ಹುಬ್ಬಳ್ಳಿ: ಎಂಟು ವರ್ಷದ ಮಗು ಒಂದು ಕೇವಲ 5 ರೂಪಾಯಿ ಕೇಳಿದ್ದಕ್ಕೆ ಸೈಕೋ ಕಿಲ್ಲರ್‌ನೊಬ್ಬ ಮಗುವಿನ ತಲೆಯಮೇಲೆ ಕಲ್ಲಿನೊಂದ ಜಜ್ಜಿ ಕೊಲೆ ಮಾಡಿದ ಆರೋಪಿಯನ್ನು ಬೆಂಡಿಗೇರಿ ಪೊಲೀಸರು ಅರೇಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ…
ಎಸ್.. ಶಾಲೆ ರಜೆ ಕೊಟ್ಟಿದ್ದರಿಂದ ನದೀಂ ಎಂಬ ಬಾಲಕ ಬೆಂಡಿಗೇರಿ ಪೊಲೀಸ್ ಠಾಣೆಯ ಹತ್ತಿರ ವಿರುವ ದೊಡ್ಮನಿ ಕಾಲೋನಿಯಲ್ಲಿ ಅಜ್ಜಿ ಮನೆಗೆಂದು ಬಂದಿದ್ದ, ಆದ್ರೆ ದುರದೃಷ್ಟ ಸೈಕೋ ಕಿಲ್ಲರ್ ರವಿ ಬಳ್ಳಾರಿ ಆ ಮಗುವನ್ನು ಕೇವಲ 5 ರೂ. ಕೇಳಿದ್ದಕ್ಕೆ ಕೊಲೆ ಮಾಡಿ, ಮಿರ್ಚಿ ಗ್ರೌಂಡ್ ಕಂಟಿಯಲ್ಲಿ ಎಸೆದು ಹೋಗಿದ್ದಾನೆ. ಎರಡು ದಿನಗಳ ಹಿಂದೆ ಬಾಲಕ ನದೀಂ ನನ್ನು ಕೊಲೆ ಮಾಡಿ ಪರಾರಿಯಾಗಿದ್ದ ರವಿ ಬಳ್ಳಾರಿಯನ್ನು ಬೆಂಡಿಗೇರಿ ಪೊಲೀಸರು ಅರೇಸ್ಟ್ ಮಾಡಿದ್ದಾರೆ. ತನಿಖೆ ಮಾಡಿದ ಕೂಡಲೇ ಐದು ರೂಪಾಯಿ ಕೇಳಿದ್ದಕ್ಕೆ ಕೊಲೆ ಮಾಡಿದ್ದೇನೆಂದು ಆರೋಪಿ ರವಿ ಬಳ್ಳಾರಿ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಅರೇಸ್ಟ್ ಮಾಡಿದ್ದೇ ತಡಾ ನದೀಂ ಪೋಷಕರ ಪೊಲೀಸ್ ಠಾಣೆಗೆ ಬಂದು ಅಳಲನ್ನು ತೋಡಿಕೊಂಡಿದ್ದಾರೆ. ಎಂಟು ವರ್ಷದ ಮಗುವನ್ನು ಕೊಲೆ ಮಾಡಿದ ಇಂತ ಕ್ರೂರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಪೊಲೀಸ್ ಇಲಾಖೆ ಒತ್ತಾಯ ಮಾಡುತ್ತಿದ್ದಾರೆ.
ಮಗು ನದೀಂಗೆ ರವಿ ಬಳ್ಳಾರಿ ಮೊದಲೆ ಗೊತ್ತಿದ್ದನಂತೆ, ಅದೇ ಕಾರಣಕ್ಕೆ ಬಾಲಕ ರವಿ ಬಳಿ ಐದು ರೂಪಾಯಿ ಕೇಳಿರುತ್ತಾನೆ.
ಐದು ರೂಪಾಯಿ ಕೊಟ್ಟ ಬಳಿಕ ಮತ್ತೆ ಐದು ರೂಪಾಯಿ ಕೇಳಿದ್ದಕ್ಕೆ ಕೋಪಗೊಂಡ ರವಿ ಕೊಲೆ ಮಾಡಿದ್ದಾನೆಂದು ಪೊಲೀಸರ ಹತ್ತಿರ ಒಪ್ಪಿಕೊಂಡಿದ್ದಾನೆ.