸಲು ಆಗಮಿಸಿದ್ದರು,
ನಾಮಪತ್ರ ಸಲ್ಲಿಸಿದ ಮಾತನಾಡಿದ ಶಾಸಕಿ ಅಭಿವೃದ್ಧಿ ವಿಚಾರದಲ್ಲಿ ಕುಂದಗೋಳ ಕ್ಷೇತ್ರ ಅಲ್ಪಮಟ್ಟಿಗೆ ಹಿಂದುಳಿದಿದೆ, ಕಾರಣ ಬಿಜೆಪಿ ಸರ್ಕಾರ ಆಡಳಿತದಲ್ಲಿತ್ತು, ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಕ್ಷೇತ್ರ ಹೆಚ್ಚಿನ ಅಭಿವೃದ್ಧಿ ಆಗಲಿದೆ ಎಂದರು.
ಶಾಸಕರ ಜೊತೆ ನಾಯಕರಾದ ಅರವಿಂದ ಕಟಗಿ. ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಮುಂತಾದವರು ಉಪಸ್ಥಿತರಿದ್ದರು.