ಹುಬ್ಬಳ್ಳಿ: ಲಸಿಕೆ ಪಡೆಯುವ ಉದ್ದೇಶದಿಂದ ಕಿಮ್ಸ್‌ಗೆ ಆಗಮಿಸಿದ್ದ ಸಾರ್ವಜನಿಕರಿಗೆ ಗಂಟೆ ಗಟ್ಟಲೇ ಕಾಯುವ ಸ್ಥಿತಿ ನಿರ್ಮಾಣವಾಗಿತ್ತು.
ಮೊದಲೇ ನೋಂದಾಸಿಕೊಂಡಿದ್ದ ಸಾರ್ವಜನಿಕರು ಲಸಿಕೆ ಪಡೆಯುವುದಕ್ಕಾಗಿ ಕಿಮ್ಸ್ ಆವರಣಕ್ಕೆ ಬೆಳಂ ಬೆಳಿಗ್ಗೆ ಆಗಮಿಸಿದ್ದರು. ನಿಗದಿತ ಸಮಯಕ್ಕೆ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗದ ಹಿನ್ನೆಲೆಯಲ್ಲಿ ಬಹುತೇಕರು ಮನೆ ಕಡೆಗೆ ನಿರಾಸೆಯಿಂದ ಹೆಜ್ಜೆ ಹಾಕಿದರು.
ದಿನಕ್ಕೆ ೧೫೦ ಜನರಿಗೆ ಲಸಿಕೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಸೂಕ್ತ ವ್ಯವಸ್ಥೆ ಮಾಡುವುದರಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಅಧಿಕೃತವಾಗಿ ನೋಂದಣಿ ಮಾಡಿಕೊಂಡಿದ್ದರು ಲಸಿಕೆ ಪಡೆಯಲು ಸಾಧ್ಯವಾಗಲಿಲ್ಲ. ಸುತ್ತಲು ಜನದಟ್ಟಣೆ ಉಂಟಾಗಿತ್ತು. ಇಂತಹ ಸ್ಥಿತಿಯಲ್ಲಿ ಲಸಿಕೆ ಪಡೆಯುವುದು ಸುಲಭದ ಮಾತಲ್ಲ. ಕೂಡಲೇ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ರೂಪಿಸಬೇಕು ಎಂದು ಲಸಿಕೆ ಸಿಗದೆ ನಿರಾಸೆಯಿಂದ ಮನೆಯತ್ತ ಹೆಜ್ಜೆ ಹಾಕುತ್ತಿದ್ದ ಮಹಿಳೆಯೊಬ್ಬರು ಅಭಿಪ್ರಾಯಪಟ್ಟರು.
