ಹುಬ್ಬಳ್ಳಿಯಲ್ಲಿಯೇ ಬೀಡು ಬಿಟ್ಟ ಎನ್ ಐಎ ತಂಡ ಏನ್ ಮಾಡತಾ ಇದೆ ಗೊತ್ತಾ?
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣ ಹಿನ್ನೆಲೆನಾ? ಹುಬ್ಬಳ್ಳಿಗೆ ಟ್ರೇರಿರಸ್ಟ್ ಲಿಂಕಾ?
ಹುಬ್ಬಳ್ಳಿ: ಇಡೀ ರಾಷ್ಟ್ರಾದ್ಯಂತ ಬೆಚ್ಚಿಬೆಳಿಸಿದ್ದ ಬೆಂಗಳೂರಿನ ದಿ. ರಾಮೇಶ್ವರಂ ಕೆಫೆಯಲ್ಲಿನ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೋ ಹುಬ್ಬಳ್ಳಿಗೂ ಲಿಂಕ್ ಇದಿಯಾ ಎಂಬ ಬಗ್ಗೆ ಎನ್ ಐಎ ನಾಲ್ವರ ಅಧಿಕಾರಿಗಳ ತಂಡ ಹುಬ್ಬಳ್ಳಿಯ ತನಿಖೆ ಚುರುಕುಗೊಳಿಸಿದೆ.
ದಿ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು, ಶಂಕಿತ ಉಗ್ರರು
ಪ್ರತ್ಯೇಕ ಕೋಡ್ ವರ್ಡ್‌ಗಳ ಮೂಲಕ ಸಂಭಾಷಣೆ ನಡೆಸುತ್ತಿದ್ದರೆಂಬ ಮಾಹಿತಿ ಕಲೆಹಾಕಿದ ಬಗ್ಗೆ ಹುಬ್ಬಳ್ಳಿಗೂ ಲಿಂಕ್ ಇದೆ ಎನ್ನಲಾಗಿದೆ.
ಇಸ್ಲಾಮಿಕ್ ಸ್ಟೇಟ್ (ಐಎಸ್) ಸಂಘಟನೆ ಉಗ್ರರೊಂದಿಗೆ ನಂಟು ಹೊಂದಿದ್ದವರ ಜೊತೆ ಉಗ್ರರು ಸಂಪರ್ಕದಲ್ಲಿದ್ದರು. ಪ್ರಮುಖ ಉಗ್ರರ ಸೂಚನೆಯಂತೆ ವಿಧ್ವಂಸಕ ಕೃತ್ಯ ಎಸಗಲು ಅವರಿಬ್ಬರು ತಯಾರಿ ನಡೆಸುತ್ತಿದ್ದರು ಎಂಬ ಸಂಗತಿಯೂ ತನಿಖೆಯಿಂದ ಗೊತ್ತದ ನಂತರ ಎನ್ ಐ ಎ ತಂಡ ಫುಲ್ ಅಲರ್ಟ್ ಆಗಿತ್ತು.
‘ಬಾಂಬ್ ಸ್ಫೋಟದ ಸಂಚು ಹಾಗೂ ಪರಾರಿ ಮಾರ್ಗದ ಬಗ್ಗೆ ಶಂಕಿತರಿಬ್ಬರು ಕೋಡ್ ವರ್ಡ್ ಮೂಲಕ ಸಂಭಾಷಣೆ ನಡೆಸಿರುವುದಕ್ಕೆ ಪುರಾವೆಗಳು ಸಿಕ್ಕಿದ್ದು ಅದು ಹುಬ್ಬಳ್ಳಿಗೂ ಲಿಂಕ್ ಇದಿಯಾ ಅಥವಾ ಸ್ಪೂಟ್ ಪ್ರಕರಣದಲ್ಲಿ ಭಾಗಿಯಾದರು ಹುಬ್ಬಳ್ಳಿಗೆ ಬಂದಿದ್ದಾರೆ ಎಂಬ ವಿವಿಧ ಆಯಾಮಗಳ ಮೇಲೆ ತನಿಖೆ ನಡೆಸಲಾಗುತ್ತದೆ.