ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರಿರೋದ್ರಿಂದ ಅನಕೂಲ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ನಗರದ ಗೋಕುಲ ರಸ್ತೆಯಲ್ಲಿನ
ಏರಪೋರ್ಟ್ ನಲ್ಲಿ ಗುರುವಾರ ಸಂಜೆ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಅವರು ಮಾತನಾಡಿದರು. ಇದರಿಂದಾಗಿ ಹಳೆ ಮೈಸೂರು ಭಾಗಕ್ಕಿಂತ ಉತ್ತರ ಕರ್ನಾಟಕದಲ್ಲಿ ಸಹಾಯ ಆಗತ್ತೆ ಎಂದ ಸಿದ್ದರಾಮಯ್ಯ ಭಾರತೀಯ ಜನತಾ ಪಕ್ಷದ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಆಗಿದ್ದು
ಸವದಿ ಸೀನಿಯರ್ ಲೀಡರ್
ಅವರಿಗೆ ಭಾರತೀಯ ಜನತಾ ಪಕ್ಷದ ದಲ್ಲಿ ಅವಮಾನ ಆಗಿದೆ ಹಾಗಾಗಿ ಪಕ್ಷಕ್ಕೆ ಬಂದಿದ್ದಾರೆ. ಇದರಿಂದ ನಮಗೆ ಅನುಕೂಲ ಎಂದರು. ಧಾರವಾಡ ಜಿಲ್ಲೆಯ
ಕುಂದಗೋಳ ಮಾಜಿ ಶಾಸಕ ಚಿಕ್ಕನಗೌಡ,ಹಾಗೂ ಜಗದೀಶ್ ಶೆಟ್ಟರ್ ಕಡೆ ಇಂದ ಯಾರೂ ನಮ್ಮನ್ನ ಸಂಪರ್ಕ ಮಾಡಿಲ್ಲ ಎಂದರು.
ಕಾಂಗ್ರೆಸ್ ಪಟ್ಟಿ ಇವತ್ತು ಇಲ್ಲ ನಾಳೆ ಆಗಬಹುದು ಕಾರಣ ಎಲ್ಲ ರೆಡಿ ಆಗಿದೆ ಎಂದರು.
ಇಂದು ಬೆಳಗಾವಿ ಹೋಗಬೇಕಿದ್ದ
ಬೆಳಗಾವಿಯಲ್ಲಿ ಮಳೆ ಹಿನ್ನಲೆ ಹುಬ್ಬಳ್ಳಿ ಏರಪೋರ್ಟ್ ನಲ್ಲಿ ಲ್ಯಾಂಡ್ ಆಗಿದ್ದ ವಿಮಾನ.
ಬೆಳಗಾವಿಯ ಯಮನಕರಡಿಯಲ್ಲಿ ಪ್ರಚಾರ ಸಭೆ ಇತ್ತು ಹಾಗಾಗಿ ಹೊರಟಿದ್ದೆ ಎಂದ ಸಿದ್ದರಾಮಯ್ಯ ಹೇಳಿದರು