ಹುಬ್ಬಳ್ಳಿ ; ಕೋವೀಡ್ ರೋಗಿಯೊಬ್ಬರಿಗೆ ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಯುವನೋರ್ವನಿಗೆ ಸರಿಯಾಗಿ ಚಿಕಿತ್ಸೆ ನೀಡಲಿಲ್ಲ ಹಾಗೂ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದಾನೆ ಎಂದು ಮೃತನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿಂದು ನಡೆದಿದೆ.
ಧಾರವಾಡ ಜಿಲ್ಲೆಯ ಧಾರವಾಡ ತಾಲ್ಲೂಕಿನ ಶಿವಳ್ಳಿ ಗ್ರಾಮದ ಈಶ್ವರ ಧಾರವಾಡ ಎಂಬಾತನನ್ನು ಕಳೆದ ಎರಡು ದಿನಗಳ ಹಿಂದೆ ಕಿಮ್ಸ್ ಆಸ್ಪತ್ರೆಗೆ ಅನಾರೋಗ್ಯದ ಕಾರಣ ದಾಖಲು ಮಾಡಲಾಗಿತ್ತು.ಆದರೆ ರಕ್ತ ಕೊರತೆ ಸೇರಿದಂತೆ ಹಲವಾರು ಚಿಕಿತ್ಸೆ ಮಾಡಲು ವೈದ್ಯರು ಮುಂದಾಗಿದ್ದರು. ಆದರೆ ಏಕಾಏಕಿ ಆಕ್ಸಿಜನ್ ಸಹ ಕೊರತೆ ಇದೆ ಅಂತಾ ವೈದ್ಯರು ಹೇಳಿದರು ಅಂತಾ ಮೃತನ ತಂದೆ ಆರೋಪಿಸಿದರು.
ಇದೇ ವೇಳೆ ಮಗನನ್ನು ಕಳೆದುಕೊಂಡ ತಾಯಿ, ಪತ್ನಿ, ಸಹೋದರನ ಆಕ್ರಂದನ ಮುಗಿಲು ಮುಟ್ಟಿತು. ಅಷ್ಟೇ ಅಲ್ಲಾ ವೈದ್ಯ ನಿರ್ಲ್ಯಕ್ಷ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ರೋಧನೆ ಮಾಡುವ ದೃಶ್ಯ ಮನಕಲುಕುವಂತಿತ್ತು.
Check Also
ಧಾರವಾಡ ಲೋಕಸಭಾ ರಿಸಲ್ಟ್- ಇತಿಹಾಸ ಸೃಷ್ಟಿದ ಪ್ರಲ್ಹಾದ್ ಜೋಶಿ
Spread the loveಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸ ಮಹತ್ವ ಇದೆ. ಕರ್ನಾಟಕ ಅಷ್ಟೇ ಅಲ್ಲಾ ದೇಶದ …