ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕುಲಕರ್ಣಿ ಹಕ್ಕಲ, ಜೋಪಡಿ ಚಾಳ, ರೋಡಶೆಡ್ ರಸ್ತೆ ಸೇರಿದಂತೆ ಮುಂತಾದ ಪ್ರದೇಶಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿ, ಈ ಕ್ಷೇತ್ರದಲ್ಲಿ
ಹೆಚ್ಚು ಕೊಳಚೆ ಪ್ರದೇಶ ಹೊಂದಿದೆ ಕ್ಷೇತ್ರ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರವಾಗಿದ್ದು ಮೂಲ ಸೌಕರ್ಯಗಳಿಂದ ಸಾಕಷ್ಟು ಸಮಸ್ಯೆಗಳನ್ನ ಎದುರಿಸುತ್ತಿತ್ತು
ನಾನು ಬಂದ ಮೇಲೆ 100 ಕ್ಕೆ 80 ರಷ್ಟು ರಸ್ತೆ ವಿದ್ಯುತ್ ದೀಪ, ಒಳಚರಂಡಿ, ರೈಲ್ವೆ ಮೊದಲ ಆದ್ಯತೆ ಮೆರೆಗೆ ಮಾಡಿದ್ದೇನೆ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದೇನೆ ಬಡವರು ಹೆಚ್ಚಾಗಿ ಇಲ್ಲಿ ಇರುವುದರಿಂದ ಮನಗಂಡು ಶ್ರಮವಹಿಸಿದ್ದೇನೆ. ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು ಸ್ವಲ್ಪ ನೀರಿನ ಸಮಸ್ಯೆ ಇದೆ ಎಂದು ಒಪ್ಪಿಕೊಂಡ ಅವರು ಶಿಕ್ಷಣಕ್ಕೆ ಮಹತ್ವ ಕೊಡುವ ಉದ್ದೇಶದಿಂದ ಬಿಡ್ನಾಳ ಆರ್ ಕೆ ಪಾಟೀಲ ಶಾಲೆಗೆ 6 ಕೋಟೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗಿದೆ ಶಾಲೆಗಳಿಗೆ ಮೂಲ ಸೌಕರ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡಲಾಗಿದೆ ಎಂದರು.
ಹುಬ್ಬಳ್ಳಿ ವಾಣಿಜ್ಯ ನಗರಿ ಇದಕ್ಕೆ ತಕ್ಕಂತೆ ವಾಣಿಜ್ಯ ವಹಿವಾಟುಗಳಿಗೆ ಅನುಕೂಲವಾಗಲೆಂದು ಜನತಾ ಬಜಾರ್ ನಲ್ಲಿ ಹೈಟೆಕ್ ಮಾರುಕಟ್ಟೆ ಮಾಡಿದ್ದೇನೆ ಫಿಶ್ ಮಾರುಕಟ್ಟೆ ಸೇರಿದಂತೆ ನಾಲ್ಕು ಮಾರುಕಟ್ಟೆಗಳನ್ನ ಅತ್ಯಾಧುನಿಕ ಮಾರುಕಟ್ಟೆಗಳನ್ನಾಗಿ ಮಾಡಿದ್ದು ಗಣೇಶಪೇಟೆಯಲ್ಲಿ 5.50 ಕೋಟಿ ಹಾಗೂ ಜನತಾ ಬಜಾರ್ 20 ಕೋಟಿ ವೆಚ್ಚದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಾಣ ಮಾಡಲಾಗಿದೆ ಎಂದರು. ಯಾವದೋ ಒಂದು ಮಾಧ್ಯಮದಲ್ಲಿ ಪೂರ್ವಾಗ್ರಹ ಪೀಡಿತರಾಗಿ ನೆಗಟಿವ್ ಆಗಿ ಬಿಂಬಿಸಿದ ಅದು ಯಾವುದೇ ಪರಿಣಾಮ ಬೀರದು ಜನರಿಗೆ ಸತ್ಯ ಏನು ಅಂತಾ ಗೊತಿದೆ ಎಂದರು.