ಹುಬ್ಬಳ್ಳಿ: ‘ನಗರದ ಕೆಎಲ್ಇ ಸಂಸ್ಥೆಯ ಐಎಂಎಸ್ಆರ್ ಎಂಬಿಎ ಮಹಾವಿದ್ಯಾಲಯದಲ್ಲಿ ಪದವಿ ವಿದ್ಯಾರ್ಥಿಗಳಿಗಾಗಿ ಮೇ 20ರಂದು ರಾಜ್ಯಮಟ್ಟದ ಮ್ಯಾನೇಜ್‌ಮೆಂಟ್ ಉತ್ಸವ ‘ಮ್ಯಾಡ್ಸ್ ಮೀಟ್ – 2022’ ಹಮ್ಮಿಕೊಳ್ಳಲಾಗಿದೆ’ ಎಂದು ಕೆಎಲ್ಇ ಐಎಂಎಸ್ಆರ್ ನಿರ್ದೇಶಕ ಡಾ. ರಾಜೇಂದ್ರಪ್ರಸಾದ ಹನಗಂಡಿ ಹೇಳಿದರು.
‘ಕಾಲೇಜಿನಲ್ಲಿ ನಡೆಯುತ್ತಿರುವ ನಾಲ್ಕನೇ ಉತ್ಸವ ಇದಾಗಿದೆ. ಜಾಗತೀಕರಣದ ನಿಟ್ಟಿನಲ್ಲಿ ಉದ್ಯಮಶೀಲತೆಯ ಪ್ರಾಮುಖ್ಯತೆಯೊಂದಿಗೆ ನಾವೀನ್ಯತೆ ಹಾಗೂ ಸೃಜನಶೀಲ ಮನಸ್ಥಿತಿಯನ್ನು ವಿದ್ಯಾರ್ಥಿಗಳಲ್ಲಿ ರೂಪಿಸುವ ಉದ್ದೇಶವನ್ನು ಉತ್ಸವ ಹೊಂದಿದೆ. ಜೊತೆಗೆ, ಸ್ಟಾರ್ಟ್‌ಅಪ್‌ಗಳ ಮಹತ್ವವನ್ನು ತಿಳಿಸಲಾಗುವುದು’ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಕರ್ಟನ್ ರೈಸರ್, ರೈಸಿಂಗ್ ಪಲಾಡಿನ್, ಮ್ಯಾಚ್ ವಿಜ್ ಹಾಗೂ ನೋವಸ್ – ದಿ ಸೋಶಿಯಲ್ ಎಂಟರ್‌ಪ್ರಿನರ್ ಎಂಬ ನಾಲ್ಕು ಸುತ್ತುಗಳನ್ನು ಉತ್ಸವ ಒಳಗೊಂಡಿದ್ದು, ರಾಜ್ಯ ವಿವಿಧ ಕಾಲೇಜುಗಳಿಂದ ಸುಮಾರು 20ಕ್ಕೂ ಹೆಚ್ಚು ತಂಡಗಳು ಭಾಗವಹಿಸಲಿವೆ’ ಎಂದರು.
‘ಉದ್ಘಾಟನಾ ಸಮಾರಂಭಕ್ಕೆ ಟೈ ಅಧ್ಯಕ್ಷೆ ಶ್ರಾವಣಿ ಪವಾರ್, ಸ್ವರ್ಣ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ವಿ.ಎಸ್.ವಿ. ಪ್ರಸಾದ್, ಕೆಎಲ್ಇ ಆಡಳಿತ ಮಂಡಳಿಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಹಿನ್ನಲೆ ಗಾಯಕಿ ಹಾಗೂ ಸಂಗೀತ ನಿರ್ದೇಶಕಿ ಡಾ. ಶಮಿತಾ ಮಲ್ನಾಡ್, ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಬಸನಗೌಡರ, ಕೆಎಲ್ಇ ಕಾರ್ಯಾಧ್ಯಕ್ಷ ಎಸ್.ಸಿ. ಮೆಟಗುಡ್ಡ ಅತಿಥಿಗಳಾಗಿ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.
Check Also
*ಲೋಕಸಮರದ ಕಣದಿಂದ ಹಿಂದೆ ಸರಿದ ದಿಂಗಾಲೇಶ್ವರ ಸ್ವಾಮೀಜಿ*
Spread the loveಧಾರವಾಡ: ಲೋಕಸಭಾ ಚುನಾವಣಾ ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಹೇಳಿದ್ದ ಫಕೀರ ದಿಂಗಾಲೇಶ್ವರ ಸ್ವಾಮೀಜಿ …