ಹುಬ್ಬಳ್ಳಿ: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಕರ್ನಾಟಕ ಸರ್ಕಾರ ಪ್ರವರ್ತಿಸಿದ ಸ್ವಾಯತ್ತ ಸಂಸ್ಥೆಯಾದ ಐಟಿ ಶಿಕ್ಷಣ ಗುಣಮಟ್ಟ ಮಂಡಳಿ ಟಿಸಿಎಸ್ ಟೆಕ್‌ಬೈಟ್ಸ್ ೧೪ನೇ ಆವೃತ್ತಿಯ ವಿಜೇತರ ಹೆಸರನ್ನು ಪ್ರಕಟಿಸಿದೆ.
ಈ ಕುರಿತು ಪ್ರಕಟಣೆ ನೀಡಿದ್ದು
ಚಂದ್ರಚೂಡ್ ಜೆ – ಪಿಇಎಸ್ ವಿಶ್ವವಿದ್ಯಾಲಯ
ರನ್ರ‍್ಸ್ ಅಪ್ : ಧೀರಜ್ ಅಂಗಡಿ – ಕೆಎಲ್‌ಇ ಡಾ. ಎಂ ಎಸ್ ಶೇಷಗಿರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ, ಬೆಳಗಾವಿ
ಟಿಸಿಎಸ್ ವತಿಯಿಂದ ವಿಜೇತರಿಗೆ ರೂ ೮೫,೦೦೦ ಮತ್ತು ರನ್ನರ್‌ಅಪ್‌ಗೆ ರೂ. ೧೦,೦೦೦ ಮೌಲ್ಯದ ಮೌಲ್ಯದ ಶೈಕ್ಷಣಿಕ ಸ್ಕಾಲರ್‌ಶಿಪ್‌ಗಳನ್ನು ವಿತರಿಸಿತು. ಜತೆಗೆ ಎಲ್ಲ ಫೈನಲಿಸ್ಟ್ಗಳಿಗೆ ಶೈಕ್ಷಣಿಕ ಸ್ಕಾಲರ್‌ಶಿಪ್ ನೀಡಲಾಯಿತು. ಟಿಸಿಎಸ್ ಬೆಂಗಳೂರಿನ ಪ್ರಾದೇಶಿಕ ಮುಖ್ಯಸ್ಥ ಸುನಿಲ್ ದೇಶಪಾಂಡೆ, ಬೈಟ್ಸ್ನ ಅಧ್ಯಕ್ಷರಾದ ಪ್ರೊ.ಎಸ್.ಸಡಗೋಪನ್ ಬಹುಮಾನಗಳನ್ನು ವಿತರಿಸಿದರು. ವಿಟಿಯು ಕುಲಪತಿ ಡಾ. ವಿದ್ಯಾಶಂಕರ್ ಎಸ್ ಅವರು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ವಿದ್ಯಾರ್ಥಿಗಳು ಭವಿಷ್ಯಕ್ಕೆ ಸಿದ್ಧರಾಗಿ ತಾಂತ್ರಿಕ ಬದಲಾವಣೆಗಳಿಗೆ ಹೊಂದಿಕೊಳ್ಳುವಂತೆ ಅವರು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಎಸ್‌ಜೆಬಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಿನ್ಸಿಪಾಲ್ ಡಾ.ಕೆ.ವಿ.ಮಹೇಂದ್ರ ಪ್ರಶಾಂತ್ ಉಪಸ್ಥಿತರಿದ್ದರು.
ಟಿಸಿಎಸ್ ಬೆಂಗಳೂರಿನ ಪ್ರಾದೇಶಿಕ ಮುಖ್ಯಸ್ಥ ಸುನಿಲ್ ದೇಶಪಾಂಡೆ ಮಾತನಾಡಿ “ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳು
ಅಸಾಧಾರಣ ಸಾಧನೆ ಮಾಡುತ್ತಿರುವುದನ್ನು ನೋಡಿ ನಮಗೆ ಸಂತೋಷವಾಗುತ್ತಿದೆ. ಅವರ ಅಘಾಧ ಪ್ರತಿಭೆ ಮತ್ತು ಈ ಅನುಭವದಿಂದ ಅವರು ಪಡೆದ ಜ್ಞಾನವು ತಂತ್ರಜ್ಞಾನದಲ್ಲಿ ಅವರ ಭವಿಷ್ಯದ ವೃತ್ತಿಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ” ಎಂದು ಹೇಳಿದರು.
ವಿದ್ಯಾರ್ಥಿಗಳು ತಮ್ಮ ತಂತ್ರಜ್ಞಾನದ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಮತ್ತು ಭವಿಷ್ಯಕ್ಕಾಗಿ ಸಿದ್ಧರಾಗಲು ಟಿಸಿಎಸ್ ಟೆಕ್‌ಬೈಟ್ಸ್ ಪ್ರೋತ್ಸಾಹಿಸುತ್ತದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ಕಂಡು ನಮಗೆ ಅತೀವ ಸಂತಸವಾಗಿದೆ. ಇದು ಪರಿವರ್ತನಾಶೀಲ ತಾಂತ್ರಿಕ ವೃತ್ತಿಜೀವನಕ್ಕಾಗಿ ಅವರನ್ನು ಸಜ್ಜುಗೊಳಿಸುತ್ತದೆ” ಎಂದು ಬಣ್ಣಿಸಿದರು.
ಬೈಟ್ಸ್ನ ಅಧ್ಯಕ್ಷ ಪ್ರೊ.ಎಸ್.ಸಡಗೋಪನ ಮಾತನಾಡಿದರು.