ಹುಬ್ಬಳ್ಳಿ; ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ
ಯಮನೂರ ಅರೇಕುರಹಟ್ಟಿ ನಡುವೆ ನಡುವೆ ಒಂದು ಟ್ಯಾಂಕರ್ ಟಾಟಾ ಏದ್ ನಡುವೆ ಡಿಕ್ಕಿಯಾಗಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿ ಮೂವರಿಗೆ ಗಾಯವಾದ ಘಟನೆ ಶುಕ್ರವಾರ ಬೆಳಂ ಬೆಳ್ಳಿಗೆ ನಡೆದಿದೆ. ಟ್ಯಾಂಕರ್ ಹುಬ್ಬಳ್ಳಿಯಿಂದ ಬಾಗಲಕೋಟ ಕಡೆ ಹಾಗೂ ಟಾಟಾ ಏಸ್ ವಾಹನ ನರಗುಂದಿಂದ ಹುಬ್ಬಳ್ಳಿ ಕಡೆ ಬರುತ್ತಿತ್ತು ಎಂದು ಪ್ರಾಥಮಿಕ ಮಾಹಿತಿ ಪ್ರಕಾರ ತಿಳಿದು ಬಂದಿದೆ. ಮೃತನ್ನನ್ನ ದಾಟನಾಳ ಗ್ರಾಮದ ನಿವಾಸಿ ಎಂದು ಸಹ ತಿಳಿದು ಬಂದಿದೆ.
ನವಲಗುಂದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದರೆ. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇಲಿಂದ ಮೇಲೆ ಅಪಘಾತಗಳು ಹೆಚ್ವಾಗುತಿದ್ದು ಜನರು ರೋಸಿಹೋಗಿದ್ದಾರೆ.
