ಅನಗತ್ಯವಾಗಿ ಓಡಾಟ ಬೇಡಾ- ಊಟ ಮಾಡಿಸಿ ಅಟೋ ಬಿಟ್ಟ ಪಿಐ ಕಾಲಿಮಿರ್ಚಿ

Spread the love

ಹುಬ್ಬಳ್ಳಿ : ನಗರದ ಉಪನಗರ, ಗೋಕುಲ ರಸ್ತೆ ಸೇರಿದಂತೆ ವಿವಿಧ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಜನತಾ ಕರ್ಫ್ಯೂ ಅವಧಿಯಲ್ಲಿ ಅನಾವಶ್ಯಕವಾಗಿ ತಿರುಗಾಟ ನಡೆಸಿದ ಸುಮಾರು 270 ಕ್ಕೂ ಹೆಚ್ಚು ಆಟೋಗಳನ್ನು ಪೊಲೀಸರು ವಶಪಡಿಸಿಕೊಂಡು ಗೋಕುಲ ರಸ್ತೆಯ ಗೋಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ,
ಚೆನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಗೋಕುಲ ರಸ್ತೆ ಸೇರಿದಂತೆ ವಿವಿದೆಡೆ ಕೋವಿಡ್ ಜನತಾ ಕರ್ಫ್ಯೂ ನಿಯಮ ಉಲ್ಲಂಘನೆ ಮಾಡಿದ ಆರೋಪದಡಿ ವಾಹನಗಳನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಕೇಲ ಆಟೋಗಳಿಗೆ ದಂಡ ವಿಧಿಸಿದ್ದಾರೆ.
ಈ ನಡುವೆ ಮಹಮಾರಿ ಕರೋನಾ ಸಹ ಬಡತನ ಮುಂದೆ ಏನು ಅಲ್ಲಾ ಅಂತಾ ತೋರಿಸಿದ್ದರು ಸಹ ಜೀವಕ್ಜೆ ಬೆಲೆ ಕೊಡಲೇ ಬೇಕು. ಅಟೋ ಚಾಲಕರಿಗೆ ಸ್ವಲ್ಪ ಬದುಕಿನ ಪಾಠ ಹೇಳಿ ಹೊಟ್ಟೆ ತುಂಬಾ ಊಟ ಮಾಡಿಸಿ ಮನೆಗೆ ಕಳುಹಿಸಿಕೊಟ್ಟಿದ್ದು ವಿಶೇಷ.
ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಆದರೆ, ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಅನಗತ್ಯವಾಗಿ ತಿರುಗಾಟ ನಡೆಸುತ್ತಿರುವವರ ಸಂಖ್ಯೆಯೂ ಜಾಸ್ತಿ ಇದೆ.ಹಾಗಾಗಿ, ಗೋಕುಲರಸ್ತೆ ಠಾಣಾ ಇನ್​ಸ್ಪೆಕ್ಟರ್​ ಖಾಲಿ ಮಿರ್ಚಿ ಹಾಗೂ ಉಪನಗರ ಠಾಣಾ ಇನ್​​ಸ್ಪೆಕ್ಟರ್​ ರವಿಚಂದ್ರನ್ ನೇತೃತ್ವದಲ್ಲಿ ಫೀಲ್ಡಿಗಿಳಿದ ಪೊಲೀಸರು ಆಟೋಗಳನ್ನು ಸೀಜ್ ಮಾಡಿದ್ದರು.
ಸಭೆ ಯಶಸ್ವಿ; ಇನ್ನು ತಮ್ನ ಅಟೋಗಳನ್ನ ಅನಗತ್ಯವಾಗಿ ವಶಕ್ಕೆ ಪಡೆಯಲಾಗುತ್ತದೆ ಎಂದು ಅಟೋ ಚಾಲಕರು ಗೋಕುಲ ಪೊಲೀಸ್ ಠಾಣೆಯ ಪಿಐ ಜೊತೆಗೆ ವಾಗ್ವಾದಕ್ಕೆ ಇಳಿದರು. ನಂತರ ಶಾಸಕ ಅರವಿಂದ ಬೆಲ್ಲದ ನಿವಾಸಕ್ಕೆ ತೆರಳಿ ಶಾಸಕರಿಗೆ ಮನವಿ ನೀಡಲಾಯಿತು. ತಕ್ಷಣ ಶಾಸಕರು ಡಿಸಿಪಿ ರಾಮರಾಜನ್ ಅಟೋ ಚಾಲಕರ ಸಂಘದ ಪದಾಧಿಕಾರಿಗಳ ಜೊತೆಗೆ ಸಭೆ ನಡೆಸಿ ಕೂಡಲೇ ಬಲವಾದ ಕಾರಣವಿದ್ದರೆ ಮಾತ್ರ ಅವಕಾಶ ನೀಡಿ ಎಂದು ಕರಾರು ಹಾಕಿ ಅಟೋ ಬಿಡುಗಡೆ ಮಾಡಿದರು.
ಊಟ ಹಾಕಿದ ಪಿಐ ಕಾಲಿಮಿರ್ಚಿ- 27 ಕ್ಕೋ ಅಟೋ ವಶಕ್ಕೆ ಪಡೆದಿದ್ದ ಗೋಕುಲ ಪೊಲೀಸ್ ಠಾಣೆಯ ಪಿಐ ಕಾಲಿಮಿರ್ಚಿ ಅಟೋ ಚಾಲಕರಿಗೆ ಅನಗತ್ಯವಾಗಿ ರಸ್ತೆಗೆ ಇಳಿಯದಂತೆ ತಾಕೀತು ಮಾಡಿ ನಂತರ ಠಾಣೆಯಲ್ಲಿಯೇ ಊಟ ಮಾಡಿಸಿ ಅಟೋ ಬಿಡುಗಡೆ ಮಾಡಿದರು.


Spread the love

About Karnataka Junction

    Check Also

    ಅಂಜಲಿ ಹಂತಕ ಗಿರೀಶನನ್ನ ಪೊಲೀಸರು ಪತ್ತೆ ಮಾಡಿದ್ದೇ ಒಂದು ರೋಚಕ

    Spread the loveಅಂಜಲಿ ಹಂತಕ ಗಿರೀಶನನ್ನ ಪೊಲೀಸರು ಪತ್ತೆ ಮಾಡಿದ್ದೇ ಒಂದು ರೋಚಕ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ …

    Leave a Reply

    error: Content is protected !!