Breaking News

ಗಾಂಜಾ ಮಾರುತ್ತಿದ್ದ 12 ಆರೋಪಿಗಳು ಬಂಧನ*. ಕಾರು, ಎರಡು ತಲ್ವಾರ್, ಡ್ರ್ಯಾಗರ್, 10 ಮೊಬೈಲ್ ಪೋನ್‌ಗಳು ವಶ. ಎನ್ ಶಶಿಕುಮಾರ್.

Spread the love

ಹುಬ್ಬಳ್ಳಿ: ಇಂದು ನಗರದಲ್ಲಿ ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಿ ಗಾಂಜಾ ಮಾರಾಟ ಮಾಡುವ ಆರೋಪಿಗಳ ಕುರಿತು ಮಾಹಿತಿ ನೀಡಿದರು.

ಬೆಂಡಿಗೇರಿ ಠಾಣೆ
ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಗಾಂಜಾ ಮಾರಾಟ ಮಾಡುತ್ತಿದ್ದವರನ್ನ ಪೊಲೀಸರು ಬಂಧಿಸಿ, 2.50ಲಕ್ಷ ರೂ. ಮೌಲ್ಯದ 2.5 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಓಡಿಸ್ಸಾ ಮೂಲದ ಕೇಶಬಚಂದ್ರ, ನೀಲಾಂಬರ ರಾವುತ್, ಉತ್ತರಖಂಡದ ಮಹ್ಮದಲಿ, ಹಾವೇರಿಯ ತೌಸಿಫ್ ಅಹ್ಮದ್, ಹುಬ್ಬಳ್ಳಿಯ ಪವನ , ಸಿದ್ಧಾರ್ಥ, ಮಂಜುನಾಥ, ನದೀಂ, ವಿಠ್ಠಲ, ಶಾನವಾಜ, ಗಣಪತಸಾ, ಕಾರ್ತಿಕ
ಸೇರಿ 12 ಜನರನ್ನು ಬಂಧಿಸಲಾಗಿದೆ. ಅವರಿಂದ 5ಲಕ್ಷ ರೂ. ಮೌಲ್ಯದ ಕಾರು, ಎರಡು ತಲ್ವಾರ್, ಡ್ರ್ಯಾಗರ್, 10 ಮೊಬೈಲ್ ಪೋನ್‌ಗಳು ಹಾಗೂ 2ಸಾವಿರ ರೂ. ನಗದು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ
ಅವರು, ಗಬ್ಬೂರ ಕ್ರಾಸ್ ಬಳಿ ಆರೋಪಿಗಳನ್ನು ಕರೆದೊಯ್ದು ಪಂಚನಾಮೆ ನಡೆಸುತ್ತಿದ್ದಾಗ, ಕೇಶಬಚಂದ್ರ, ನೀಲಾಂಬರ ಮತ್ತು ತೌಸಿಫ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದರು. ಆ ವೇಳೆ ಸಿಸಿಬಿ ವಿಭಾಗದ ಪಾಟೀಲ ಮತ್ತು ಹೆದ್ದೇರಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಿಮ್ಸ್‌ಗೆ ದಾಖಲಿಸಲಾಗಿದೆ ಎಂದು ತಿಳಿಸಿದರು.

ಬೈಟ್- ಶಶಿಕುಮಾರ್, ಪೊಲೀಸ್ ಕಮೀಷನರ್ ಹುಬ್ಬಳ್ಳಿ ಧಾರವಾಡ


Spread the love

About Karnataka Junction

    Check Also

    ಅಂತರರಾಜ್ಯ ಗಾಂಜಾ ಮಾರಾಟಗಾರನನ್ನು ಬಂಧನ- ಪೊಲೀಸ್ ಕಮೀಷನರ್ ಶಶಿಕುಮಾರ್

    Spread the loveಅಂತರರಾಜ್ಯ ಗಾಂಜಾ ಮಾರಾಟಗಾರನನ್ನು ಬಂಧನ- ಪೊಲೀಸ್ ಕಮೀಷನರ್ ಶಶಿಕುಮಾರ್ ಹುಬ್ಬಳ್ಳಿ: ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಬಳಿಯಲ್ಲಿ ಗಾಂಜಾ …

    Leave a Reply

    error: Content is protected !!