ಧಾರವಾಡ : ಸತ್ತವರ ಮನೆಗೆ ಪೂಜೆ ಮಾಡಿಸಲು ಹೋಗೋಣ ಆದ್ರೇ ಬಿಜೆಪಿ ಪಕ್ಷಕ್ಕೆ ಪುನಃ ಹೋಗುವುದು ಬೇಡಾ ಎಂದು ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ ಹೇಳಿದರು.
ಅವರು ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಮತಕ್ಷೇತ್ರದ ಎಲ್ಲಾ ಮುಖಂಡರ ಸಭೆ ಕರೆದು ಮುಂದಿನ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಚರ್ಚೆ ನಡೆಸಿ ಬಿಜೆಪಿ ಪಕ್ಷ ಮೂರು ಬಾರಿ ನಡೆಸಿದ ಸಮೀಕ್ಷೆಯಲ್ಲಿ ಯಾರ ಹೆಸರು ಬಂದಿದೆ ಆದ್ರೇ ಟಿಕೆಟ್ ಯಾರಿಗೆ ಫೈನಲ್ ಆಗಿದೆ ಇದೆಲ್ಲಾ ಕುತಂತ್ರದ ಕೆಲಸ ಎಂದರು.
ಈಗಾಗಲೇ ಏಳು ಬಾರಿ ಚುನಾವಣೆ ಎದುರಿಸಿ ಮೂರು ಬಾರಿ ಶಾಸಕನಾಗಿ ಕೆಲಸ ಮಾಡಿ ಕಲಘಟಗಿ, ಕುಂದಗೋಳ ಚಿತ್ರಣ ಬದಲಾಯಿಸಿದ್ದೇನೆ, ಈಗಾಗಲೇ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಲು ಪತ್ರ ಬರೆದಿದ್ದೇನೆ, ಸಹಿ ಮಾಡಿಲ್ಲಾ ಅಷ್ಟೇ ಮುಂಬುರುವ ದಿನಗಳಲ್ಲಿ ರಾಜೀನಾಮೆ ನೀಡಿ ಮುಂದಿನ ಕ್ರಮಕ್ಕೆ ಮುಂದಾಗಲಿದ್ದೇನೆ.
ಸದ್ಯ ಬಂಡಾಯದ ಮುನ್ಸೂಚನೆ ಮೇಲೆ ಕಾರ್ಯಕರ್ತರ ಮಾತಿನಂತೆ ನಿಂತಿದ್ದು, ಕಾಂಗ್ರೆಸ್ ನಾಯಕರು ಕರೆ ನೀಡಿದ್ದಲ್ಲಿ ಕಾಂಗ್ರೆಸ್ ಸೇರಿ ಅಭ್ಯರ್ಥಿ ಆದರೂ ಆಗಬಹುದು ಎಂಬ ಉತ್ತರವನ್ನು ಎಸ್.ಐ.ಚಿಕ್ಕನಗೌಡರ ನೀಡಿದರು.
ಕೆಲವರು ದುಡ್ಡೇ ದೊಡ್ಡಪ್ಪ ಎಂದು ಹಣ ಕೊಟ್ಟು ಜನ ಕರೆಸುತ್ತಾರೆ, ನನ್ನ ಬಳಿ ಹಣವಿಲ್ಲಾ ನಾನು ಪ್ರಾಮಾಣಿಕವಾಗಿ ರಾಜಕೀಯ ಮಾಡಿದವನು ನಾನು ಕೆಜೆಪಿ, ಬಿಜೆಪಿ ಮತ್ತೋಂದು ಬಿಜೆಪಿ ಪಕ್ಷವಾದಾಗ ನನ್ನ ಸ್ಥಾನ ಎಷ್ಟಿತ್ತು, ಬಿಜೆಪಿ ಸ್ಥಾನ ಎಷ್ಟಿತ್ತು ಗೊತ್ತಿದೆ, ಈ ಬಾರಿ ಈ ಬಾರಿ ಬಿಜೆಪಿ ಪಕ್ಷವನ್ನು ನಾಲ್ಕನೇ ಸ್ಥಾನಕ್ಕೆ ತನ್ನಿ ಎಂದಾಗ ಕಾರ್ಯಕರ್ತರು ಠೇವಣಿ ಕಳೆದುಕೊಳ್ಳುತ್ತೇವೆ ಎಂದರು.