ಹುಬ್ಬಳ್ಳಿ: ನಗರದ ಹಳೇ ಹುಬ್ಬಳ್ಳಿಯ ಬ್ರಹ್ಮಾನಂದ ಶಾಲೆ ಬಳಿ ಇತ್ತೀಚೆಗೆ ನಡೆದಿದ್ದ ನೇಕಾರ ನಗರದ ನೂರಾನಿ ಪ್ಲಾಟ್‌ನ ಮುಸ್ತಾಕ್‌ಅಲಿ ಅತ್ತಾರ(23) ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೂರಾನಿ ಪ್ಲಾಟ್‌ನ ಮಲೀಕ್, ಗೌಸ್, ಮೋಹ್ಸಿನ್ ಹಾಗೂ ಅಖ್ತರ್ ಬಂಧಿತರು.
ಪ್ರಮುಖ ಆರೋಪಿ ಮಲೀಕ್ ಸಹೋದರಿಯನ್ನು ಮೃತ ಅತ್ತಾರ ಪೀಡಿಸುತ್ತಿದ್ದ. ಇದೇ ವಿಷಯಕ್ಕೆ ಮಲೀತ್ ತನ್ನ ಸಹಚರರೊಂದಿಗೆ ಮೇ 15ರಂದು ರಾತ್ರಿ ಚಾಕುವಿನಿಂದ ಇರಿದು ಆತನನ್ನು ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
