ಹುಬ್ಬಳ್ಳಿ: ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಮಿಸ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಗದೀಶ್ ಶೆಟ್ಟರ್ ಟಿಕೆಟ್ ನೀಡುವ ಬಗ್ಗೆ ಬಿಜೆಪಿ ರಾಷ್ಟ್ರೀಯ ನಾಯಕರು ಗಂಭೀರ ಚರ್ಚೆ ನಡೆಸಿದ್ದಾರೆ.
ಪರಿಶೀಲನೆ ಮಾಡ್ತಿದ್ದಾರೆ, ನಾನು ಕೂಡ ನನ್ನ ಅಭಿಪ್ರಾಯ ಹೇಳಿದ್ದೇನೆ. ಶೆಟ್ಟರ್ ಟಿಕೆಟ್ ಕೊಡಬೇಕು ಅಂತಾ ನನ್ನ ಅಭಿಪ್ರಾಯ ಹೇಳಿದ್ದೇನೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ನಾನು ಜಗದೀಶ್ ಶೆಟ್ಟರ್ ಭೇಟಿಯಾಗಿ ಮಾತುಕತೆ ಮಾಡಿದ್ದೇವೆ. ಎಲ್ಲ ಸಮಸ್ಯೆಗಳು ಬಗ್ಗೆ ಹರಿಯಲಿದೆ ಎಂದು ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಟಿಕೆಟ್ ವಂಚಿತರ ಅಸಮಾಧಾನ ವಿಚಾರಕ್ಕೆ, ಯಾವ ಪಾರ್ಟಿ ಗೆಲ್ಲುತ್ತೆ ಆ ಪಕ್ಷದಲ್ಲಿ ಆಕಾಂಕ್ಷಿಗಳು ಜಾಸ್ತಿ ಇದ್ದೇ ಇರ್ತಾರೆ. ಎಲ್ಲಿ ಆಕಾಂಕ್ಷಿಗಳು ಜಾಸ್ತಿ ಇರ್ತಾರೆ ಅಲ್ಲಿ ಸ್ವಲ್ಪ ಗೊಂದಲ ಇರುತ್ತದೆ ಪಕ್ಷ ಅದನ್ನ ಬಗೆಹರಿಸುತ್ತದೆ. ಎಲ್ಲ ಸಮಸ್ಯೆಗಳು ಆದಷ್ಟು ಹಂತಹಂತವಾಗಿ ನಿವಾರಣೆಗೆ ಪ್ರಯತ್ನ ಮಾಡ್ತಿದ್ದೇವೆ.
ನಮ್ಮ ಪಾರ್ಟಿಯ ಕಾರ್ಯಕರ್ತರು ಎಮೊಸ್ನಲ್ ಇದ್ದಾರೆ. ನಮ್ಮ ಕಾರ್ಯಕರ್ತರು ಪಕ್ಷದ ಜೊತೆಗೆ ಇರ್ತಾರೆ ಎರಡು ದಿನದಲ್ಲಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ ಎಂದರು.
ನಾವು ಈ ಭಾರಿ ಗೆದ್ದೆ ಗೆಲ್ಲುತ್ತೇವೆ ಅಂತಾ ಇರೋದ್ರಿಂದ, ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ.
52 ಹೊಸ ಮುಖಗಳಿಗೆ ಟಿಕೆಟ್ ನೀಡಿರುವ ವಿಚಾರಕ್ಕೆ, ಇಲ್ಲಿಯವರೆಗೆ 52ಜನರಿಗೆ ಕೊಟ್ಟಿದ್ದೇವೆ. ಭಾರತೀಯ ಜನತಾ ಪಾರ್ಟಿಯ ಕಾಂಗ್ರೆಸ್ ಪಾರ್ಟಿಯಂತೆ ಕುಟುಂಬದಲ್ಲಿ ಕೊಟ್ಟಿಲ್ಲ, ಬಿಜೆಪಿ ಪಕ್ಷಕ್ಕೆ ದುಡಿದವರಿಗೆ ಟಿಕೆಟ್ ನೀಡುವ ಪ್ರಯೋಗ ಮಾಡಿದೆ. ನಮ್ಮಲ್ಲಿ ಹೊಸಹೊಸ ಕಾರ್ಯಕರ್ತರ ಕೊಡುವ ಪ್ರಯತ್ನ ಮೊದಲಿನಿಂದಲೂ ನಡೆದಿದೆ. ಈಗ ಸ್ವಲ್ಪ ಜಾಸ್ತಿ ಆಗಿದೆ ಎಂದರು.
ನನಗೆ ಟಿಕೆಟ್ ತಪ್ಪಲು ಜೋಶಿ ಕಾರಣ ಎಂಬ ನಿಂಬಣ್ಣವರ ಆರೋಪ ವಿಚಾರಕ್ಕೆ, ನಿಂಬಣ್ಣವರ ಬಹಳ ಹಿರಿಯರು ಸಿಟ್ಟಿನಲ್ಲಿ ಅವರು ಮಾತನಾಡಿದ್ದಾರೆ.
ಇವತ್ತು ಅವರ ಜತೆಗೆ ನಾನು ಮಾತನಾಡುತ್ತೇನೆ. ಈಗಾಗಲೇ ನಿಂಬಣ್ಣವರ ಮತ್ತು ಅವರ ಮಗನೊಂದಿಗೆ ಎರಡ್ಮೂರ ಬಾರಿ ಮಾತನಾಡಿದ್ದೇನೆ, ನಮ್ಮ ಪಾರ್ಟಿ ಜತೆಗೆ ಇರ್ತಾರೆ. ಸವದಿ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ, ಸವದಿ ಅವರು ಕಾಂಗ್ರೆಸ್ ಹೋಗಬಾರದು ಅಂತಾ ನಮ್ಮ ಅಪೇಕ್ಷೆ ಇದೆ.
ಪಕ್ಷ ಅವರಿಗೆ ಎಲ್ಲ ಮಹತ್ವ ಕೊಟ್ಟಿದ್ದೆ ಅವರಿಗೆ ಬಿಜೆಪಿಯಲ್ಲಿ ಉತ್ತಮ ಭವಿಷ್ಯ ಇದೆ. ಬಿಜೆಪಿ ಅವರನ್ನ ಉಪಮುಖ್ಯಮಂತ್ರಿ ಮಾಡಿತ್ತು ಹೀಗಾಗಿ ಅವರು ಬಿಜೆಪಿ ಬಿಟ್ಟು ಹೋಗಬಾರದು. ಕಾಂಗ್ರೆಸ್ ಯೂಸ್ ಆಂಡ್ ಥ್ರೋ ಪಾರ್ಟಿ
- ದಯವಿಟ್ಟು ಅಲ್ಲಿಗೆ ಹೋಗಬೇಡಿ ಅನೋ ಸಲಹೆ ಕೊಟ್ಟಿದ್ದೇನೆ ಎಂದರು.