ಹುಬ್ಬಳ್ಳಿ; ಕೋವೀಡ್ 19 ಸಂಕಷ್ಟ ಸಮಯದಲ್ಲಿ ಫಂರ್ಟ್ ಲೈನ್ ಕರೋನಾ ವಾರಿಯರ್ಸ್ ಗಳಾದ ಪತ್ರಕರ್ತರು ತಮ್ಮ ಜೀವದ ಹಂಗು ತೊರೆದು ಶ್ರಮಿತಿದ್ದು ಅವರ ಕಾರ್ಯ ಶ್ಲಾಘನೀಯ ಎಂದು
ಸಮನ್ವಯ ಸೇವಾ ಫೌಂಡೇಶನ್ ಅಧ್ಯಕ್ಷ ವಿನೋದ ಅಲಾಡಿ ಹೇಳಿದರು.
ನಗರದ ಮಾಧವಪುರದಲ್ಲಿಂದು
ಸಮನ್ವಯ ಸೇವಾ ಫೌಂಡೇಶನ್” ವತಿಯಿಂದ ಪತ್ರಕರ್ತರಿಗೆ ಆಹಾರ ಕಿಟ್ ವಿತರಿಸಿ ಅವರು ಮಾತನಾಡಿದರು.
ಸಾಕಷ್ಟು ಸಮಯದಲ್ಲಿ ತಮ್ಮ ಜೀವನದ ಹಂಗು ತೊರೆದು ಸದಾ ಸಮಾಜ ಮುಖಿಯಾಗಿ ಕಾರ್ಯ ಮಾಡುತ್ತಿರುವ ಪತ್ರಕರ್ತರಿಗೆ ಎಲ್ಲವೂ ಸಹಾಯ ಸಹಕಾರ ನೀಡಬೇಕಾಗಿದೆ ಎಂದರು.
ಪೌಂಡಶೇನ್ ಕಾರ್ಯದರ್ಶಿ ಎಸ್ .ಕೆ .ಕೊಟ್ರೇಶ್ ಮಾತನಾಡಿ, ಪತ್ರಕರ್ತರು ಎಷ್ಟೇ ಒತ್ತಡ ಮತ್ತು ಕಷ್ಟದಲ್ಲಿಲ್ಲಿದ್ದರು ಹಗಲಿರುಳು ಎನ್ನದೇ ಕೋವೀಡ್ ಗಾಗಿ ದುಡಿಯುತಿದ್ದಾರೆ ಅವರ ಕಾರ್ಯಕ್ಕೆ ಪ್ರೋತ್ಸಾಹವನ್ನು ನೀಡಬೇಕು ಎಂದರು.
ಫೌಂಡೇಶನ್ ನ ಗೌರವಾಧ್ಯಕ್ಷರಾದ ವಿ .ಜಿ. ಪಾಟೀಲ ಮಾತನಾಡಿ, ಕೋವೀಡ್ ನಿಂದ ಪತ್ರಕರ್ತರೂ ಸಹ ಆರ್ಥಿಕ ಸಂಕಷ್ಟದಲ್ಲಿದ್ದು ತಮ್ಮ ಫೌಂಡೇಷನ್ ವತಿಯಿಂದ ಅಲ್ಪ ಸಹಾಯ ಮಾಡುತಿದ್ದೇವೆ ಎಂದರು.
ಫೌಂಡೇಷನ್ ಉಪಾಧ್ಯಕ್ಷ
ದೀಪಕ್ ಕರ್ಜಗಿ, ಖಜಾಂಚಿಗಳಾದ ಆಕಾಶ್ ಮಾಡಳ್ಳಿ, ನಂದೀಶ ಹಿರೇಮಠ್, ವಿನಾಯಕ್ ಅವಾರಿ, ಸೂರಜ್ ಕಬಾಡಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.
