Error: Contact form not found.
ಕುಂದಗೋಳ: ಕುಂದಗೋಳ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಮ್.ಆರ್.ಪಾಟೀಲ್ ಅವರ ಪರವಾಗಿ ಅವರ ಪತ್ನಿ ಶಶಿಕಲಾ ಪಾಟೀಲ ಅವರು ಕ್ಷೇತ್ರದಲ್ಲಿ ಭರ್ಜರಿ ಚುನಾವಣೆ ಪ್ರಚಾರ ಗೈದರು.
ಇಲ್ಲಿನ ಮತ್ತಿಗಟ್ಟಿಗೆ ಭೇಟಿ ನೀಡಿ ಮನೆಮನೆಗೆ ತೆರಳಿ ಪ್ರಾಚಾರ ಮಾಡಿದ ಅವರು, ತಮ್ಮ ಪತಿ ಅಧಿಕಾರವಿಲ್ಲದೇ ಮಾಡಿರುವ ಕೆಲಸಗಳನ್ನು ಮತದಾರರು ಸ್ಮರಿಸುತ್ತಾರೆ. ನಿಮ್ಮ ಈ ಪ್ರೀತಿ ಅಭಿಮಾನಕ್ಕೆ ನಾನು ಚಿರಋಣಿಯಾಗಿದ್ದೇನೆ. ಪ್ರೀತಿ ಅಭಿಮಾನವಷ್ಟೇ ಸಾಲದು ಮತ ನೀಡಿ ಶಾಸಕರನ್ನಾಗಿ ಮಾಡಿ ಎಂಬುದು ನನ್ನ ಆಶಯ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಟಿ ಕೆ ಕುಲಕರ್ಣಿ, ಹನುಮಂತಗೌಡ್ರ ಪಾಟೀಲ, ನಿಂಗಪ್ಪ ನಲವಾಲ, ಕೊಟೇಪ್ಪ ದೊಡ್ಡಮನಿ, ಸುನಿತಾ ನಲವಾಲ, ಅನ್ನಪೂರ್ಣ ಪಂಚಾಕ್ಷರಿಮಠ ಸೇರಿದಂತೆ ಅನೇಕ ಹಿರಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು.