Breaking News

ಬಿಜೆಪಿಯವರ ಹರ್ ಘರ್ ತಿರಂಗಾ ಸ್ಲೋಗನ್ ಡೋಂಗಿ ರಾಜಕೀಯ- ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ

Spread the love

ಹುಬ್ಬಳ್ಳಿ:ಬಿಜೆಪಿಯವರ ಹರ್ ಘರ್ ತಿರಂಗಾ ಸ್ಲೋಗನ್ ಡೋಂಗಿ ರಾಜಕೀಯ ಎಂದು
ಹುಬ್ಬಳ್ಳಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದರು.
ಇಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು,
ಡೋಂಗಿ ರಾಜಕೀಯ ಇರಬಾರದು ಅಂತ ಹೇಳಿದ್ದೇನೆ ನಾನು ಮೊದಲುಲಿನಿಂದಲೂ
ಹಿಂದೆ ಆರ್‌ಎಸ್ಎಸ್‌ನ ಪ್ರಮುಖರು ತ್ರಿವರ್ಣ ರಾಷ್ಟ್ರಧ್ವಜ ಬೇಡ ಅಂದಿದ್ದರು ಆದ್ದರಿಂದ ಈ ಬಗ್ಗೆ ಸಗ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ ಅವರು, ನಮ್ಮ ರಾಷ್ಟ್ರಧ್ವಜ, ಸವಿಂಧಾನವನ್ನು ವಿರೋಧ ಮಾಡಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯಾ
ಆರ್‌ಎಸ್‌ಎಸ್‌ನವರು ನಾಗರಪುರದ ಕಚೇರಿಯ ಮೇಲೆ ತ್ರಿವರ್ಣ ಧ್ವಜ ಹಾರಿಸ್ತಾರಾ.? ಎಂದು ಪ್ರಶ್ನೆ ಮಾಡಿದರು.
*ನಿತೀಶ್ ಕುಮಾರ್ ಒಳ್ಳೆಯ ಕೆಲಸ ಮಾಡಿದ್ದಾರೆ*
ಇನ್ನು ಬಿಹಾರ ರಾಜಕೀಯ ಬೆಳವಣಿಗೆ ಕುರಿತು ಮಾತನಾಡಿದ ಸಿದ್ದರಾಮಯ್ಯಾ ನವರು ನೀತೀಶ ಕುಮಾರ ಒಳ್ಳೆಯ ಕೆಲಸ ಮಾಡಿದ್ದಾರೆ. ಇವಾಗ ಏನು ಅಂತಾ ಎನ್‌ಡಿಎಗೆ ತೊರಿದಿದ್ದಾರೆ
ಅವರೊಬ್ಬ ಸಮಾಜವಾದಿ ಹಿನ್ನಲೆಯಿಂದ ಬಂದಿದ್ದರು ಕಾರಣ
ಕೋಮುವಾದಿ ಪಕ್ಷದ ಸ್ನೇಹ ಬಿಟ್ಟಿದ್ದು ಒಳ್ಳೆಯದು. ರಾಜ್ಯದಲ್ಲಿ ಮೂರನೇ‌ ಸಿಎಮ್ ಆದ್ರೂ ಬರಲಿ ನಾಲ್ಕನೇಯವರಾದ್ರು ಬರಲಿ ನಮಗೇನು ಸಂಬಂಧವಿಲ್ಲ ಎಂದರು.
*ಬಿಎಸ್‌ವೈ ಬದಲಾವಣೆ ಬಗ್ಗೆ ನಂಗೆ ಗೊತ್ತಿತ್ತು, ಅದಿಕ್ಕೆ ನಾನು ಈ ಹಿಂದೆ ಹೇಳಿದ್ದೆ.*.
ರಾಜ್ಯದಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ನನಗರ ಮೊದಲೇ ಗೊತ್ತಿತ್ತು ಎಂದ ಸಿದ್ದರಾಮಯ್ಯಾ ನವರು
ಆದ್ರೆ ಬೊಮ್ಮಾಯಿವರ ಬಗ್ಗೆ ನಂಗೆ ಮಾಹಿತಿ ಇಲ್ಲ. ಟ್ವೀಟ್ ಮಾಡಿದವರನ್ನ ಕೇಳಿ, ನಾನಂತು ಟ್ವೀಟ್ ಮಾಡಿಲ್ಲ ಎಂದರು.
ಮುಂಬರುವ ಚುನಾವಣೆಯಲ್ಲಿ ಬಾದಾಮಿಯಿಂದ ಸ್ಪರ್ಧಿಸೋ ಬಗ್ಗೆ ಇನ್ನೂ ನಿರ್ಧರಿಸಿಲ್ಲ.ಸುಮಾರು ಕಡೆ ಪಾದಯಾತ್ರೆಗೆ ಹೋಗಿದ್ದೇನೆ, ಅಲ್ಲೆಲ್ಲಾ ಎಲೆಕ್ಷನ್‌ ಗೆ ನಿಲ್ಲೊಕ್ಕಾಗುತ್ತಾ ಎಂದು ಮರು ಪ್ರಶ್ನೆ ಮಾಡಿದರು.
ಸಧ್ಯ ಬದಾಮಿಯ ಶಾಸಕ, ಮುಂದಿನ ಚುನಾವಣೆಯ ಬಗ್ಗೆ ನಾನೇ ಹೇಳ್ತಿನಿ ಎಂದರು


Spread the love

About Karnataka Junction

    Check Also

    ಮಹದಾಯಿ ಯೋಜನೆ ಜಾರಿಗೆ ಬಿಜೆಪಿ ಸಿದ್ಧ-‌ಪ್ರಲ್ಹಾದ್ ಜೋಶಿ

    Spread the loveಹುಬ್ಬಳ್ಳಿ : ಕಳಸಾ-ಬಂಡೂರಿ ಹಾಗೂ ಮಹದಾಯಿ ಯೋಜನೆ ಅನುಷ್ಠಾನಕ್ಕೆ ಭಾರತೀಯ ಜನತಾ ಪಕ್ಷ ಯಾವಾಗಲೂ ಸಿದ್ಧವಿದ್ದು ಈ …

    Leave a Reply

    error: Content is protected !!