ಹುಬ್ಬಳ್ಳಿ; ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ಸೈಡ ಲೈನ್ ಮಾಡೋ ವಿಚಾರಕ್ಕೆ ಸಂಬಂಧಿಸಿದಂತೆ ಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು, ಇದು ರಾಜಕಾರಣ ವಿಚಾರ,ನಾನು ಈ ಬಗ್ಗೆ ಬಹಳ ಗಮನ ಕೊಟ್ಟಿಲ್ಲ. ಸಮಾಜಕ್ಕೆ ಸಮನಾಗಿ ಹಂಚಿಕೆ ಆಗಬೇಕು.
ನನಗೂ ಬಹಳಜನ ಈ ಪ್ರಶ್ನೆ ಮಾಡಿದ್ದಾರೆ ಎಂದರು.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಟಿಕೆಟ್ ಹಂಚಿಕೆಯಲ್ಲಿ ಕೆಲ ಕಡೆ ವ್ಯತ್ಯಾಸ ಆಗಿವೆ. ಸಿ.ಎಂ. ನಿಂಬಣ್ಣವರ ಇರಬಹುದು, ಬೆಳಗಾವಿ ಜಿಲ್ಲೆಯಲ್ಲಿ ವಿಶ್ವನಾಥ್ ಪಾಟೀಲ್ ಇರಬಹುದು. ಹೀಗಾದಾಗ ಆಯಾ ಸಮಾಜದ ಸ್ವಾಮೀಜಿಗಳಿಗೆ ನೋವಾಗೋದು ಸಹಜ ಎಂದು ಅವರು ಹೇಳಿದರು.
ಕೆಲ ಕಡೆ ನಮ್ಮ ಸಮಾಜದ ಯುವ ನಾಯಕರಿಗೆ ಅವಕಾಶ ಸಿಕ್ಕದೆ. ಎರಡು ರಾಷ್ಟ್ರೀಯ ಪಕ್ಷಗಳು, ವ್ಯತ್ಯಾಸ ಆಗಿದ್ದರೆ ಪುನರ್ ಪರಿಶೀಲನೆ ಮಾಡಬೇಕು.
ಮೀಸಲಾತಿ ವಿಚಾರ ಒಂದು ಹಂತದ ಸಮಾಧಾನ ತಂದಿದೆ. ಸದ್ಯದ ಪರಸ್ಥಿತಿಯಲ್ಲಿ ಸಾಮಾಜಿಕ ನ್ಯಾಯ ಪಡೆದುಕೊಂಡಿವೆ. ಮೊದಲ ಹಂತದ ಜಯ ಪಡೆದುಕೊಂಡಿದ್ದೇವೆ. ಸದ್ಯ ಯಾವದೇ ತೊಡಕಿಲ್ಲದೆ ಒಂದು ಮೆಟ್ಟಿಲು ಹತ್ತಿದ್ದೇವೆ. ನಮ್ಮದು ಬಸವಣ್ಣನ ತತ್ವ. ಯಾರೇ ಬಂದರೂ ನಮ್ಮವರು ಎಂದು ಅವರು ಹೇಳಿದರು.
ಮುಂದಿನ ಬಾರಿ ನಮ್ಮ ಸಮಾಜದ ಮುಖ್ಯಮಂತ್ರಿ ಆಗಬೇಕು ಅನ್ನೋದು ನಮ್ಮ ಭಾವನೆ. ಮುಖ್ಯಮಂತ್ರಿ ಮಾಡೋದು ಆಯಾ ಪಕ್ಷದ ನಿಲವು. ನಾವು ಬಯಸುವುದು ಸಹಜ,ನಾನು ನಮ್ಮವರ ಆಗಲಿ ಅಂತೀನಿ ಎಂದ ಸ್ವಾಮೀಜಿ, ನಮ್ಮ ಸಮುದಾಯದ ಎರಡು ವರ್ಷದ ಹೋರಾಟದಲ್ಲಿ ಭಾಗಿಯಾದ ಎಲ್ಲರಿಗೂ ಅವಕಾಶ ಮಾಡ್ತೀನಿ ಎಂದರು.
- ಯತ್ನಾಳ ಸಿಎಮ್ ಆಗಬೇಕಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದು, ಆಗಬೇಕು ಅದು ನಮ್ಮ ಅಪೇಕ್ಷೆ, ಅವರಿಗೆ ಒಳ್ಳೆಯ ಸ್ಥಾನ ಸಿಗಲಿ. ಕಾಂಗ್ರೆಸ್ ನಲ್ಲಿರೋ ವಿನಯ್ ಕುಲಕರ್ಣಿ, ಲಕ್ಷ್ಮೀ ಹೆಬ್ಬಾಳಕರ್ ಗೂ ಒಳ್ಳೆದಾಗಲಿ ಎಂದ ಸ್ವಾಮೀಜಿ ಹೇಳಿದರು.