ಹುಬ್ಬಳ್ಳಿ: ನಗರದ ಕಿಮ್ಸ್ ಆಸ್ಪತ್ರೆಯ ವಸತಿ ಗೃಹದಲ್ಲಿ ಮನೆ ಕಳವು ಪ್ರಕರಣ ಸಂಬಂಧಿಸಿದಂತೆ ಕಳ್ಳತನ ಪ್ರಕರಣ ಭೇದಿಸಿ ನ್ಯಾಯ ಕೊಡಿ ಎಂದು ಪೊಲೀಸ್ ಮೊರೆ ಹೋದ ಮನೆಯ ಮಾಲೀಕರ ಮೇಲೆಯೇ ದೌರ್ಜನ್ಯ ಎಸಗಲಾಗಿದ್ದು ಈ ಕುರಿತು ಪೊಲೀಸರ ಮೇಲಿಯೇ ಕೇಲವರು ದಬ್ಬಾಳಿಕೆ ಮಾಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ
ಎಸಿಪಿ ವಿನೋದ್ ಮುಕ್ತೇದಾರ ಮಧ್ಯಸ್ಥಿಕೆಯಲ್ಲಿ ಸಂಧಾನ ವಿಫಲಗೊಂಡಿದ್ದು ಹಿಂದುಪರ ಸಂಘಟನೆ ಕಾರ್ಯಕರ್ತರು ಪೊಲೀಸ್ ಠಾಣೆ ಮುಂದೆಯೇ ಧರಣಿ ನಡೆಸಲಾಗುತ್ತದೆ.
ಸೋಮವಾರ ಬೆಳಿಗ್ಗೆ 3.45ರ ವೇಳೆ ವಸತಿ ಗೃಹದಲ್ಲಿನ ಮೂರು ಮನೆಗಳ ಬಾಗಿಲು ಮುರಿದು ಕಳವು ಮಾಡಲಾಗಿದ್ಸು ಒಂದು ತಿಂಗಳ ಹಿಂದೆಯಷ್ಟೇ ಮೂರು ಮನೆ ಕಳವು ಪ್ರಕರಣ ನಡೆದಿತ್ತು. ಮೇಲಿಂದ ಮೇಲೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು ನ್ಯಾಯ ಕೊಡಿ ಎಂದು ಕಳ್ಳತನವಾದ ಮನೆಯ ಮಾಲೀಕರ ಮೇಲೆಯೇ ಪೊಲೀಸರು ಮಾನವೀತೆ ಮೀರಿ ಹಿಗ್ಗಾಮುಗ್ಗ ಎಳೆದಾಡಿ, ಬಾಯಿಗೆ ಬಂದಂತೆ ನಿಂದನೆ ಮಾಡಿ ಪೊಲೀಸ್ ಜೀಪ್ ನಲ್ಲಿಯೇ ಠಾಣೆಗೆ ಕರೆದುಕೊಂಡು ಹೋದರು. ಈ ನಡುವೆ ಪೊಲೀಸರ ಜೊತೆಗೆ ಕೇಲ ಹಿಂದು ಪರ ಸಂಘಟನೆಯ ಮುಖಂಡರು ಅನುಚಿತವಾಗಿ ವರ್ತನೆ ಮಾಡಿದ್ದಾರೆ ಎಂದು ಅವರ ಜೊತೆಗೆ ಅವರ ಜೊತೆಗೆ ಸಹ ವಾಗ್ವಾದಕ್ಕೆ ಇಳಿದರು. ಇಷ್ಟೇಲ್ಲಾ ಬೆಳವಣಿಗೆ ಆದ ನಂತರ ಮತ್ತೆ ಹಿಂದು ಪರ ಸಂಘಟನೆಯ ಮುಖಂಡರು ವಿದ್ಯಾನಗರ ಪಿಐ ಮಹಾಂತೇಶ ಹೊಳಿ ವಿರುದ್ಧ ದೂರು ನೀಡಿದ್ದರು. ಆದರೆ 16 ಗಂಟೆಗಳ ಕಾಲ ಆದರು ಪಿಐ ಮಹಾಂತೇಶ ಹೂಳಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ವಿದ್ಯಾನಗರ ಪೊಲೀಸ್ ಠಾಏಗೆ ಹಿಂದುಪರ ಸಂಘಟನೆ ಕಾರ್ಯಕರ್ತ ರು ಆಗಮಿಸಿದ್ದರು.ಆದರೆ ಎಸಿಪಿ ವಿನೋದ್ ಮುಕ್ತೇದಾರ ಅವರು ಹಿಂದುಪರ ಸಂಘಟನೆ ಮುಖಂಡರನ್ನು ಅನಗತ್ಯವಾಗಿ ರಗಳೆ ಮಾಡುವುದು ಬೇಡಾ ಎಂದು ಮನವೊಲಿಸಲು ಮುಂದಾಗಿದ್ದರು. ಆದರೆ ಸಂಧಾನ ಸಭೆ ವಿಪಲಗೊಂಡಿದ್ದು ಧರಣಿಯನ್ನು ಮುಂದುವರೆಸಲಾಗಿದೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥಿತೆಯನ್ನ ಕಾಪಾಡಿಕೊಂಡು ಸಮಾಜದ ಸ್ವಾಸ್ಥ್ಯ ಕಾಪಾಡುವ ಪೊಲೀಸರಿಂದಲೇ ಶಾಂತಿ ಕದಡುವ ಕೆಲಸ ನಡೆಯುತಿದ್ದೆ. ಆದ್ದರಿಂದ ತಪ್ಪಿತಸ್ಥ ಪೊಲೀಸ್ ಇನ್ಸ್ಪೆಕ್ಟರ್ ಮಹಾಂತೇಶ ಹೊಳಿ , ಪೊಲೀಸ್ ಪೇದೆಗಳಾದ ಕೃಷ್ಣಾ ಮೊಟೇಬೆನ್ನೂರು ಅವರಿಂದ ದೌರ್ಜನ್ಯ ನಡೆದಿದೆ. ಕಳ್ಳತನ ಮಾಡಿದ ಕಳ್ಳನ್ನನ್ನ ಹಿಡಿಯಿರಿ ಎಂದರೆ ನೀನೇ ಕಳ್ಳ ಇದಿಯಾ ಅಂತಾ ದೂರು ನೀಡಲು ಬಂದವರನ್ನ ಹಿಗ್ಗಾಮುಗ್ಗ ಥಳಿಸಿದ್ದಾರೆ ಎಂದು ಹಿಂದು ಸಂಘಟನೆ ಮುಖಂಡ ಜಯತೀರ್ಥ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಯಾವುದೇ ಕಾರಣಕ್ಕೋ ಸಂಧಾನವಿಲ್ಲ ಪೊಲೀಸ್ ಠಾಣೆ ಆವರಣದಲ್ಲಿ ಮನೆ ಕಳ್ಳತನ ಆದ ಬಗ್ಗೆ ನ್ಯಾಯ ಕೊಡಿ ಅಂತಾ ಕೇಳಲು ಬಂದವರನ್ನ ಅನಗತ್ಯವಾಗಿ ರೊಚ್ಚಿಗೆ ಎಬ್ಬಿಸಿ ಅವರ ಮೇಲೆಯೇ ದಬ್ಬಾಳಿಕೆ ಮಾಡಿ ನಂತರ ದೂರುದಾರ ಕೂಗಾಗುಡುವುದನ್ನ ವಿಡಿಯೋ ಮಾಡಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿ ತಾವು ಒಳ್ಳೆಯವರು ಎಂಬ ರೀತಿಯಲ್ಲಿ ಬಿಂಬಿಸಿಕೊಳ್ಳುವ ಇಂಥ ಪೊಲೀಸರ ಮೇಲೆ ಕ್ರಮ ಆಗಬೇಕು ಎಂದು ವಿಶ್ವ ಹಿಂದು ಪರಿಷತ್ ಮುಖಂಡ ಗೋವರ್ಧನ ಒತ್ತಾಯ ಮಾಡಿದರು.
ತಡರಾತ್ರಿ ಪೊಲೀಸ್ ಕಮೀಷನರ್ ಲಾಭುರಾಮ್ ಅವರು ವಿವಾದ ಇತ್ಯರ್ಥ ಮಾಡಲು ಮುಂದಾಗಿದ್ದರು.ಆದರೆ ಪ್ರಕರಣ ಗಂಭೀರತೆ ಪಡೆದಿದ್ದು ವಿದ್ಯಾನಗರ ಪೊಲೀಸ್ ಇನ್ಸ್ಪೆಕ್ಟರ್ ಮಹಾಂತೇಶ ಹೂಳಿ ಹಾಗೂ ಕೃಷ್ಣ ಮೊಟೆಬೆನ್ನೂರು ಅವರನ್ನ ವರ್ಷದ ವರ್ಗಾವಣೆ ಮಾಡಿ ಕಾನೂನು ಕ್ರಮಕ್ಕೆ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಪ್ರಕರಣ ಯಾವ ಹಂತಕ್ಕೆ ಹೋಗುತ್ತದೆ ನೋಡಬೇಕು.
