ಹುಬ್ಬಳ್ಳಿ: ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರು, 80ನೇ ವಾರ್ಡ್‌ನ ಬಸವೇಶ್ವರ ಸರ್ಕಲ್, ವಿನಾಯಕ ಚೌಕ್
ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಮನೆ ಮನೆಗೆ ತೆರಳಿ, ಮತಯಾಚನೆ ಮಾಡಿದರು.
‘ಹತ್ತು ವರ್ಷದಲ್ಲಿ ಕೋಟಿಗಟ್ಟಲೆ ರೂಪಾಯಿ ಅನುದಾನ ತಂದು ಮತಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿರುವೆ’ ಎಂದ ಅವರು, ತಮಗೆ ಮತ ನೀಡುವಂತೆ ಮನವಿ ಮಾಡಿದರು.
ಮುಖಂಡರಾದ ರಾಜಕುಮಾರ ಕಾಮರೆಡ್ಡಿ, ಬಾಗಣ್ಣ ವೀರಾದಾರ, ಸುಮಿತ್ರಾ ಕೊಪ್ಪದ, ರಾಕೇಶ ಪಲ್ಲಾಟೆ, ಕಾಶಿನಾಥ ಪವಾರ, ರಾಜು ತಾವರೆ, ರಾಜು ಕುಲಕರ್ಣಿ, ಶಿವು ಮಡಿವಾಳರ, ಪ್ರಶಾಂತ ರಾಂಪುರ, ಮಂಜುನಾಥ ಹಣಗಿ, ರಾಜು ಚೌವ್ಹಾಣ, ಅನಿಲ ಬೇವಿನಕಟ್ಟಿ, ಪ್ರಭು ಪ್ರಭಾಕರ, ಸೂರಿ-ಗಿರಿ ಮಾನಶೆಟ್ಟರ, ಸುನೀಲ ಕಮತರ, ಅಬ್ದುಲ್ ಗಫಾರ್ ಮನಿಯಾರ್, ನಾರಾಯಣ ಕಾಟಿಗಾರ ಇದ್ದರು.