Breaking News

ವ್ಯಕ್ತಿಯೊಬ್ಬರಿಂದ ಹಣ ದೋಚಿಕೊಂಡು ಪರಾರಿಯಾಗಿದ್ದ ಇಬ್ಬರ ಬಂಧನ

Spread the love

ಹುಬ್ಬಳ್ಳಿ: ನಗರದ ಮಹಾನಗರ ಪಾಲಿಕೆ ಸಮೀಪದ
ಚಿಟಗುಪ್ಪಿ ಆಸ್ಪತ್ರೆ ಬಳಿ ಬುಧವಾರ ವ್ಯಕ್ತಿಯೊಬ್ಬರಿಂದ ಹಣ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಉಪನಗರ ಠಾಣೆ ಪೊಲೀಸರು ಘಟನೆ ನಡೆದ 24 ತಾಸಿನೊಳಗೆ ಗುರುವಾರ ಬಂಧಿಸಿದ್ದಾರೆ.
ಮಲಿಕ್ ಮತ್ತು ಹಾಜಿ ಅಲಿ ಬಂಧಿತರು. ಆರೋಪಿಗಳಿಂದ ₹11 ಸಾವಿರ ನಗದು ಹಾಗೂ ಕೃತ್ಯಕ್ಕೆ ಬಳಸಿದ ಆಟೊ ಮತ್ತು ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಬಂಧನದಿಂದ ವಿದ್ಯಾನಗರ ಮತ್ತು ಉಪನಗರ ಠಾಣೆ ವ್ಯಾಪ್ತಿಯ ಎರಡು ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಸದ್ಯ ಇಬ್ಬರನ್ನೂ ನ್ಯಾಯಾಂಗ ಸುಪರ್ದಿಗೆ ನೀಡಲಾಗಿದೆ.


Spread the love

About gcsteam

    Check Also

    ಪಾಕಿಸ್ತಾನ ಜಿಂದಾಬಾದ್ ಅಂತಾ ಎಷ್ಟು ಸಲ ಕೂಗಲಾಗಿದೆ, ಎಷ್ಟು ಜನರನ್ನ ಬಂಧನ ಮಾಡಲಾಗಿದೆ- ಸಚಿವ ಲಾಡ್

    Spread the loveಹುಬ್ಬಳ್ಳಿ; ವಿಧಾನ ಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಯಾರೇ ತಪ್ಪು ಮಾಡಲಿ ಕ್ರಮ …

    Leave a Reply