ಹುಬ್ಬಳ್ಳಿ: ವಿಧಾನ ಪರಿಷತ್ತಿನ ಮೂರು ಪದವೀಧರರ ಮತ್ತು ಮೂರು ಶಿಕ್ಷಕರ ಕ್ಷೇತ್ರಗಳಿಗೆ ಬರುವ ಜೂನ್ 3 ರಂದು ಚುನಾವಣೆ (ಮತದಾನ) ನಡೆಯಲಿದ್ದು ಅದರಲ್ಲಿ ದಕ್ಷಿಣ ಪೂರ್ವ ಶಿಕ್ಷಕರ ಮತಕ್ಷೇತ್ರಕ್ಕೆ ಒಳಪಡುವ ದಾವಣಗೆರೆ ದಕ್ಷಿಣ ಮತ್ತು ಉತ್ತರ ವಿಧಾನಸಭಾ ಮತಕ್ಷೇತ್ರಗಳಿಗೆ ಉಸ್ತುವಾರಿಯನ್ನಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಸದಾನಂದ ವಿ.ಡಂಗನವರ ಅವರನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು ನೇಮಿಸಿದ್ದಾರೆ.
ಈ ಕೂಡಲೇ ಕಾರ್ಯಪ್ರವರ್ತರಾಗಿ ಎಲ್ಲಾ ಮುಖಂಡರುಗಳನ್ನ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕೆಂದು ಆದೇಶಿಸಿದ್ದಾರೆ.
ನೇಮಕ ಮಾಡಿದ ನಾಯಕರಿಗೆ ಸದಾನಂದ ಡಂಗನವರ ಅವರು ಧನ್ಯವಾದಗಳು ತಿಳಿದಿದ್ದಾರೆ.
