ಹುಬ್ಬಳ್ಳಿ: ನನಗೆ ಟಿಕೆಟ್ ಸಿಗುತ್ತದೆ ನೋಡಿ. ನಾನು ಬೇರೆಯವರಿಗೆ ಟಿಕೆಟ್ ಕೊಡಿ ಎಂದು ಹೇಳಿಲ್ಲ. ನನ್ನ ಮಗನ ಹೆಸರು ಕೂಡ ಹೇಳಿಲ್ಲ. ದೆಹಲಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಜೊತೆ ಸುದೀರ್ಘ ಮೀಟಿಂಗ್ ಆಗಿದೆ. ನಡ್ಡಾ ಜೊತೆ ಮಾತ್ರ ಮೀಟಿಂಗ್ ಆಗಿದ್ದು, ಓಪನ್ ಆಗಿ ಎಲ್ಲವನ್ನೂ ಹೇಳಿದ್ದೇನೆ. ಎರಡು ದಿನ ಕಾದು ನೋಡಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ದೆಹಲಿಯಿಂದ ಇಂದು ಯಡಿಯೂರಪ್ಪ ಅವರಿಗೆ ಭೇಟಿ ಮಾಡಿದ್ದೇನೆ. ಯಡಿಯೂರಪ್ಪ ಕೂಡಾ ಶೆಟ್ಟರ್ ಗೆ ಟಿಕೆಟ್ ಕೊಡಬೇಕು ಎಂದಿದ್ದಾರೆ. ಯಡಿಯೂರಪ್ಪ ಅವರು, ಅಮಿತ್ ಶಾ ಹಾಗೂ ನಡ್ಡಾ ಜೊತೆ ಮಾತಾಡಿದ್ದಾರೆ. ಜಗದೀಶ್ ಶೆಟ್ಟರ್ ಗೆ ಟಿಕೆಟ್ ಸಿಗದೆ ಹೋದರೆ,ಉತ್ತರ ಕರ್ನಾಟಕ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದನ್ನು ಗಮನಕ್ಕೆ ತಂದಿದ್ದಾರೆ ಎಂದರು.
ಇದು ಕೇವಲ ಜಗದೀಶ್ ಶೆಟ್ಟರ್ ಪ್ರಶ್ನೆ ಅಲ್ಲ,ಉತ್ತರ ಕರ್ನಾಟಕದಲ್ಲಿ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತದೆ. ಎನ್ನುವುದನ್ನು ಗಮನಕ್ಕೆ ತಂದಿದ್ದಾರೆ. ನಮಗೆ ಟಿಕೆಟ್ ತಪ್ಪಿಸಲು ಬೊಮ್ಮಾಯಿ ಪ್ರಯತ್ನ ಮಾಡ್ತೀದಾರಾ ಎನ್ನುವ ಪ್ರಶ್ನೆಗೆ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದು, ನಾನು ಯಾರ ಬಗ್ಗೆನೂ ಕಮೆಂಟ್ ಮಾಡಲ್ಲ ಎಂದು ಅವರು ಹೇಳಿದರು.
ಎರಡನೇ ಪಟ್ಟಿಯಲ್ಲಿ ಹೆಸರು ಬರದೇ ಇರುವುದಕ್ಕೆ ಶೆಟ್ಟರ್ ಪ್ರತಿಕ್ರೀಯೆ ನೀಡಿದ್ದು, ನಿನ್ನೆ ಸಂಜೆವರೆಗೂ ಮೀಟಿಂಗ್ ಇತ್ತು,ಅದು ಸಹಜ ಅದರಲ್ಲಿ ವಿಶೇಷ ಇಲ್ಲ.
ನನಗೆ ಟಿಕೆಟ್ ಸಿಗುತ್ತದೆ ನೋಡಿ ನೀವು ಎಂದು ಭರವಸೆ ವ್ಯಕ್ತಪಡಿಸಿದರು.