Breaking News

ಚೆನ್ನಮ್ಮ ಸರ್ಕಲ್ ಬಳಿ ಸರಿಯಾಗಿ ಮಾಸ್ಕ್ ಧರಸದ ಬೈಕ್ ಸವಾರನೋರ್ವನಿಗೆ ದಂಡಕ್ಕೆ ಕೊರತೆಯಾಗಿದ್ದ ಹಣ ನೀಡಿ ಉದಾರತೆ ಮೆರೆದ ಪಿಐ ರವೀಚಂದ್ರ ಬಡಫಕೀರಪ್ಪನವರ

Spread the love

ಹುಬ್ಬಳ್ಳಿ- ಲಾಕ್ ಡೌನ್ ಸಂದರ್ಭದಲ್ಲಿ ಜನರು ಅನುಭವಿಸುತ್ತಿರುವ ಕಷ್ಟ ಒಂದಲ್ಲಾ ಎರಡಲ್ಲ ಈ ನಡುವೆಯೂ ಪೊಲೀಸರು ಕಟ್ಟುನಿಟ್ಟನ ಕರ್ತವ್ಯ ವೇಳೆ ಮಾನವೀಯತೆ ಮೆರೆಯುತ್ತಿರುವ ದೃಶ್ಯಗಳು ಬೆಳಕಿಗೆ ಬರುತ್ತಿವೆ.
ಹೌದು.. ಇಂತಹದೊಂದು ಪ್ರಕರಣ ಶುಕ್ರವಾರ ನಗರದ ಚೆನ್ನಮ್ಮ ಸರ್ಕಲ್ ಬಳಿ ಔಷಧಿ ಅಂಗಡಿಗೆ ಹೋಗಿದ್ದ ಯುವಕನೋರ್ವ ಮಾಸ್ಕ್ ಸರಿಯಾಗಿ ಧರಸದೇ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ ಕಾರಣ ಪೊಲೀಸರು ದಂಡ ಹಾಕಲು ಮುಂದಾದರು. ಈ ಸಂದರ್ಭದಲ್ಲಿ ಈ ಯುವಕ ನನ್ನ ಹತ್ತಿರ ದಂಡ ಕಟ್ಟುವಷ್ಟು ಹಣ ಇಲ್ಲ ಎಂದ ಪರಿ ಪರಿಯಾಗಿ ಬೇಡಿಕೊಂಡ. ಆದರೆ ಪೊಲೀಸರು ತಮ್ಮ ಕರ್ತವ್ಯ ಮಾಡಲೇ ಬೇಕು.. ದಂಡ ಕಟ್ಟಿ ಇಲ್ಲಾ ಬೈಕ್ ವಶಕ್ಕೆ ಪಡೆಯುವುದಾಗಿ ತಾಕೀತು ಮಾಡಿದರು. ಈ ನಡುವೆ ಯುವಕನ ಸಮಸ್ಯೆ ಅರಿತ ಉಪನಗರ ಪೊಲೀಸ್ ಇನ್ಸೆಪೆಕ್ಟರ್ ರವೀಂಚಂದ್ರ ಬಡಫಕೀರಪ್ಪನವರ ತಕ್ಷಣವೇ ನಿನ್ನ ಹತ್ತಿರ ಎಷ್ಟು ಇದೆ ಎಂದ ಯುವಕನಿಗೆ 230 ಇದೆ ಸರ್ ಅಂದಾಗ 20 ರೂಪಾಯಿ ನೀಡಿ ದಂಡ ಕಟ್ಡಿ ಹೋಗು ಎಂದು ಮಾನವೀಯತೆ ಮೆರೆದರು.
ಈ ಹಿಂದೆ ಸಹ ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಔಷಧಿಗಾಗಿ ಪರದಾಡುತಿದ್ದ ಕುಟುಂಬವೊಂದಕ್ಕೆ ಔಷಧವನ್ನು ಹುಬ್ಬಳ್ಳಿಯಿಂದ ಕಳುಹಿಸಿ ಮಾನವೀಯತೆಗೆ ಮೆರೆದಿದ್ದರು‌.


Spread the love

About Karnataka Junction

[ajax_load_more]

Check Also

ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ದ FIR ದಾಖಲು

Spread the loveಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಮೈಸೂರಿನ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದೆ. ಕೇಸ್ ನಂಬರ್ …

Leave a Reply

error: Content is protected !!