Breaking News

ಕೊರೊನಾ ರೋಗಿಗಳನ್ನ ಆಸ್ಪತ್ರೆಗೆ ಕರೆದೊಯ್ಯುವ ವಾಹನಗಳಿಗೆ ಸಚಿವರಿಂದ ಚಾಲನೆ

Spread the love

ಶಿರಸಿ: ಶಾಸಕರ ಅನುದಾನದಲ್ಲಿ ಕೊರೊನಾ ಸೋಂಕಿತ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ನೀಡಿರುವ ಹೊಸ ಆಂಬ್ಯುಲೆನ್ಸ್​ಗಳಿಗೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಚಾಲನೆ ನೀಡಿದರು.
ವಿಧಾನಸಭಾ ಸ್ವಕ್ಷೇತ್ರ ಯಲ್ಲಾಪುರಕ್ಕೆ ನಾಲ್ಕು ಆಂಬ್ಯುಲೆನ್ಸ್ ವಾಹನಗಳನ್ನು ಖರೀದಿಸಲಾಗಿದೆ. ಹೊಸದಾಗಿ ಬಂದ ಆಂಬ್ಯುಲೆನ್ಸ್ ಏರಿ ಕುಳಿತ ಸಚಿವರು ತಾವೇ ವಾಹನ ಚಲಾಯಿಸಿದರು. ಈ ಮೂಲಕ ಯಲ್ಲಾಪುರದ ಪ್ರವಾಸಿ ಮಂದಿರದಿಂದ ಆರಂಭಿಸಿ ಯಲ್ಲಾಪುರ ನಗರಕ್ಕೆ ಒಂದು ಸುತ್ತುಹಾಕಿದರು. ಇದೇ ವೇಳೆ ಪಕ್ಕದ ಸೀಟಿನಲ್ಲಿ ಕುಳಿತು ವಿಡಿಯೋ ಮಾಡುತ್ತಿದ್ದ ವ್ಯಕ್ತಿ ಬಳಿ, ‘ಕೇಸ್​ ಆಗಲ್ಲ, ನನ್ನ ಹತ್ತಿರ ಲೈಸನ್ಸ್ ಇದೆ’ ಎಂದು ನಗೆಚಟಾಕಿ ಹಾರಿಸಿದರು.ಆಂಬುಲೆನ್ಸ್ ಚಲಾಯಿಸಿದ ಸಚಿವ ಹೆಬ್ಬಾರ್ ಅವರಿಗೆ ಈ ಹಿಂದೆ ಲಾರಿ ಚಾಲಕರಾಗಿ ಕಾರ್ಯ ನಿರ್ವಹಿಸಿದ ಅನುಭವವಿದೆ. ನಂತರ ಬಿಜೆಪಿಯಲ್ಲಿ ಕಾರ್ಯಕರ್ತರಾಗಿ, ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಕೆಲವು ರಾಜಕೀಯ ಕಾರಣಕ್ಕೆ ಕಾಂಗ್ರೆಸ್​ಗೆ ಬರುವ ಮೂಲಕ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಅದರ ನಂತರ ಪುನಃ ಬಿಜೆಪಿ ಸೇರ್ಪಡೆಯಾಗಿ ಇದೀಗ ರಾಜ್ಯ ಕಾರ್ಮಿಕ ಸಚಿವರಾಗಿದ್ದಾರೆ.


Spread the love

About gcsteam

    Check Also

    ಉಣಕಲ್ ಕ್ರಾಸ್ ರಾಮಲಿಂಗೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವ

    Spread the loveಹುಬ್ಬಳ್ಳಿ- ರಾಮಲಿಂಗೇಶ್ವರ ದೇವಸ್ಥಾನ ಬಿ.ಆರ್.ಟಿ.ಎಸ್. ಯೋಜನೆಯ ಅನ್ವಯ ಸ್ಥಳಾಂತರ ಆಗುವ ವಿಷಯ ಬೇಸರದ ಸಂಗತಿ ಆದರೂ ಸರಕಾರ …

    Leave a Reply