ಹುಬ್ಬಳ್ಳಿ: ಆ ಸಮುದಾಯ ಕಂಬಳಿ ಬೀಸಿದರೇ ಬರಗಾಲದಲ್ಲಿಯೂ ಮಳೆ ಬರುತ್ತಿತ್ತು. ಯಾವುದೇ ಶುಭಕಾರ್ಯ ಮಾಡಬೇಕು ಅಂದರೂ ಕೂಡ ಆ ಸಮುದಾಯ ಕೈ ಮುಂದಿರಬೇಕು. ಅಂತಹ ಸಮುದಾಯ ಈಗ ಸಚಿವರ ಗೆಲುವಿಗೆ ಶ್ರೀರಕ್ಷೆಯಾಗಿದೆ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ತೋರಿಸ್ತಿವಿ ನೋಡಿ..
ಕುರುಬ ಸಮುದಾಯ ಅಂದರೆ ನಿಜಕ್ಕೂ ಅದೊಂದು ನಂಬಿಕೆಗೆ ದೊಡ್ಡ ಶಕ್ತಿಯಾಗಿರುವ ಸಮುದಾಯ. ಈ ಸಮುದಾಯ ಈಗ ಸಚಿವ ಶಂಕರಪಾಟೀಲ ಮುನೇನಕೊಪ್ಪ ಅವರ ಸ್ಪರ್ಧೆಗೆ ಬೆಂಬಲ ನೀಡುವ ಮೂಲಕ ಗೆಲುವಿನ ಭರವಸೆ ನೀಡಿದೆ. ಹೌದು.. ಧಾರವಾಡ ಜಿಲ್ಲೆಯ ನವಲಗುಂದ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪಗೆ ಕುರುಬ ಸಮುದಾಯ ವಿಶೇಷ ಗಿಪ್ಟ್ ನೀಡಿದೆ. ಕುರುಬ ಸಮುದಾಯದಿಂದ ಸಚಿವ ಮುನೇನಕೊಪ್ಪಗೆ ಸನ್ಮಾನ ಮಾಡಿದ್ದು,ಕಂಬಳಿ ಹೊದಿಸಿ ಟಗುರು ಮರಿ ಉಡುಗೊರೆ ನೀಡಿ ಶ್ರೀರಕ್ಷೆ ನೀಡಿದ್ದಾರೆ.
ಇನ್ನೂ ನಾಮಪತ್ರ ಸಲ್ಲಿಸುವ ವೇಳೆ ಹಮ್ಮಿಕೊಂಡ ಮೆರವಣಿಗೆಯಲ್ಲಿಯೇ ಸನ್ಮಾನ ಮಾಡಿರುವುದು ನಿಜಕ್ಕೂ ವಿಶೇಷವಾಗಿದೆ. ನವಲಗುಂದ ಕ್ಷೇತ್ರದಲ್ಲಿ ಹೆಚ್ಚಾಗಿರುವ ಕುರುಬ ಸಮುದಾಯದ ಮನಸ್ಸನ್ನು ಗೆದ್ದಿರುವ ಶಂಕರಪಾಟೀಲ ಮುನೇನಕೊಪ್ಪ ಅವರಿಗೆ ಗೆದ್ದು ಬನ್ನಿ ಎಂದು ಕುರುಬ ಸಮುದಾಯ ಹಾರೈಸಿದೆ. ಧಾರವಾಡ ಜಿಲ್ಲೆಯ ನವಲಗುಂದಲ್ಲಿ ನಾಮಪತ್ರ ಸಲ್ಲಿಸಿದ ಮುನೇನಕೊಪ್ಪ ಅವರಿಗೆ ಕುರುಬ ಸಮುದಾಯ ಆರಂಭದಲ್ಲಿಯೇ ಶುಭ ಹಾರೈಸಿದ್ದು, ಶುಭ ಗಳಿಗೆ ಆರಂಭವಾದಂತಾಗಿದೆ.
ಒಟ್ಟಿನಲ್ಲಿ ನಾಮಪತ್ರ ಸಲ್ಲಿಸುವ ಮುಂಚೆಯೇ ಶುಭ ಸಂಕೇತವಾಗಿ ಕಂಬಳಿಯನ್ನು ಹೊದಿಸಿ ಸನ್ಮಾನಿಸಿದ್ದು,
ನವಲಗುಂದದಲ್ಲಿ ಕುರುಬ ಸಮುದಾಯದ ಮತಗಳೇ ನಿರ್ಣಾಯಕವಾಗಿವೆ. ಕುರುಬ ಸಮುದಾಯ ನಿಮ್ಮ ಹಿಂದೆ ಇದೆ, ನಿಮಗೆ ಒಳ್ಳೆಯದಾಗಲಿ. ಮತ್ತೊಮ್ಮೆ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿ ಇನ್ನೂ ಆಗಲಿ ಎಂದು ಟಗುರು ಮರಿ ಉಡುಗೊರೆ ನೀಡಿ ಶುಭ ಹಾರೈಸಿದ್ದಾರೆ.