Breaking News

ಮೀಸಲಾತಿ ನೀಡಿದ್ದರೆ ಅಧಿವೇಶನದಲ್ಲಿ ಸುವರ್ಣ ಸೌಧಕ್ಕೆ ಮುತ್ತಿಗೆ ಎಚ್ಚರಿಕೆ

Spread the love

ಹುಬ್ಬಳ್ಳಿ ; ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಡಿಸೆಂಬರ್ 19ರ ವರೆಗೆ ಗಡುವು ನೀಡಲಾಗಿದ್ಧು ಅಷ್ಟರೊಳಗೆ ಮೀಸಲಾತಿ ಆಯೋಗ ವರದಿ ನೀಡಬೇಕು. ಇಲ್ಲದಿದ್ದರೆ ಡಿ.22 ರಂದು 25 ಲಕ್ಷ ಪಂಚಮಸಾಲಿಗಳಿಂದ ಬೆಳಗಾವಿ ಸುವರ್ಣ ವಿಧಾನಸೌಧದ ಮುಂದೆ ಮತ್ತೆ ಬೃಹತ್​ ಪ್ರತಿಭಟನೆ ಮಾಡುವುದಾಗಿ ಕೂಡಲ ಸಂಗಮ ಪೀಠದ ಬಸವಜಯ ಮೃಂತ್ಯುಂಜಯ ಶ್ರೀಗಳು ಹೇಳಿದರು.
ಹುಬ್ಬಳ್ಳಿ ತಾಲೂಕಿನ ಅಗಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹಕ್ಕೊತ್ತಾಯ ಮತ್ತು ಚನ್ನಮ್ಮ ಜಯಂತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇಂದು ರಾಜ್ಯಾದ್ಯಂತ ನಮ್ಮ ಜನ ಒಗ್ಗಟ್ಟಾಗಿದ್ದಾರೆ. ಜೊತೆಗೆ ಬೇರೆ ಸಮಾಜದವರು ನಮ್ಮನ್ನು ನೋಡಿ ತಮ್ಮ ಸಮಾಜಕ್ಮೂ ಮೀಸಲಾತಿ ಬೇಕು ಎಂದು ಹೋರಾಟ ಮಾಡಲು ಪ್ರೇರಣೆ ದೊರಕಿದಂತಾಗಿದೆ. ನಮ್ಮದು ಪ್ರಚಂಡ ಪಂಚಮಸಾಲಿ ಶಕ್ತಿಯಾಗಿ ಬದಲಾಗಿದೆ ಎಂದು ಹೇಳಿದರು.
ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ, ಪಂಚಮಸಾಲಿ ಸಮಾಜದಲ್ಲಿ ಸಹ ಆರ್ಥಿಕ ಸಾಮಾಜಿಕ ಹಾಗೂ ರಾಜಕೀಯವಾಗಿ ಸಾಕಷ್ಟು ಜನರು ಹಿಂದುಳಿದಿದ್ದಾರೆ.‌‌ಅವರು ಸಹ ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿದೆ. ಈಗ ಮೀಸಲಾತಿ ಒಂದೇ ದಾರಿ ಎಂದರು.
ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಮಾತನಾಡಿ, ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿಯಾಗಬೇಕಾದರೆ ಪಂಚಮಸಾಲಿ ಸಮಾಜದ ಆಶೀರ್ವಾದ ಬೇಕೇ ಬೇಕು. ನಾವು ನಮ್ಮ ಸಮಾಜಕ್ಕಷ್ಟೆ ಅಲ್ಲ ಉಳಿದ ಸಮಾಜದವರಿಗೂ ಮೀಸಲಾತಿ ಕೊಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ಕೆಲವರು ಸರಕಾರಕ್ಕೆ ಪಂಚಮಸಾಲಿಗಳ ಬಗ್ಗೆ ತಪ್ಪು ಕಲ್ಪನೆ ನೀಡಿದರು. ಆದರೆ ನಾವು ಯಾವಾಗ ಬೆಂಗಳೂರು ಹೊಕ್ಕು ಹೋರಾಟಕ್ಕೆ ಸಿದ್ದವಾದೆವೋ ಆವಾಗ ಸರಕಾರ ನಮ್ಮ ಬಗ್ಗೆ ಗಂಭೀರ ಚಿಂತನೆಗೆ ಮಣಿಯಲು ಆರಂಭಿಸಿತು ಎಂದರು. ಮಾಜಿ ಸಚಿವ ಪಿ ಸಿ ಸಿದ್ಣದನಗೌಡರ
ಎಸ್ ಐ ಚಿಕ್ಕನಗೌಡ, ಎಂ ಆರ್ ಪಾಟೀಲ ಸಿ. ಜಿ ಪಾಟೀಲ, ಲಿಂಗರಾಜ ಮೆಣಸಿನಕಾಯಿ, ಅರವಿಂದ ಕಟಗಿ ಹಾಗೂ ಸಮಾಜ ಪ್ರಮುಖರು ಭಾಗವಹಿಸಿದ್ದರು


Spread the love

About Karnataka Junction

    Check Also

    25 ರಂದು ಗಂಗಾ ಸೊಸೈಟಿ ರಜತ ಮಹೋತ್ಸವ

    Spread the loveಹುಬ್ಬಳ್ಳಿ: ಇಲ್ಲಿನ ಹಳೇ ಕೋರ್ಟ್ ಸರ್ಕಲ್ ರಸ್ತೆಯ ರೇವಣಕರ ಕಾಂಪ್ಲೆಕ್ಸ್‌ನಲ್ಲಿರುವ ಗಂಗಾ ಕೋ-ಆಪ್ ಕ್ರೆಡಿಟ್ ಸೊಸೈಟಿಯ ರಜತ …

    Leave a Reply

    error: Content is protected !!