ಹುಬ್ಬಳ್ಳಿ; ತಾಲೂಕಿನ ನೂಲ್ವಿ ಬೆಳಗಲಿ ಕ್ರಾಸ್ ಬಳಿ ಮೇಲಿಂದ ಮೇಲೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು ಯಾವುದೇ ರೀತಿಯ ಸುರಕ್ಷತೆ ಇಲ್ಲದಂತಾಗಿದ್ದು ಇದೇ ನಾಳೆ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ನೂಲ್ವಿ ಬೆಳಗಲಿ ಕ್ರಾಸ್ ಬ್ರ್ಯಾಂಡಿ ಪ್ಯಾಕ್ಟರಿ ಸಮೀಪಎನ್ ಎಚ್ ಬಂದ್ ಮಾಡಿ ಪ್ರತಿಭಟನೆ ಎಂದು ರಾಷ್ಟ್ರೀಯ ರೈತ ರತ್ನ ಭಾರತ ಸಂಘಟನೆಯ ಉಪಾಧ್ಯಕ್ಷರು ಹಾಗೂ ಮಹದಾಯಿ ಹೋರಾಟಗಾರರಾದ ಹೇಮನಗೌಡರ ಬಸನಗೌಡರ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಗುರುವಾರ ಹುಬ್ಬಳ್ಳಿ ತಾಲ್ಲೂಕಿನ ನೂಲ್ವಿ ಗ್ರಾಮದಲ್ಲಿ ಮಾತನಾಡಿದ ಅವರು,
ಈ ಪ್ರದೇಶದ ಸುತ್ತಲೂ ಸಾಕಷ್ಟು ಅಪಘಾತಗಳು ಆಗುತ್ತಿವೆ ಹಲವಾರು ಅಮಾಯಕರು ಜೀವ ಕಳೆದುಕೊಂಡಿದ್ದು ಇನ್ನು ಕೆಲವರು ಶಾಶ್ವತ ಅಂಗವೀಕಲರಾಗಿದ್ದಾರೆ.
ಇಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡ ಬೇಕು ಮತ್ತು ಇಲ್ಲಿ ಪ್ಲೈಓವರ್ ನಿರ್ಮಾಣ ಮಾಡಬೇಕು. ಸಂಬಂಧಿಸಿದ ಅಧಿಕಾರಿಗಳಲ್ಲಿ ಮನವಿ ಮಾಡಿದರು ಏನು ಪ್ರಯೋಜನ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿನ್ನೆ ಬೈಕ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ಸವಾರರು ಗಂಭೀರವಾಗ ಗಾಯಗೊಂಡಿದ್ದು ಬಹಳ ಆತಂಕ ಮೂಡಿಸಿದೆ ಎಂದರು.